Advertisement

ಭಾರತದ ಎಸ್ಯಾಟ್‌ ಪರೀಕ್ಷೆಯಿಂದ ವ್ಯೋಮ ಕೇಂದ್ರಕ್ಕೆ ಅಪಾಯ : ನಾಸಾ ಭೀತಿ

09:00 AM Apr 03, 2019 | Sathish malya |

ವಾಷಿಂಗ್ಟನ್‌ : ಭಾರತದ ಎ-ಸ್ಯಾಟ್‌ ಪರೀಕ್ಷೆಯನ್ನು ನಾಸಾ ಅತ್ಯಂತ ಘೋರ ಮತ್ತು ಭಯಾನಕ ಎಂದು ಹೇಳಿ ತನ್ನ ಅಸಮಾಧಾನ, ಭಯವನ್ನು ವ್ಯಕ್ತಪಡಿಸಿದೆ.

Advertisement

ಭಾರತದ ತನ್ನ ಸ್ಯಾಟಲೈಟ್‌ ನಿಗ್ರಹ ಕ್ಷಿಪಣಿಯನ್ನು (ಮಿಶನ್‌ ಶಕ್ತಿ) ಪರೀಕ್ಷಿಸುವಲ್ಲಿ ತನ್ನದೇ ಉಪಗ್ರಹವನ್ನು ಹೊಡೆದುರುಳಿಸಿ 400 ಚೂರುಗಳನ್ನು ಮಾಡುವ ಮೂಲಕ ಭೂ ಕಕ್ಷೆಯಲ್ಲಿ ಅವಶೇಷಗಳ ರಾಶಿ ಹಾಕಿದ್ದು ಇದರಿಂದ ಅಂತಾರಾಷ್ಟ್ರೀಯ ವ್ಯೋಮ ಕೇಂದ್ರಕ್ಕೆ (ಐಎಸ್‌ಎಸ್‌ ಗೆ) ಅಪಾಯ ಉಂಟಾಗಿದೆ ಎಂದು ನಾಸಾ ಹೇಳಿದೆ.

ಭಾರತ ಹೊಡೆದುರುಳಿಸಿದ ತನ್ನ ಉಪಗ್ರಹದ 60 ಚೂರುಗಳನ್ನು ಈ ತನಕ ನಾವು ಪತ್ತೆ ಹಚ್ಚಿದ್ದೇವೆ; ಇವುಗಳಲ್ಲಿ 24 ಚೂರುಗಳು ಐಎಸ್‌ಎಸ್‌ ಅಪೋಜಿಯ ಮೇಲಿನಿಂದ ಹೋಗಿವೆ ಎಂದು ನಾಸಾ ಆಡಳಿತಗಾರ ಜಿಮ್‌ ಬ್ರಿಡೆನ್‌ಸ್ಟೈನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next