Advertisement

PFI ಜತೆಗೆ ಬ್ಯಾನ್ ಆದ ಇತರ ಸಂಘಟನೆಗಳು ಯಾವುದು? ಕಚೇರಿಯಲ್ಲಿ ದೊರೆತ ಪುರಾವೆ ಬಹಿರಂಗ

11:58 AM Sep 28, 2022 | Team Udayavani |

ನವದೆಹಲಿ: ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಎನ್ ಐಎ ಮತ್ತು ಜಾರಿ ನಿರ್ದೇಶನಾಲಯ ಜಂಟಿಯಾಗಿ ಪಿಎಫ್ ಐ ಕಚೇರಿಗಳ ಮೇಲೆ ದಾಳಿ ನಡೆಸಿದ ಬಳಿಕ ಬುಧವಾರ (ಸೆ.28) ಕೇಂದ್ರ ಗೃಹ ಸಚಿವಾಲಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಐದು ವರ್ಷಗಳ ಕಾಲ ನಿಷೇಧಿಸಿ ಅಧಿಸೂಚನೆ ಹೊರಡಿಸಿದೆ. ಈ ಸಂದರ್ಭದಲ್ಲಿ ಪಿಎಫ್ ಐ ಕಚೇರಿ, ಮುಖಂಡರ ನಿವಾಸದ ಮೇಲೆ ದಾಳಿ ನಡೆಸಿದ ವೇಳೆ ತನಿಖಾ ಸಂಸ್ಥೆಗಳಿಗೆ ಲಭ್ಯವಾದ ಸಾಕ್ಷ್ಯಾಧಾರಗಳ ಮಾಹಿತಿಯನ್ನು ಇಂಡಿಯಾ ಟುಡೇ ಬಹಿರಂಗಪಡಿಸಿದೆ.

Advertisement

ಇದನ್ನೂ ಓದಿ:ವಿಶ್ವ ಕೆಡೆಟ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಸಾಧನೆ: ಚಾರ್ವಿಗೆ 5 ಲಕ್ಷ ನಗದು ಬಹುಮಾನ ಘೋಷಣೆ

ಬಾಂಬ್ ತಯಾರಿಕೆ ಕೈಪಿಡಿ:

ಪಿಎಫ್ ಐ ಕಚೇರಿ ಮೇಲೆ ದಾಳಿ ನಡೆಸಿದ ವೇಳೆ ಬಾಂಬ್ ತಯಾರಿಸುವುದು ಹೇಗೆ ಎಂಬ ಕೈಪಿಡಿ, ಮಾರಕಾಸ್ತ್ರ ಸೇರಿದಂತೆ ಹಲವಾರು ವಸ್ತುಗಳು ಪತ್ತೆಯಾಗಿರುವುದಾಗಿ ಎನ್ ಐಎ ತಿಳಿಸಿದೆ. ಕಳೆದ ಎರಡು ವಾರಗಳಲ್ಲಿ ದೇಶಾದ್ಯಂತ ಎನ್ ಐಎ ಮತ್ತು ಜಾರಿ ನಿರ್ದೇಶನಾಲಯ ದಾಳಿ ನಡೆಸಿ ಸುಮಾರು 300ಕ್ಕೂ ಅಧಿಕ ಪಿಎಫ್ ಐ ಮುಖಂಡರು, ಕಾರ್ಯಕರ್ತರನ್ನು ಬಂಧಿಸಿತ್ತು.

ಪಿಎಫ್ ಐ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿದೆ ಎಂಬುದಕ್ಕೆ ಪುರಾವೆಯಾಗಿ ಐಇಡಿ (ಸುಧಾರಿತ ಸ್ಫೋಟಕ ಉಪಕರಣ) ತಯಾರಿಸುವುದು ಹೇಗೆ ಎಂಬ ಕೈಪಿಡಿ ಉತ್ತರಪ್ರದೇಶದ ಬಾರಾಬಂಕಿಯ ಪಿಎಫ್ ಐ ಮುಖಂಡ ಮೊಹಮ್ಮದ್ ನದೀಮ್ ಬಳಿ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.

Advertisement

ಅಷ್ಟೇ ಅಲ್ಲ ಸುಲಭವಾಗಿ ಲಭ್ಯವಾಗುವ ವಸ್ತುಗಳಿಂದ ಐಇಡಿ ತಯಾರಿಸುವುದು ಹೇಗೆ ಎಂಬ ಕೈಪಿಡಿಯನ್ನು ಉತ್ತರಪ್ರದೇಶದ ಖಾದ್ರಾ ಪಿಎಫ್ ಐ ಮುಖಂಡ ಅಹ್ಮದ್ ಬೇಗ್ ನದ್ವಿಯಿಂದ ವಶಪಡಿಸಿಕೊಳ್ಳಲಾಗಿದೆ.

ಮಹಾರಾಷ್ಟ್ರ ಪಿಎಫ್ ಐ ಉಪಾಧ್ಯಕ್ಷನಿಂದ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡುವ 2047 ಮಿಷನ್ ಗೆ ಸಂಬಂಧಿಸಿದ ಡಾಕ್ಯುಮೆಂಟ್, ಸಿ.ಡಿ., ಐಸಿಸ್ ವಿಡಿಯೋಗಳನ್ನು ಹೊಂದಿರುವ ಪೆನ್ ಡ್ರೈವ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು ಎಂದು ತನಿಖಾ ಸಂಸ್ಥೆ ತಿಳಿಸಿದೆ.

ತಮಿಳುನಾಡಿನ ರಾಮನಾಡ್ ಜಿಲ್ಲೆಯ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ)ದ ಜಿಲ್ಲಾಧ್ಯಕ್ಷ ಬರ್ಕಾತ್ ವುಲ್ಲಾ ನಿವಾಸದಲ್ಲಿ ಎರಡು ಎಲ್ ಎಚ್ ಆರ್-80 ವಶಪಡಿಸಿಕೊಳ್ಳಲಾಗಿದೆ. ಈ ಎಲ್ ಎಚ್ ಆರ್-80 ರೆಡಿಯೋ ಮತ್ತು ಜಿಪಿಎಸ್ ನೊಂದಿಗೆ ನ್ಯಾವಿಗೇಟ್ ಆಗಿರುವುದಾಗಿ ಹೇಳಿದೆ. ಬೆಂಗಳೂರಿನ ಪಿಎಫ್ ಐ ಮುಖಂಡ ಶಾಹೀದ್ ಖಾನ್ ನಿವಾಸದಲ್ಲಿ ನಗದನ್ನು ವಶಪಡಿಸಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ವರದಿಯಲ್ಲಿ ಉಲ್ಲೇಖಿಸಿದೆ.

1,300 ಕ್ರಿಮಿನಲ್ ಕೇಸ್ ದಾಖಲು:

ದೇಶದ 17ಕ್ಕೂ ಅಧಿಕ ರಾಜ್ಯಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿ ಸಂಘಟನೆಗಳು ಸಕ್ರಿಯವಾಗಿದ್ದು, ಪಿಎಫ್ ಐ ಮತ್ತು ಸಹವರ್ತಿ ಸಂಘಟನೆಗಳ ವಿರುದ್ಧ ಎನ್ ಐಎ ಮತ್ತು ಪೊಲೀಸರು ಸುಮಾರು 1,300ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದೆ.

ಪಿಎಫ್ ಐ ಜತೆಗೆ ಬ್ಯಾನ್ ಆದ ಇತರ ಸಂಘಟನೆಗಳು:

ಕೇಂದ್ರ ಗೃಹ ಸಚಿವಾಲಯ ಪಿಎಫ್ ಐ ಹಾಗೂ ಸಹವರ್ತಿ ಸಂಘಟನೆಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿದ್ದು, ಇತರ ಸಂಘಟನೆಗಳ ವಿವರ ಹೀಗಿದೆ: ರಿಹಾಬ್ ಇಂಡಿಯಾ ಫೌಂಡೇಶನ್ (ಆರ್ ಐಎಫ್), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ ಐ), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ), ನ್ಯಾಷನಲ್ ಕಾನ್ಫಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಝೇಶನ್ (ಎನ್ ಸಿಎಚ್ ಆರ್ ಒ), ನ್ಯಾಷನಲ್ ವುಮೆನ್ಸ್ ಫ್ರಂಟ್, ಜ್ಯೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ಕೇರಳದ ರಿಹಾಬ್ ಫೌಂಡೇಶನ್.

Advertisement

Udayavani is now on Telegram. Click here to join our channel and stay updated with the latest news.

Next