Advertisement

Missing Case ಮಾಡ್ನೂರಿನ ಶಾಲಾ ಬಾಲಕ ನಾಪತ್ತೆ

12:21 AM Feb 10, 2024 | Team Udayavani |

ಸುಳ್ಯ: ಸುಳ್ಯಕ್ಕೆ ತೆರಳಿದ ಬಾಲಕ ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ನರಸಿಂಗಾನಮನೆ ಅಬ್ದುಲ್‌ ಹಮೀದ್‌ ಅವರ ಪುತ್ರ ಅಹಮದ್‌ ಶಾಹೀದ್‌ ನಾಪತ್ತೆಯಾಗಿರುವ ಬಾಲಕ.

ಮಾಡ್ನೂರು ನೂರುಲ್‌ ಹುದಾ ಇಸ್ಲಾಮಿಕ್‌ ಅಕಾಡೆಮಿಯ 4ನೇ ತರಗತಿ ವಿದ್ಯಾರ್ಥಿಯಾಗಿದ್ದ ಆತ ಫೆ. 2ರಂದು ಅಜ್ಜನ ಮನೆ ಸುಳ್ಯದ ಪರಿವಾರಕಾನ ಅರಂಬೂರಿಗೆ ಹೋಗಿದ್ದು, ಫೆ. 3ರಂದು ಅಜ್ಜನ ಮನೆಯಿಂದ ಸುಳ್ಯಕ್ಕೆಂದು ಬಂದಿದ್ದ. ಆದರೆ ರಾತ್ರಿಯಾದರೂ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ. ಅಜ್ಜನ ಮನೆಯಿಂದ ಹೊರಡುವ ವೇಳೆ ಕಪ್ಪು ಬಣ್ಣದ ಪ್ಯಾಂಟ್‌ ಮತ್ತು ಲೈಟ್‌ ಬ್ಲೂ ಕಲರ್‌ ಉದ್ದ ತೋಳಿನ ಅಂಗಿ ಧರಿಸಿದ್ದ. ಕೈಯಲ್ಲಿ ಒಂದು ಬ್ಯಾಗ್‌ ಇತ್ತು ಎಂದು ಸುಳ್ಯ ಠಾಣೆಗೆ ಬಾಲಕನ ತಂದೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next