Advertisement

20 ದಿನ ಬಳಿಕ ಚೆನ್ನೈನಲ್ಲಿ ಬಾಲಕಿಯರು ಪತ್ತೆ: ಸಲಿಂಗ ಮದುವೆಗೆ ಬಾಲಕಿಯರ ಸಿದ್ಧತೆ?

12:22 PM Sep 27, 2022 | Team Udayavani |

ಬೆಂಗಳೂರು: ಶಾಲೆಯಿಂದ ನಾಪತ್ತೆಯಾಗಿದ್ದ ಮೂವರು ಬಾಲಕಿಯರನ್ನು ಪತ್ತೆ ಹಚ್ಚಿದ ಪುಲಕೇಶಿನಗರ ಠಾಣೆ ಪೊಲೀಸರು ಪಾಲಕರು ಮಡಿಲು ಸೇರುವಂತೆ ಮಾಡಿದ್ದಾರೆ.

Advertisement

ಪುಲಕೇಶಿನಗರದ ಶಕ್ತೀಶ್ವರಿ (15), ವೆರೋ ನಕಾ (16) ಹಾಗೂ ನಂದಿನಿ (15) ಪತ್ತೆಯಾದ ಬಾಲಕಿಯರು.

ನಗರದ ಪ್ರತಿಷ್ಠಿತ ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಓದುತ್ತಿದ್ದ ಮೂವರು ವಿದ್ಯಾರ್ಥಿನಿಯರೂ ವೈಯಕ್ತಿಕ ಕಾರಣ ಗಳಿಂದ ಸೆ.6ರಂದು ಜತೆಯಾಗಿ ಶಾಲೆಯಿಂದ ಹಿಂದೂಪುರಕ್ಕೆ ಹೋಗಿದ್ದರು. ಅಲ್ಲಿ ಏನು ಮಾಡಬೇಕೆಂದು ತೋಚದೇ ಅಲ್ಲಿಂದ ಬಸ್ಸಿನಲ್ಲಿ ಚೆನ್ನೈಗೆ ಹೋಗಿದ್ದರು. ಚೆನ್ನೈನಲ್ಲಿ ಆಟೋ ಚಾಲಕನೊಬ್ಬನ ಪರಿಚಯವಾಗಿ ನಾವು ಮನೆ ಬಿಟ್ಟು ಬಂದಿದ್ದು, ಇಲ್ಲೇ ಕೆಲಸ ಕೊಡಿಸುವಂತೆ ಮನವಿ ಮಾಡಿದ್ದರು. ಬಾಲಕಿಯರ ಅಳಲಿಗೆ ಸ್ಪಂದಿಸಿದ ಚಾಲಕ ಗಾರ್ಮೆಂಟ್ಸ್‌ವೊಂದರಲ್ಲಿ ಅವರಿಗೆ ಕೆಲಸ ಕೊಡಿಸಿದ್ದ. ತಾವು ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್‌ ಸಮೀಪದ ಮನೆಯೊಂದರಲ್ಲಿ ತಮ್ಮ ಸಮಸ್ಯೆ ಹೇಳಿ ಆಶ್ರಯ ಪಡೆದಿದ್ದರು.

ಮನೆಯಲ್ಲಿ ಕಿರುಕುಳ: ಮೂವರು ಬಾಲಕಿ ಯರ ಪೈಕಿ ಓರ್ವ ಬಾಲಕಿ ತಂದೆಯ 2ನೇ ಪತ್ನಿ ಬಾಲಕಿಗೆ ಕಿರುಕುಳ ಕೊಟ್ಟಿದ್ದಳು ಎನ್ನಲಾಗಿದೆ. ಮತ್ತಿಬ್ಬರು ಬಾಲಕಿಯರು ಮನೆ ಯಲ್ಲಿ ನಡೆದ ಕೆಲ ವೈಯಕ್ತಿಕ ಸಮಸ್ಯೆಗಳಿಂದ ಕಂಗೆಟ್ಟು ಹೋಗಿದ್ದರು. ಇದಲ್ಲದೇ, ಬಾಲಕಿ ಯರು ವ್ಯಾಸಂಗ ಮಾಡುತ್ತಿದ್ದ ಶಾಲೆಯಿಂದ ಕಳೆದ 1 ತಿಂಗಳ ಹಿಂದೆ ಮತ್ತೋರ್ವ ಬಾಲಕಿ ಮನೆ ಬಿಟ್ಟು ಹೋಗಿದ್ದಳು. ಇದನ್ನು ತಿಳಿದುಕೊಂಡಿದ್ದ ಮೂವರು ಬಾಲಕಿಯರೂ ಆಕೆಯಂತೆಯೇ ಮನೆ ಬಿಟ್ಟು ಹೋಗಲು ತೀರ್ಮಾನಿಸಿದ್ದರು ಎಂದು ತಿಳಿದು ಬಂದಿದೆ.

ನಾಪತ್ತೆಯಾಗಿದ್ದ ಮಕ್ಕಳ ಪಾಲಕರು ಕೆಲ ದಿನಗಳ ಹಿಂದೆ ಶಾಲೆಗೆ ಮುತ್ತಿಗೆ ಹಾಕಿ ಶಾಲೆಯ ಮುಂಭಾಗದ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದರು ಎನ್ನಲಾಗಿದೆ.

Advertisement

ಸಲಿಂಗ ಮದುವೆಗೆ ಬಾಲಕಿಯರ ಸಿದ್ಧತೆ? : ಮೂವರು ಬಾಲಕಿಯರ ಪೈಕಿ ಇಬ್ಬರು ಪ್ರೀತಿಸಿ ಸಲಿಂಗ ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು ಎನ್ನಲಾಗುತ್ತಿದೆ. ಮೂವರು ಬಾಲಕಿಯರ ಪೈಕಿ ಇಬ್ಬರು ಹಾಸ್ಟೆಲ್‌ ನಲ್ಲಿ ವಾಸ್ತವ್ಯ ಹೂಡಿದ್ದರೆ ಮತ್ತೋರ್ವ ಬಾಲಕಿ ಮನೆಯಿಂದಲೇ ಶಾಲೆಗೆ ತೆರಳುತ್ತಿದ್ದರು. ಹಾಸ್ಟೆಲ್‌ನಲ್ಲಿದ್ದ ಇಬ್ಬರು ಬಾಲಕಿಯರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಸೆ.6ರಂದು ಮಧ್ಯಾಹ್ನ ಹಾಸ್ಟೆಲ್‌ ವಾರ್ಡನ್‌ ಹಾಗೂ ಸೆಕ್ಯೂರಿಟಿ ಕಣ್ತಪ್ಪಿಸಿ ಶಾಲೆಯಿಂದ ಹೋಗಿದ್ದರು. ಮಾರ್ಗ ಮಧ್ಯೆ ಮತ್ತೋರ್ವ ಬಾಲಕಿಯೂ ಇವರ ಜತೆ ಬಂದಿದ್ದಳು. ಮನೆಯಲ್ಲಿ ಕಷ್ಟ ಇದೆ ಎಂದು ಹೇಳಿ ಸ್ನೇಹಿತೆಯರು ಹಾಗೂ ಪರಿಚಿತರಿಂದ ಖರ್ಚಿಗಾಗಿ 21 ಸಾವಿರ ರೂ. ಸಂಗ್ರಹಿಸಿದ್ದರು. ಈ ಹಣದಲ್ಲಿ ಬಟ್ಟೆ ಹಾಗೂ ಮೊಬೈಲ್‌ ಖರೀದಿಸಿ ಕಂಟ್ಮೋನೆಂಟ್‌ ರೈಲು ನಿಲ್ದಾಣಕ್ಕೆ ಬಂದಿದ್ದರು. ಬಾಲಕಿಯ ಪಾಲಕರು ಕೋರ್ಟ್‌ಗೆ ಹೇಬಿಯಸ್‌ ಅರ್ಜಿ ಹಾಕಿದ್ದು, ಈ ಹಿನ್ನೆಲೆಯಲ್ಲಿ ವಿಚಾರಣೆ ಮುಗಿಸಿ ಮಂಗಳವಾರ ಮೂವರನ್ನು ಕೋರ್ಟ್‌ ಮುಂದೆ ಹಾಜರುಪಡಿಸುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಪತ್ತೆ ಹಚ್ಚಿದ್ದು ಹೇಗೆ? : ಇತ್ತ ಬಾಲಕಿಯರು ನಾಪತ್ತೆಯಾಗಿರುವ ಬಗ್ಗೆ ಅವರ ಪಾಲಕರು ಪುಲಕೇಶಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೈದರಾಬಾದ್‌, ಮಹಾರಾಷ್ಟ್ರ, ಪುದುಚೆರಿ, ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಬಾಲಕಿಯರ ಶೋಧ ನಡೆಸಿದ್ದರು. ಕೆಲ ದಿನಗಳ ಹಿಂದೆ ಮೂವರು ಬಾಲಕಿಯರ ಪೈಕಿ ಶಕ್ತೀಶ್ವರಿಗೆ ತಂದೆಯ ನೆನಪಾಗಿ, ತಾನು ಕೆಲಸ ಮಾಡುತ್ತಿದ್ದ ಲ್ಯಾಂಡ್‌ಲೈನ್‌ ಫೋನ್‌ನಿಂದ ತಂದೆಯ ಮೊಬೈಲ್‌ಗೆ ಕರೆ ಮಾಡಿದ್ದಳು. ಇತ್ತ ಆಕೆಯ ತಂದೆ ಕರೆ ಸ್ವೀಕರಿಸು ತ್ತಿದ್ದಂತೆ ಹಲೋ ಎಂದು ಹೇಳಿ ಕರೆ ಕಡಿತಗೊಳಿಸಿದ್ದಳು. ಇದು ತನ್ನ ಮಗಳದ್ದೇ ಧ್ವನಿ ಎಂಬುದು ಆಕೆಯ ತಂದೆಗೆ ದೃಢಪಟ್ಟಿತ್ತು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಶಕ್ತೀಶ್ವರಿ ಕರೆ ಮಾಡಿದ್ದ ಲ್ಯಾಂಡ್‌ಲೈನ್‌ ನಂಬರ್‌ನ ಜಾಡು ಹಿಡಿದಾಗ ಅದು ಚೆನ್ನೈನ ಗಾರ್ಮೆಂಟ್ಸ್‌ ವೊಂದರ ನಂಬರ್‌ ಎಂಬುದು ಗೊತ್ತಾಗಿತ್ತು. ಇತ್ತ ಪೊಲೀಸರು ಚೆನ್ನೈಗೆ ಹೋಗಿ ಮೂವರು ಬಾಲಕಿಯರನ್ನೂ ಪತ್ತೆ ಹಚ್ಚಿ ನಗರಕ್ಕೆ ಕರೆ ತಂದು ಪಾಲಕರ ಮಡಿಲು ಸೇರುವಂತೆ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next