ವಿಟ್ಲ: ವಿಟ್ಲ ಪೇಟೆಯ ಅಂಗಡಿಯಲ್ಲಿ ಕೆಲಸಕ್ಕಿದ್ದ ವಿವಾಹಿತ ಯುವತಿ ಅ. 29ರಂದು ಕಾಣೆಯಾಗಿದ್ದಾರೆ ಎಂದು ಆಕೆಯ ಮನೆಯವರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
Advertisement
ವಿಟ್ಲಪಟ್ನೂರು ಗ್ರಾಮದ ಕಡಂಬು ನಿವಾಸಿ ಕವಿತಾ (29) ನಾಪತ್ತೆಯಾದವರು. ಕೆಲಸ ಮುಗಿಸಿ, ಸಂಜೆ ತಾಯಿ ಮನೆಗೆ ಹೋಗುತ್ತೇನೆಂದು ಬೆಳಗ್ಗೆ ಮನೆಯಲ್ಲಿ ಹೇಳಿದ್ದರು. ಆದರೆ ಆಕೆ ತಾಯಿ ಮನೆಗೆ ತೆರಳಲಿಲ್ಲ.
ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಪರಿಸರದಲ್ಲಿ ಹುಡುಕಾಡಿದರೂ ಕವಿತಾ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.