Advertisement

ಮಿಶನ್‌ ಶಕ್ತಿ ಭಾಷಣ : ಚುನಾವಣಾ ಆಯೋಗದಿಂದ ಪ್ರಧಾನಿ ಮೋದಿಗೆ ಕ್ಲೀನ್‌ ಚಿಟ್‌

10:00 AM Mar 30, 2019 | Sathish malya |

ಹೊಸದಿಲ್ಲಿ : ಮಿಶನ್‌ ಶಕ್ತಿ ಕುರಿತಾಗಿ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಟಿವಿ ಮತ್ತು ರೇಡಿಯೋದಲ್ಲಿ ಭಾಷಣ ಮಾಡಿರುವಲ್ಲಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ ಮತ್ತು ಆ ಮೂಲಕ ಅದು ಪ್ರಧಾನಿ ಮೋದಿಗೆ ಕ್ಲೀನ್‌ ಚಿಟ್‌ ನೀಡಿದೆ.

Advertisement

ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಎಲ್ಲಿಯೂ ತಮ್ಮ ಪಕ್ಷವನ್ನು ಉಲ್ಲೇಖೀಸಿಲ್ಲ ಮತ್ತು ತನ್ನ ಪರವಾಗಿ ಮತ ಹಾಕುವಂತೆ ಮತದಾರರನ್ನು ಕೇಳಿಕೊಂಡಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಪ್ರಧಾನಿ ಮೋದಿ ಅವರು ಕಳೆದ ಬುಧವಾರ ದೇಶವನ್ನು ಉದ್ದೇಶಿಸಿ ಟಿವಿ ಮತ್ತು ರೇಡಿಯೋದಲ್ಲಿ ಮಾಡಿದ್ದ ಭಾಷಣದಲ್ಲಿ ಭಾರತವು ಉಪಗ್ರಹ ನಿಗ್ರಹ ಕ್ಷಿಪಣಿಯನ್ನು (ಎ-ಸ್ಯಾಟ್‌) ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಹೇಳಿದ್ದರಲ್ಲದೆ ಈ ಸಾಧನೆ ಮಾಡಿರುವ ಅಮೆರಿಕ, ರಶ್ಯ ಮತ್ತು ಚೀನದ ಬಳಿಕದಲ್ಲಿ ವಿಶ್ವದ ನಾಲ್ಕನೇ ದೇಶವಾಗಿ ಭಾರತ ಮೂಡಿ ಬಂದಿದ್ದು ಈ ಅಮೋಘ ಸಾಧನೆ ಮಾಡಿರುವ ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳು ಅಭಿನಂದನಾರ್ಹರು ಎಂದು ಪ್ರಶಂಸಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next