ಮಣಿಪಾಲ: ತಾಯಿ-ಮಗು ನಾಪತ್ತೆಯಾದ ಘಟನೆ ಮಣಿಪಾಲದ ಸಂತೋಷ ನಗರದಲ್ಲಿ ನಡೆದಿದೆ.
Advertisement
ಅಂಜುಬಾನು (27) ಮತ್ತು ಮೊಯಿರಾ ಫಿರ್ದೋಸ್ (3) ನಾಪತ್ತೆಯಾದವರು. ಅವರು ವಾಸವಿದ್ದ ಸಂತೋಷ ನಗರದ ಶಭಾನಾ ಮಂಜಿಲ್‌ನಿಂದ ಫೆ. 18ರಂದು ಮನೆಗೆ ಬೀಗ ಹಾಕಿ ಹೊರಟು ಹೋಗಿದ್ದು ಈವರೆಗೂ ವಾಪಸ್ ಬಾರದೇ ನಾಪತ್ತೆಯಾಗಿದ್ದಾರೆ.
ಫೆ. 20, 23 ಹಾಗೂ 24ರಂದು ಅಂಜುಬಾನು ಅವರು ತಮ್ಮ ಸಲೀಮ್‌ರಿಗೆ ಕರೆಮಾಡಿ ಮನೆಗೆ ಬರುವುದಾಗಿ ತಿಳಿಸಿದ್ದರು. ಆದರೆ ಈವರೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.