Advertisement

ಕೊಹ್ಲಿ ಭರ್ಜರಿಯಾಗಿ ಆಡುತ್ತಿರುವುದು ಟೀಂ ಇಂಡಿಯಾಕ್ಕೆ ಒಳ್ಳೆಯದು: ಮಿಚೆಲ್ ಜಾನ್ಸನ್

08:04 PM Sep 17, 2022 | Team Udayavani |

ಕೋಲ್ಕತ : ಸ್ಟಾರ್ ಬ್ಯಾಟ್ಸ್ ಮ್ಯಾನ್ ವಿರಾಟ್ ಕೊಹ್ಲಿ ಮತ್ತೊಮ್ಮೆ ರನ್‌ಗಳ ನಡುವೆ ಭರ್ಜರಿಯಾಗಿ ಆಡುತ್ತಿರುವುದು ಟೀಂ ಇಂಡಿಯಾಕ್ಕೆ ಒಳ್ಳೆಯ ಸೂಚನೆ ಎಂದು ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಇದನ್ನೂ ಓದಿ: ಟಿ20 ಕ್ರಿಕೆಟ್ ಗೆ ಬಂದಿದೆ ಮತ್ತೊಂದು ನಿಯಮ; ಏನಿದು ಸೂಪರ್ ಸಬ್?

“ಅತ್ಯುತ್ತಮ ಆಟಗಾರ ರನ್ ಗಳಿಸಿ ತಂಡವನ್ನು ಆತ್ಮವಿಶ್ವಾಸದಲ್ಲಿರಿಸಿರುವುದು ಭಾರತಕ್ಕೆ ಒಳ್ಳೆಯದು. ಅವರು ನಾಯಕತ್ವ ವಹಿಸಿಕೊಂಡಾಗ ತಂಡದ ದಿಕ್ಕನ್ನು ಬದಲಾಯಿಸಿದ ಆಟಗಾರ. ಅವರು ರನ್ ಗಳಿಸುತ್ತಿರುವುದು ತಂಡಕ್ಕೆ ಸಂತೋಷ ತರುತ್ತದೆ” ಎಂದು ಜಾನ್ಸನ್ ಎಎನ್ ಐ ಗೆ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್ ಸರಣಿಯಲ್ಲಿ ಅಫ್ಘಾನ್ ವಿರುದ್ಧ ಬಹು ನಿರೀಕ್ಷಿತ 71 ನೇ ಅಂತಾರಾಷ್ಟ್ರೀಯ ಶತಕವನ್ನು ಬಾರಿಸಿದ್ದರು.ಅವರು 92.00 ಸರಾಸರಿಯಲ್ಲಿ 276 ರನ್ ಗಳಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next