Advertisement
ಮನೆ ಕಟ್ಟುವುದು ಮಧ್ಯಮ ವರ್ಗದ ದೊಡ್ಡ ಕನಸು. ಜೀವನ ಪೂರ್ತಿ ಸ್ವಂತ ಮನೆಯ ಕನಸು ಕಂಡು ಒಂದು ದಿನ ನನಸು ಮಾಡಿಕೊಳ್ಳುತ್ತಾರೆ. ಇದೂ ಒಂಥರಾ ಸಿನಿಮಾ ಇದ್ದಾಗೆ. ನಿರ್ದೇಶಕನ ಕನಸಿನಂತೆ ನಟ,ನಟಿಯರು, ತಂತ್ರಜ್ಞರು ಎಲ್ಲರೂ ದುಡಿಯುವಂತೆ, ನಮ್ಮ ಮನೆ ಕಟ್ಟಲು ಬೇರೆಯವರೂ ಕೆಲಸ ಮಾಡಬೇಕಾಗುತ್ತದೆ.
Related Articles
Advertisement
ತಪ್ಪುಗಳನ್ನು ತಡೆಯಿರಿಮನೆ ಕಟ್ಟುವಾಗ ಸೂರು, ಕಾಂಕ್ರಿಟ್ ಮಾತ್ರ ಮುಖ್ಯ ಎನ್ನುವ ನಂಬಿಕೆ ಇದೆ. ಇದಕ್ಕೆ ಅತಿ ಎನ್ನುವಷ್ಟು ಕಾಳಜಿ ವಹಿಸಿ, ಸಾಮಾನ್ಯವಾಗಿ ದೇವರನ್ನು ನೆನೆದು, ಒಂದು ಸಣ್ಣ ಪೂಜೆಯನ್ನೂ ನೆರವೇರಿಸಿ, ನಂತರವೇ ಕಾಂಕ್ರಿಟ್ ಹಾಕಲಾಗುತ್ತದೆ. ಆದರೆ ಅಷ್ಟೇ ಮುಖ್ಯವಾದ ಕಾಲಂ ಕಾಂಕ್ರಿಟ್ ಅನ್ನು ಅನೇಕರು ಅಷ್ಟೇ ಕಾಳಜಿಯಿಂದ ಹಾಕುವುದಿಲ್ಲ. ಸೂರಿನ ಕಾಂಕ್ರಿಟ್‌ಗಿಂತ ಹೆಚ್ಚು ಭಾರ ಹೊರುವ ಕಂಬಗಳಿಗೆ ನಾವು ಸಾಮಾನ್ಯವಾಗೇ ಹೆಚ್ಚುವರಿ ಸಿಮೆಂಟ್ ಹೊಂದಿರುವ ಮಿಶ್ರಣವನ್ನು ಹಾಕುತ್ತೇವೆ. ಆರ್ ಸಿ ಸಿ ರೂಫಿಗೆ 1:2:4 ಅಂದರೆ ಒಂದು ಪಾಲು ಸಿಮೆಂಟಿಗೆ ಎರಡು ಪಾಲು ಮರಳು ಹಾಗೂ ನಾಲ್ಕು ಪಾಲು ಜೆಲ್ಲಿ ಕಲ್ಲುಗಳನ್ನು ಹಾಕಿದರೆ, ಕಾಲಂಗಳಿಗೆ 1 : 1.5 : 3 ಅಂದರೆ ಒಂದು ಪಾಲು ಸಿಮೆಂಟಿಗೆ ಒಂದೂವರೆ ಪಾಲು ಮಾತ್ರ ಮರಳು ಮಿಶ್ರಣಮಾಡಿ ಅದಕ್ಕೆ ಕೇವಲ ಮೂರು ಪಾಲು ಜೆಲ್ಲಿಕಲ್ಲುಗಳನ್ನು ಬೆರೆಸುತ್ತೇವೆ. ಅದರಲ್ಲೂ ನಮ್ಮ ಮನೆ ಎರಡು ಮೂರು ಮಹಡಿಗಳಿದ್ದರೆ ಮತ್ತೂ ಹೆಚ್ಚುವರಿಯಾಗಿ ಸಿಮೆಂಟ್ ಬಳಕೆ ಆಗುತ್ತದೆ. ಇಲ್ಲವೇ ಹೆಚ್ಚು ಭಾರ ಹೊರುವ ಸಾಮರ್ಥ್ಯ ಇರುವ ವಿಶೇಷ ಸಿಮೆಂಟ್ ಅನ್ನು ಬಳಸಲಾಗುತ್ತದೆ. ನುರಿತ ಗಾರೆಯವರಿಗೆ ಹೀಗೆ ಬದಲಾಗುವ ಅನುಪಾತ – ಮಿಶ್ರಣದಲ್ಲಿ ಸಿಮೆಂಟ್ ಎಷ್ಟು ಇರಬೇಕು ಹಾಗೂ ಮರಳು ಜೆಲ್ಲಿಕಲ್ಲು ಎಷ್ಟಿರಬೇಕು ಎಂಬುದರ ಲೆಕ್ಕ ಹಾಕುವುದು ಕಷ್ಟ ಆಗದಿದ್ದರೂ, ಅವರು ಅವಲಂಬಿಸಿರುವ ಕೂಲಿಯವರಿಗೆ ಮಿಶ್ರಣ ಸರಿಯಾಗಿ ಗೊತ್ತಾಗದೆ ತಪ್ಪುಗಳಾಗಬಹುದು. ಜೊತೆಗೆ, ಸೂರಿಗೆ ಸ್ವಲ್ಪ ಕಡಿಮೆ ಸಿಮೆಂಟ್ ಬಣ್ಣ ಇರುವ ತೆಳು ಬೂದು ವರ್ಣದ ಸಿಮೆಂಟ್ ಬಳಸಿ, ಕಾಲಂ ಗಳಿಗೆ ಗಾಢ ವರ್ಣದ ಸಿಮೆಂಟ್ ಬಳಸಿದರೆ, ನುರಿತ ಗಾರೆಯವರಿಗೂ ಮಿಶ್ರಣದಲ್ಲಿ ಎಷ್ಟು ಸಿಮೆಂಟ್ ಇದೆ ಎಂದು ಹೇಳಲು ಆಗುವುದಿಲ್ಲ. ಹೀಗಾಗುವುದನ್ನು ತಪ್ಪಿಸಲು ನಾವು ಕಡ್ಡಾಯವಾಗಿ ಒಂದು ಕಡೆ ಮಿಶ್ರಣದ ಬಗ್ಗೆ ಬರೆದಿಡುವುದು ಉತ್ತಮ. ಇದಕ್ಕೆಂದೇ ಸೈಟಿನಲ್ಲಿ ಒಂದು ನೋಟ್ ಬುಕ್ ಇಟ್ಟು, ದಿನನಿತ್ಯ ಮಾಡಿದ ವಿವಿಧ ಕೆಲಸಗಳಲ್ಲಿ ಬಳಸಲಾದ ವಿವಿಧ ಬಗೆಯ ಸಿಮೆಂಟ್ ಮಿಶ್ರಣವನ್ನು ದಾಖಲಿಸಬೇಕು. ಪ್ರತಿದಿನವೂ ಎಂಜಿನಿಯರ್ ಇಲ್ಲವೇ ಮನೆಯ ಮಾಲೀಕರು ನಿವೇಶನದಲ್ಲೇ ಉಳಿಯಲು ಆಗದ ಕಾರಣ, ಅವರಿಲ್ಲದ ವೇಳೆಯಲ್ಲಿ ಆದ ಕೆಲಸದ ಗುಣಮಟ್ಟವನ್ನು ಪರೀಕ್ಷಿಸಲು ಈ ಪುಸ್ತಕ ಅನುಕೂಲಕರ. ಮನೆ ಕಟ್ಟುವಾಗ ಈ ಮಾದರಿಯಾಗಿ ಇಡೀ ದಿನದ ಲೆಕ್ಕ ಇಡುವುದರಿಂದ ಸಣ್ಣ ಪುಟ್ಟ ಕಳ್ಳತನಗಳು ಆಗುವುದು, ಮರಳು ಸಿಮೆಂಟ್ ಪೋಲಾಗುವುದು ಮುಂತಾದುವುಗಳನ್ನು ತಡೆಯಬಹುದು. ಎಂಟು, ಹತ್ತು ಸಾವಿರ ಸಂಬಳ ಬೇಡುವ ಈ ಹುದ್ದೆ, ಬಹಳ ಈ ಜವಾಬಾœರಿಯುತ, ದುಬಾರಿ ಎಂದೆನಿಸಿದರೂ, ನಮ್ಮ ದೇಶದ ಪರಿಸ್ಥಿತಿಯಲ್ಲಿ ಅದಕ್ಕಿಂತ ಎರಡು ಪಾಲು ನಾವು ಲಾಭ ಪಡೆಯಬಹುದು ಎಂಬುದು ಗೊತ್ತಿರಲಿ. ಕೆಲಸದ ಗುಣಮಟ್ಟ ನಿಯಂತ್ರಣದಲ್ಲಿದೆ ಎಂಬ ನಂಬಿಕೆಯಲ್ಲಿ ಮನಸ್ಸೂ ನಿರಾಳವಾಗಿರುತ್ತದೆ. ಮುಂದೆಂದಾದರೂ ಸಣ್ಣಪುಟ್ಟ ಬಿರುಕುಗಳು, ನೀರು ಸೋರುವುದು ಇತ್ಯಾದಿ ಆದರೂ, ನಮಗೆ ರೈಟರ್‌ಗಳು ಇಟ್ಟ ಲೆಕ್ಕಾಚಾರ ನೊಡಿದರೆ, ಸರಿಯಾಗಿ ಸಿಮೆಂಟ್ ಮಿಶ್ರಣ ಹಾಕಿರುವುದು ಖಾತರಿ ಆಗಿ ನಾವು ಈ ನ್ಯೂನತೆಗಳ ಬಗ್ಗೆ ವಿಪರೀತ ತಲೆ ಕೆಡಿಸಿಕೊಳ್ಳದೆ, ಸುಲಭ ಪರಿಹಾರಗಳನ್ನು ಪಡೆದುಕೊಳ್ಳಲು ಸಹಾಯಕಾರಿ. ಇಂದಿನ ವೇಗದ ದಿನಗಳಲ್ಲಿ, ನಿನ್ನೆ ಮೊನ್ನೆ ಏನು ಆಯಿತು ಎಂಬುದೇ ನಮಗೆ ಸರಿಯಾಗಿ ನೆನಪಿರುವುದಿಲ್ಲ. ಹಾಗಾಗಿ, ನಮ್ಮ ಮನೆ ಕಟ್ಟಬೇಕಾದರೆ, ಪಾಯದಿಂದ ಹಿಡಿದು ಸೂರಿನವರೆಗೂ, ಮುಖ್ಯವಾಗಿ ಫಿನಿಶಿಂಗ್ ವೇಳೆಯಲ್ಲಿ ವಿವಿಧ ಮಿಶ್ರಣಗಳನ್ನು ದಾಖಲಿಸಿಟ್ಟರೆ, ತೊಂದರೆ ಆಗುವುದು ತಪ್ಪುತ್ತದೆ. ಲೆಕ್ಕ ಬರೆದಿಡುತ್ತಾರೆ ಎಂಬುದು ಗೊತ್ತಾದರೆ, ಸಾಮಾನ್ಯವಾಗಿ ಕಾಟಾಚಾರಕ್ಕೆ ಕೆಲಸ ಮಾಡುವವರೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಾರೆ. ಬ್ರಿಟಿಷ್ ಆಳ್ವಿಕೆ ಕೊಡುಗೆ “ರೈಟರ್’
ಸಾಮಾನ್ಯ ಇಂಗ್ಲೀಷ್‌ನಲ್ಲಿ ಬರಹಗಾರರಿಗೆ – ಸಾಹಿತಿಗಳಿಗೆ ರೈಟರ್ ಎನ್ನುತ್ತಾರೆ. ಕಟ್ಟಡ ಹಾಗೂ ಇತರೆ ಕಾಮಗಾರಿಗಳ ಮಟ್ಟಿಗೆ “ರೈಟರ್’ ಎಂದರೆ ನಿವೇಶನದಲ್ಲಿ ಇಡೀ ದಿನದಲ್ಲಿ ಆಗುವ ಕಾರ್ಯದ ಲೆಕ್ಕ ಬರೆದಿಡುವವನು ಎಂದೇ ಅರ್ಥ ಬರುತ್ತದೆ. ಈ ರೈಟರ್‌ಗೆ ಹೆಚ್ಚಿನ ತಾಂತ್ರಿಕ ತರಬೇತಿ ಇರಬೇಕು ಎಂದೇನೂ ಇಲ್ಲ. ಸಾಮಾನ್ಯವಾಗಿ ಈಗಿನ ಕಾಲದಲ್ಲಿ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿರುವ ಯುವಕರು ಈ ಕಾರ್ಯಕ್ಕೆ ನಿಯೋಜಿಸಬಹುದು. ಈ ಹಿಂದೆ ಬ್ರಿಟೀಷರ ಕಾಲದಲ್ಲಿ ಕಟ್ಟಿದ ಕಟ್ಟಡಗಳು, ಸೇತುವೆಗಳು ಇಂದಿಗೂ ಎಷ್ಟು ಗಟ್ಟಿಮುಟ್ಟಾಗಿವೆ ಎಂಬುದು ನಮಗೆಲ್ಲ ತಿಳಿದೇ ಇದೆ. ಆಗಿನ ಕಾಲದ ಇಂಗ್ಲೀಷ್ ಎಂಜಿನಿಯರ್‌ಗಳಿಗೆ ದೇಶಿ ಭಾಷೆ ಅಷ್ಟಾಗಿ ಬರುತ್ತಿಲ್ಲದಿದ್ದರೂ, ದೇಸಿ ಕುಶಲ ಕರ್ಮಿಗಳನ್ನು ಬಳಸಿ, ಅದ್ಭುತ ಕಾಮಗಾರಿಗಳನ್ನು ಮಾಡಲು ಆಗಿದ್ದೇ ಈ “ರೈಟರ್’ಗಳ ಸಹಾಯದಿಂದ. ಆರ್ಕಿಟೆಕ್ಟ್ ಎಂಜಿನಿಯರ್‌ಗಳು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಹೋಗುವುದೇ ಇವರ ಮುಖ್ಯ ಕರ್ತವ್ಯ ಆಗಿರುತ್ತಿತ್ತು. ಆ ಮೂಲಕ ಎಲ್ಲಕ್ಕೂ ಲೆಕ್ಕ ಸುಲಭದಲ್ಲಿ ಸಿಗುವಂತಾಗಿ, ಕಟ್ಟಡಗಳಲ್ಲಿನ ಗುಣಮಟ್ಟ ಉತ್ತಮವಾಗಿರುತ್ತಿತ್ತು. ಹೆಚ್ಚಿನ ಮಾಹಿತಿಗೆ -98441 32826
– ಆರ್ಕಿಟೆಕ್ಟ್ ಕೆ. ಜಯರಾಮ್