Advertisement
ಸುಪ್ರೀಂ ಕೋರ್ಟ್ ತೀರ್ಪಿನಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳದ ರೋಗಿಗಳಿಗೆ ಮಂಗಳೂರಿ ನಲ್ಲಿ ಚಿಕಿತ್ಸೆಗೆ ಅವಕಾಶ ನೀಡಲು ಒಪ್ಪಿತ್ತು. ಅದಕ್ಕಾಗಿ ತನ್ನ ವೆಬ್‌ಸೈಟ್‌ನಲ್ಲಿ ಅರ್ಜಿ ನಮೂನೆಯನ್ನು ಪ್ರಕಟಿಸಿದ್ದು ರೋಗಿಗಳು ಬರುವಾಗ ಆ ಅರ್ಜಿಯಲ್ಲಿ ಕಾಸರಗೋಡು ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಶಿಫಾರಸು ಮಾಡಿ ಸಹಿ ಹಾಕಬೇಕು ಮತ್ತು ಕೋವಿಡ್ 19 ಸೋಂಕಿತರಲ್ಲ ಎನ್ನುವ ಪ್ರಮಾಣ ಪತ್ರ ಸಲ್ಲಿಸಿದರೆ ಮಾತ್ರ ಗಡಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ತೆರಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿತ್ತು.
ದ.ಕ. ಜಿಲ್ಲಾಡಳಿತದ ಷರತ್ತಿನಂತೆ ಕೋವಿಡ್ 19 ಪರೀಕ್ಷೆಯ ಪ್ರಮಾಣ ಪತ್ರ ಅಗತ್ಯವಿದ್ದರೂ ತಲಪಾಡಿ ಗಡಿಯಲ್ಲಿ ಕಾಸರಗೋಡಿನ ಜಿಲ್ಲಾಸ್ಪತ್ರೆಯವರು ನೀಡುತ್ತಿರುವ ಪ್ರಮಾಣಪತ್ರ ಅನುಮಾನಕ್ಕೆ ಎಡೆ ಮಾಡಿದೆ. ಹೃದಯ ಕಾಯಿಲೆಯಿಂದ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದ ರೋಗಿಯೊಬ್ಬರಿಗೆ ಜ್ವರದ ಲಕ್ಷಣ ಕಂಡು ಬಂದಿರುವುದು ಇದಕ್ಕೆ ಕಾರಣ. ಆತನನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಕೋವಿಡ್ ಸೋಂಕಿನ ತಪಾಸಣೆ ನಡೆಸಿ ಮತ್ತೆ ಖಾಸಗಿ ಆಸ್ಪತ್ರೆಗೆ ಮರಳಿ ಕರೆತರಲಾಗಿದೆ. ಈ ಪ್ರಕರಣದ ಬಗ್ಗೆಯೂ ದೂರು ದಾಖಲಾಗಿದೆ. ಆತನಿಗೆ ಕೋವಿಡ್ ಸೋಂಕು ಇರುವ ಬಗ್ಗೆ ದೃಢವಾಗಿಲ್ಲ.