ಬೆಂಗಳೂರು: ಬಿಜೆಪಿ ವರಿಷ್ಠರಿಗೆ ರಾಜ್ಯದ ರಾಜಕೀಯ ಪರಿಸ್ಥಿತಿ ವಿವರಿಸಿರುವೆ. ಕರ್ನಾಟಕಕ್ಕೆ ಆಗಾಗ ಬರು ವಂತೆ ಪ್ರಧಾನಿ ನರೇಂದ್ರ ಮೋದಿ ಅವ ರಿಗೆ ಮನವಿ ಮಾಡಿರುವೆ. ಮುಂದಿನ ಚುನಾವಣೆಯಲ್ಲಿ 140 ಕ್ಷೇತ್ರಗಳಲ್ಲಿ ಗೆಲ್ಲಿಸಿಕೊಡುವ ಭರವಸೆ ನೀಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣೆ ಸಮಿತಿಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಅಭಿನಂ ದನೆ ಸಲ್ಲಿಸಲು ಹೋಗಿದ್ದೆ ಎಂದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ , ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಜತೆ ಸುದೀರ್ಘವಾಗಿ ಚರ್ಚಿಸಿರುವೆ. ಈ ಸಂದರ್ಭದಲ್ಲಿ ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ಅರಿಯುವ ಪ್ರಯತ್ನವನ್ನು ಅವರು ಮಾಡಿದರು ಎಂದು ಹೇಳಿದರು.
ಸೆ.2ರಂದು ಮೋದಿ ಮಂಗಳೂರಿಗೆ ಬಂದಾಗ ಲಕ್ಷಾಂತರ ಜನ ಸೇರಿಸಿ ದೊಡ್ಡ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳಿದ ಬಿಎಸ್‌ವೈ, ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದೇವೆ. ಜನ ಆಶೀರ್ವಾದ ಮಾಡುವ ವಿಶ್ವಾಸ ಇದೆ. ಮೋದಿಯವರೂ ಆಗಾಗ ರಾಜ್ಯಕ್ಕೆ ಭೇಟಿ ನೀಡಲು ಒಪ್ಪಿದ್ದಾರೆ.
ನಡ್ಡಾ ಅವರಲ್ಲೂ ತಿಂಗಳಿಗೊಮ್ಮೆ ಒಂದೊಂದು ಕಾರ್ಯಕ್ರಮಕ್ಕೆ ಬರ ಬೇಕೆಂದು ವಿನಂತಿಸಿರುವೆ. ಅವರೂ ಒಪ್ಪಿಕೊಂಡಿದ್ದಾರೆ. ನಾನು, ಮುಖ್ಯ ಮಂತ್ರಿ, ಸಚಿವರು ಎಲ್ಲರೂ ಸೇರಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇವೆ. ಕಾಂಗ್ರೆಸ್‌ಗೆ ಅವಕಾಶ ಕೊಡದೆ ಬಿಜೆಪಿ ಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ತಿಳಿಸಿದರು.
ಸರಕಾರದ ಮೇಲೆ ಶೇ. 40 ಕಮಿಷನ್ ಆರೋಪ ವಿಷಯದಲ್ಲಿ ಮೂರ್ಖರು ಮಾತನಾಡುತ್ತಾರೆ. ಯಾರೋ ಒಬ್ಬನಿಗೆ ಹೇಳಿಕೊಟ್ಟು ಮಾತನಾಡಿಸಿದ ತತ್‌ಕ್ಷಣ ಸುಳ್ಳು ಸತ್ಯ ಆಗದು. ಲೋಕಾಯುಕ್ತಕ್ಕೆ ಬೇಕಾದರೆ ದೂರು ಕೊಟ್ಟು ತನಿಖೆ ಮಾಡಿಸಲಿ, ಅಭ್ಯಂತರವಿಲ್ಲ ಎಂದರು.
ವಿಧಾನ ಮಂಡಲ ಅಧಿವೇಶನದಲ್ಲಿ ಸರಕಾರ ತಕ್ಕ ಉತ್ತರ ನೀಡಲಿದೆ. ಅವೆಲ್ಲವೂ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಸ್ಪಷ್ಟಪಡಿಸಿದರು.
ಸರಕಾರದ ಮೇಲೆ ಶೇ. 40 ಕಮಿಷನ್ ಆರೋಪಕ್ಕೆ ಆಧಾರವೇ ಇಲ್ಲ. ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡಬಾರದು. ದಾಖಲೆ ಗಳಿದ್ದರೆ ಉನ್ನತ ತನಿಖಾ ಸಮಿತಿಗಳ ಮುಂದೆ ಹಾಜರುಪಡಿಸಲಿ. ಅದು ಬಿಟ್ಟು ಮುನಿರತ್ನ ಹಾಗೆ ಮಾಡು ತ್ತಾನೆ, ಬೈರತಿ ಬಸವರಾಜ ಹೀಗೆ ಮಾಡುತ್ತಾನೆ ಅಂತಾ ಸಚಿವರ ಬಗ್ಗೆ, ಶಾಸಕರ ಬಗ್ಗೆ ಹೇಳುವುದು ಎಷ್ಟು ಸಮಂಜಸ?
– ಬೈರತಿ ಬಸವರಾಜ್, ನಗರಾಭಿವೃದ್ಧಿ ಸಚಿವ