Advertisement
ತಾಲೂಕಿನ ಬೆಕ್ಕ ಗ್ರಾಮದ ಪಿರಿಯಾಪಟ್ಟಲದಮ್ಮ ದೇಗುಲದ ಪೂಜಾರಿ ಮನು(45) ಬೆತ್ತದಿಂದ ಹೊಡೆದು ಮಹಿಳೆಯನ್ನು ಕೊಂದವನು. ಪಾರ್ವತಿ ಅವರ ಪತಿ 18 ವರ್ಷಗಳ ಹಿಂದೆ ಮೃತಪಟ್ಟಿದ್ದರಿಂದ ಆಕೆ ಬೆಕ್ಕ ಗ್ರಾಮದಲ್ಲಿದ್ದ ತನ್ನ ಅಕ್ಕ ಮಂಜುಳಾ ಅವರ ಮನೆಯಲ್ಲಿ ವಾಸವಿದ್ದರು.
Related Articles
Advertisement
ಇದನ್ನೂ ಓದಿ;- 2019ರ ವಿಶ್ವಕಪ್ ಗೆ ಭಾರತ ತಂಡದಲ್ಲಿ ಆ ಮೂವರ ಅಗತ್ಯವಿರಲಿಲ್ಲ: ರವಿ ಶಾಸ್ತ್ರಿ
ಅದರಂತೆ ಪಾರ್ವತಿ ಅವರನ್ನು ಮಂಜುಳಾ ಅವರು ಪಿರಿಯಾಪಟ್ಟಲದಮ್ಮ ದೇಗುಲಕ್ಕೆ ಕರೆದುಕೊಂಡು ಹೋಗಿ ಮನು ಪೂಜಾರಿಯನ್ನು ಭೇಟಿ ಮಾಡಿ ಪೂಜೆ ಮಾಡಿಸಿದರು. ಪೂಜಾರಿ ಮನು ಪುನಃ ನಿಂಬೆ ಹಣ್ಣು ಮಂತ್ರಿಸಿ ಕೊಟ್ಟು ಪಾರ್ವತಿಯವರನ್ನು ಡಿ.7 ರಂದು ಮಂಗಳವಾರ ದೇವರ ಉತ್ಸವವಿದೆ. ಅಂದು ವಿಶೇಷ ಪೂಜೆಯಿದ್ದು ಕರೆದುಕೊಂಡು ಬನ್ನಿ ಎಂದು ಹೇಳಿ ಕಳುಹಿಸಿದ್ದ.
ಅದರಂತೆ ಮಂಗಳವಾರ ಪಾರ್ವತಿಯವರನ್ನು ದೇವಸ್ಥಾನಕ್ಕೆ ಬೆಳಗ್ಗೆ 10 ಗಂಟೆಗೆ ಕರೆದುಕೊಂಡು ಹೋದಾಗ ಪಾರ್ವತಿಗೆ ಶಂಕೆ ಅಂಟಿಕೊಂಡಿದೆ ಬಿಡಿಸುತ್ತೇನೆಂದು ಹೇಳಿ ಬೆತ್ತದ ಕೋಲಿನಿಂದ ಪಾರ್ವತಿಯ ಮೈ, ಕೈಕಾಲು, ತಲೆಗೆ ಹೊಡೆದಿದ್ದು, ಜರ್ಜರಿತಳಾದ ಪಾರ್ವತಿಯನ್ನು 2ದಿನ ಕಳೆದು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ಪಾರ್ವತಿಯ ಮಗಳು ಚೈತ್ರಾ ಶ್ರವಣಬೆಳಗೊಳ ಠಾಣೆಯಲ್ಲಿ ಅರ್ಚಕ ಮನು ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಲು ಒತ್ತಾಯಿಸಿದ್ದಾರೆ. ಎಸ್ಪಿ ಶ್ರೀನಿವಾಸಗೌಡ ಅವರೂ ಠಾಣೆ ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದು ತನಿಖೆ ನಡೆಸಲು ಕ್ರಮ ಕೈಗೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಆಸುನೀಗಿದ ಮಹಿಳೆ
ಪಾರ್ವತಿಗೆ ತಲೆ ಶೂಲೆ ಅಂಟಿಕೊಂಡಿದೆ ಶಂಕೆ ಬಿಡಿಸುತ್ತೇನೆಂದು ಅರ್ಚಕ ಮನು ಬೆತ್ತದ ಕೋಲಿನಿಂದ ಪಾರ್ವತಿಯ ಮೈ, ಕೈಕಾಲು, ತಲೆಗೆ ಹೊಡೆದಿದ್ದು, ಪಾರ್ವತಿ ಜರ್ಜರಿತಳಾಗಿ ಹೋಗಿದ್ದಾಳೆ. ನಿಂಬೆಹಣ್ಣಿನ ರಸ ಕುಡಿಸಿ ಸಂತೈಸಿದರೂ ಸುಸ್ತು ಕಡಿಮೆಯಾಗದೇ ಇದ್ದುದ್ದರಿಂದ ಮನೆಗೆ ಕರೆದೊಯ್ದಿದ್ದಾರೆ.
ಪಾರ್ವತಿ ಅವರಿಗೆ ಸ್ವಲ್ಪವೂ ಗುಣಮುಖವಾಗದೇ ಇದ್ದುದ್ದರಿಂದ ಬುಧವಾರ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದಾಗ ವೈದ್ಯರು ಹಾಸನದ ಹಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದರು. ಹಾಸನದ ಹಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಪಾರ್ವತಿಯನ್ನು ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.