ಸಾರ್ವಜನಿಕವಾಗಿ ಕ್ಷಮೆ ಕೋರಿದ ಸಹಕಾರಿ ಅಧಿಕಾರಿ
ಶಿರಸಿ: ರಾಜ್ಯಮಟ್ಟದ ಸಹಕಾರಿ ಸಪ್ತಾಹದ ಆಚರಣೆ ಮೂರನೇ ದಿನದ ಸಭಾ ಕಾರ್ಯಕ್ರಮಕ್ಕೆ ಸಂಬಂಧಿಸಿ ಅಪಸ್ವರ ಕೇಳಿ ಬಂದಿದೆ. ಸ್ವತಃ ಶಿರಸಿಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಗೈರಾಗುವ ಮೂಲಕ ಅಸಮಧಾನ ಕೂಡ ವ್ಯಕ್ತ ಪಡಿಸಿದರು.
ಸಮಾರಂಭ ಆರಂಭವಾಗುವುದಕ್ಕೂ ಮೊದಲು ಸಹಕಾರ ಇಲಾಖೆಯ ಉಪ ನಿಬಂಧಕರನ್ನು ಸರಕಾರಿ ಪ್ರೋಟೋಕಾಲ್ ನಿರ್ವಹಣೆಯ ವಿಫಲತೆಗೆ ಕಾಂಗ್ರೆಸ್ ಪ್ರಮುಖರು, ಸಹಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಸಭೆಯಲ್ಲಿ ಉಪ ನಿಬಂಧಕ ಮಂಜುನಾಥ ಸಿಂಗ್ ಲೋಪಕ್ಕೆ ಕ್ಷಮೆ ಕೋರಿದರು.
ರಾಜ್ಯ ಮಟ್ಟದ ಸಮಾರಂಭಕ್ಕೆ ರಾಜ್ಯ ಸಹಕಾರಿ ಸಚಿವ ರಾಜಣ್ಣ, ಕಾನೂನು ಸಚಿವ ಎಚ್.ಕೆ.ಪಾಟೀಲ ಸೇರಿದಂತೆ ಅನೇಕ ನಾಯಕರು ಗೈರಾಗಿದ್ದು ಹಲವು ಸಹಕಾರಿಗಳ ಬೇಸರಕ್ಕೂ ಕಾರಣವಾಯಿತು. ರಾಜ್ಯ ಸಮಾವೇಶವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು.