ಗಂಗಾವತಿ: ಮದ್ಯ ಸೇವನೆಗೆ ಹಣ ನೀಡದ್ದಕ್ಕೆ ವ್ಯಕ್ತಿಯೋರ್ವ ತುಂಗಭದ್ರಾ ಎಡದಂಡೆ ಕಾಲುವೆಗೆ ಹಾರಿ ನಾಪತ್ತೆಯಾದ ಘಟನೆ ತಾಲ್ಲೂಕಿನ ರಂಗಾಪುರ ಜಂಗ್ಲಿ ಕ್ಯಾಂಪಿನಲ್ಲಿ ಮಂಗಳವಾರ ಬೆಳಿಗ್ಗೆ ಜರುಗಿದೆ.
ರಂಗಾಪುರ ಜಂಗ್ಲಿ ಕ್ಯಾಂಪಿನ ರವಿ ತಂದೆ ಲಕ್ಷ್ಮಣ ನಾಯಕ್ (30) ಎಂಬ ವ್ಯಕ್ತಿ ಮದ್ಯ ಸೇವನೆಗಾಗಿ ಮನೆಯಲ್ಲಿ ಹಣದ ಬೇಡಿಕೆ ಇಟ್ಟಿದ್ದು,ಹಣ ನೀಡಲು ಮನೆಯವರು ನಿರಾಕರಿಸಿದ್ದರಿಂದ ಮನನೊಂದು ಗ್ರಾಮದ ಹತ್ತಿರ ಇರುವ ಎಡದಂಡೆ ಕಾಲುವೆಗೆ ಮಂಗಳವಾರ ಬೆಳಿಗ್ಗೆ ಹಾರಿ ನಾಪತ್ತೆಯಾಗಿದ್ದಾನೆ.
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಸಿಪಿಐ ಮಂಜುನಾಥ್ ಭೇಟಿ ನೀಡಿದ್ದಾರೆ.