Advertisement

ಕಾಣೆಯಾಗಿದ್ದ ವಿಶೇಷ ಚೇತನ ಬಾಲಕ ಹಳ್ಳದಲ್ಲಿ ಪತ್ತೆ

10:07 AM Nov 30, 2021 | Team Udayavani |

ಮುದ್ದೇಬಿಹಾಳ: ರವಿವಾರ ಮದ್ಯಾಹ್ನ 2 ಗಂಟೆಯಿಂದ ಕಾಣೆಯಾಗಿದ್ದ 11 ವರ್ಷದ ವಿಶೇಷ ಚೇತನ ಬಾಲಕ ಸಂತೋಷ ಮಾದರ ಗ್ರಾಮದ ಪಕ್ಕದ ಹಳ್ಳದಲ್ಲಿ ಕುಳಿತ ಸ್ಥಿತಿಯಲ್ಲಿ ಸೋಮವಾರ ಪತ್ತೇ ಆಗಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಬನೋಶಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

Advertisement

ಮದ್ಯಾಹ್ನದಿಂದ ಕಾಣೆಯಾಗಿದ್ದ ಈತನಿಗಾಗಿ ಪಾಲಕರು ಎಲ್ಲಾ ಕಡೆ ಹುಡುಕಾಡಿದ್ದರು. ಈತನ ಎಲ್ಲಾದರೂ ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಕರೆತರಲು ಅಥವಾ ಮಾಹಿತಿ ನೀಡಲು ಆತನ ಭಾವಚಿತ್ರ ಸಮೇತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಸೋಮವಾರ ಮದ್ಯಾಹ್ನ ಗ್ರಾಮದ ಪಕ್ಕದ ಹಳ್ಳದ ಕಡೆ ಆಕಸ್ಮಿಕವಾಗಿ ಹೋಗಿದ್ದ ಯುವಕರಿಬ್ಬರ ಕಣ್ಣಿಗೆ ಬಾಲಕ ಬಿದ್ದಿದ್ದಾನೆ. ಕೂಡಲೇ ಪಾಲಕರನ್ನು ಸ್ಥಳಕ್ಕೆ ಕರೆಸಿ ಹಳ್ಳದ ನೀರಲ್ಲಿ ತಲೆ ಮಾತ್ರ ಕಾಣುವಂತೆ ಕುಳಿತಿದ್ದ ಆತನನ್ನು ಉಪಾಯದಿಂದ ಮೇಲೆ ಕರೆತಂದಿದ್ದಾರೆ.

ಬಾಲಕ ರಾತ್ರಿಯಿಡಿ ಹಳ್ಳದ ನೀರಲ್ಲಿ ಕುಳಿತು, ತನ್ನ ಸುತ್ತಲೂ ಇದ್ದ ಹಳ್ಳದ ಕೆಸರನ್ನು ದಂಡೆಯ ಮೇಲೆ ಎರಚಿ ತನ್ನ ಸುತ್ತಲೂ ಹೊಂಡವೊಂದನ್ನು ನಿರ್ಮಿಸಿಕೊಂಡಿದ್ದ. ಇನ್ನೂ ಸ್ವಲ್ಪ ಸಮಯ ಅಲ್ಲೇ ಬಿಟ್ಟಿದ್ದರೆ ಹಳ್ಳದ ನೀರಲ್ಲಿ ಮುಳುಗುವ ಸಂಭವವಿತ್ತು, ಸದ್ಯ ಬಾಲಕ ಆರೋಗ್ಯವಾಗಿದ್ದು ಪಾಲಕರ ಆಸರೆಯಲ್ಲಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next