Advertisement

Missing Case ಕಾಪು: ಸೆಂಟ್ರಿಂಗ್‌ ಕಾರ್ಮಿಕ ನಾಪತ್ತೆ

11:19 PM Jan 01, 2024 | Team Udayavani |

ಕಾಪು: ಸೆಂಟ್ರಿಂಗ್‌ ಕೆಲಸಕ್ಕಾಗಿ ಕಟಪಾಡಿಗೆ ಬಂದಿದ್ದ ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ಹುಲಗೆಪ್ಪ ಬಂಗಾರಿ (32) ಅ. 12ರಿಂದ ನಾಪತ್ತೆಯಾಗಿರುವುದಾಗಿ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಹಾನಗಲ್‌ ತಾಲೂಕಿನ ಮುತ್ತವ್ವ ಅವರ ಮಗನಾದ ಹುಲಗೆಪ್ಪ ಬಂಗಾರಿ ಕೂಲಿ ಕೆಲಸ ಮಾಡಿಕೊಂಡಿದ್ದು 3 ವರ್ಷಗಳಿಂದ ಉಡುಪಿ, ಮುಡೇìಶ್ವರ ಮೊದಲಾದೆಡೆ ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದರು.

ನಾಲ್ಕೈದು ತಿಂಗಳ ಹಿಂದೆ ಕಟಪಾಡಿಗೆ ಆಗಮಿಸಿದ್ದರು. ಬಳಿಕ ಒಂದು ತಿಂಗಳ ಹಿಂದೆ ಮನೆಗೆ ಹೋಗಿದ್ದು ಅ. 12ರಂದು ನನಗೆ ಕರೆ ಮಾಡಿ ಮಾತನಾಡಿದ್ದ; ಬಳಿಕ ಮಗನ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಬರುತ್ತಿದೆ, ಎಲ್ಲಿ ಹೋಗಿದ್ದಾನೆಂಬ ಮಾಹಿತಿಯೂ ಸಿಕ್ಕಿಲ್ಲ’ ಎಂದು ಮುತ್ತವ್ವ ಕಾಪು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next