ವಾಷಿಂಗ್ಟನ್: ಅಮೆರಿಕದ ಮಿಸಿಸಿಪ್ಪಿ ಮತ್ತು ಅಲ್ಬಾಮಾ ಪ್ರಾಂತ್ಯಗಳಲ್ಲಿ ಶುಕ್ರವಾರ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ ಮಕ್ಕಳು ಸೇರಿದಂತೆ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ.
ಭೀಕರ ಗಾಳಿಯ ಹೊಡೆತಕ್ಕೆ ಅನೇಕ ಕಟ್ಟಡಗಳು ಧರಾಶಾಯಿಯಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
“ಮಿಸಿಸಿಪ್ಪಿ ಪ್ರಾಂತ್ಯದ ಗ್ರಾಮೀಣ ಪ್ರದೇಶವಾದ ಸಿಲ್ವಿರ್ ಸಿಟಿ ಮತ್ತು ರೋಲಿಂಗ್ ಫೋರ್ಕ್ ಪಟ್ಟಣ ಹಾಗೂ ಜಾಕ್ಸನ್ ನಗರದ ಈಶಾನ್ಯ ಪ್ರದೇಶದಲ್ಲಿ ಹಲವು ಕಟ್ಟಡಗಳು ನೆಲಸಮಗೊಂಡಿವೆ.
ಗಂಟೆಗೆ ಸುಮಾರು 70 ಮೈಲು ವೇಗದಲ್ಲಿ ಸುಂಟರಗಾಳಿ ಬೀಸಿದೆ ಎಂದು ಅಮೆರಿಕದ ರಾಷ್ಟೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Related Articles
ಇದನ್ನೂ ಓದಿ: ಇಂಟೆಲ್ ಸಹ ಸಂಸ್ಥಾಪಕ ಗಾರ್ಡನ್ ಮೂರ್ ನಿಧನ