ಪಾಲಕ್ಕಾಡ್(ಕೇರಳ): ಕರಾವಳಿ ಗಡಿ ನಿಯಂತ್ರಣ ರೇಖೆ ಅತಿಕ್ರಮಣವಾಗಿ ಪ್ರವೇಶಿಸಿದ್ದ ಶಂಕೆಯ ಮೇಲೆ ಪಾಕಿಸ್ತಾನದ ನೌಕಾಪಡೆಯ ವಶದಲ್ಲಿದ್ದ ಕೇರಳದ ಮೀನುಗಾರರೊಬ್ಬರು ಜೈಲಿನಲ್ಲಿ ಕೊನೆಯುಸಿರೆಳೆದಿರುವುದಾಗಿ ಅಧಿಕಾರಿಗಳು ತಿಳಿಸಿದಾರೆ.
ಇದನ್ನೂ ಓದಿ:ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಭಿಮಾನಿಯ ಕೊನೆ ಆಸೆಯನ್ನು ಪೂರ್ತಿಗೊಳಿಸಿದ Shah Rukh Khan
ಕೇರಳದ ಪಾಲಕ್ಕಾಡ್ ನ ಕಪ್ಪೂರ್ ನಿವಾಸಿ ಜುಲ್ಫಿಕರ್ (48ವರ್ಷ) ಕರಾಚಿಯ ಜೈಲಿನಲ್ಲಿ ವಿಧಿವಶರಾಗಿದ್ದಾರೆಂದು ವರದಿ ವಿವರಿಸಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಅಮೃತಸರದಲ್ಲಿ ಜುಲ್ಪಿಕರ್ ಶವವನ್ನು ಕುಟುಂಬ ಸದಸ್ಯರು ಪಡೆದುಕೊಂಡಿರುವುದಾಗಿ ವರದಿ ತಿಳಿಸಿದೆ. ಜುಲ್ಫಿಕರ್ ಶವವನ್ನು ಕೇರಳಕ್ಕೆ ಕಳುಹಿಸುತ್ತಿಲ್ಲ, ಅಮೃತಸರದಲ್ಲಿಯೇ ಕುಟುಂಬ ಸದಸ್ಯರು ಅಂತ್ಯಕ್ರಿಯೆ ನಡೆಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ವಿದೇಶದಲ್ಲಿರುವ ಸಹೋದರನೊಬ್ಬ ಅಮೃತ್ ಸರಕ್ಕೆ ಆಗಮಿಸಿರುವುದಾಗಿ ವರದಿ ತಿಳಿಸಿದ್ದು. ಅಟ್ಟಾರ- ಪಂಜಾಬ್ ಗಡೀಭಾಗದಲ್ಲಿ ಜುಲ್ಫಿಕರ್ ಶವವನ್ನು ಜಿಲ್ಲಾಧಿಕಾರಿ ಪಡೆದುಕೊಂಡು, ಮನೆಯವರಿಗೆ ಹಸ್ತಾಂತರಿಸಿದ್ದರು.
2017ರಂದು ತಮ್ಮ ಮಗ ಪ್ರಯಾಣ ಕೈಗೊಂಡಿದ್ದ, ಆದರೆ ಆತನ ಬಗ್ಗೆ ನಮಗೆ ಯಾವ ಮಾಹಿತಿಯೂ ಸಿಕ್ಕಿರಲಿಲ್ಲವಾಗಿತ್ತು. ಆದರೆ ನಮಗೆ ಐಬಿ( ಇಂಟೆಲಿಜೆನ್ಸ್ ಬ್ಯುರೋ) ಸ್ಪೆಷಲ್ ಬ್ರ್ಯಾಂಚ್ ವಿವರ ಸಂಗ್ರಹಿಸಿದ ಪರಿಣಾಮ ನಮಗೆ ವಿಷಯ ತಿಳಿಯುಂತಾಗಿತ್ತು ಎಂದು ಜುಲ್ಫಿಕರ್ ತಂದೆ ಅಬ್ದುಲ್ ಹಮೀದ್ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.
ತಮ್ಮ ಜಲಗಡಿಯನ್ನು ದಾಟಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ಜುಲ್ಫಿಕರ್ ಅನ್ನು ಪಾಕಿಸ್ತಾನ ಯೋಧರು ಬಂಧಿಸಿದ್ದರು.
ಪಾಕಿಸ್ತಾನ ಜಲಮಾರ್ಗದಲ್ಲಿ ಕಾನೂನು ಬಾಹಿರವಾಗಿ ಮೀನುಗಾರಿಕೆ ನಡೆಸಿ, ಬಂಧನಕ್ಕೊಳಗಾಗಿದ್ದ ಸುಮಾರು 199 ಭಾರತೀಯ ಮೀನುಗಾರರನ್ನು ಪಾಕಿಸ್ತಾನ್ ಸರಕಾರ ಬಂಧಮುಕ್ತಗೊಳಿಸಿತ್ತು.