ಬಾಕು (ಅಜರ್‌ಬೈಜಾನ್): ಐಎಸ್‌ಎಸ್‌ಎಫ್ ವಿಶ್ವಕಪ್ ರೈಫಲ್/ಶೂಟಿಂಗ್ ಪಂದ್ಯಾವಳಿಯಲ್ಲಿ ಭಾರತದ ರಿದಂ ಸಂಗ್ವಾನ್ ವಿಶ್ವದಾಖಲೆ ನಿರ್ಮಿಸಿದರೂ ಪದಕವಂಚಿತರಾದ ಘಟನೆ ಸಂಭವಿಸಿದೆ.
ವನಿತೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ರಿದಂ ಸಂಗ್ವಾನ್ 595 ಅಂಕ ಗಳಿಸಿ 1994ರಲ್ಲಿ ಬಲ್ಗೇರಿ ಯಾದ ಡಯಾನಾ ಇರ್ಗೋವಾ ನಿರ್ಮಿ ಸಿದ ವಿಶ್ವದಾಖಲೆಯನ್ನೇನೋ ಮುರಿದರು. ಆದರೆ ಪದಕ ಸ್ಪರ್ಧೆಯಲ್ಲಿ 8ನೇ ಸ್ಥಾನಕ್ಕೆ ಕುಸಿದರು. ಭಾರತದ ಇತರ ಸ್ಪರ್ಧಿಗ ಳಾದ ಐಶ್ವರಿ ಪ್ರತಾಪ್ ಸಿಂಗ್ ತೋಮರ್ 10ನೇ, ಅಖೀಲ್ ಶೆರಾನ್ 13ನೇ, ಸ್ವಪ್ನಿಲ್ ಕುಸಲೆ 22ನೇ ಸ್ಥಾನಿಯಾದರು.
ಬಾಕು ಸ್ಪರ್ಧೆಯಲ್ಲಿ ಡೊರೀನ್ ಕಂಚಿನ ಪದಕ ಗೆದ್ದರು. ಚೀನದ ಫೆಂಗ್ ಸಿಕ್ಸುವಾನ್ ಸತತ 2ನೇ ವಿಶ್ವಕಪ್ ಚಿನ್ನ, ಇರಾನ್‌ನ ಹಾನಿಯೇಹ್ ರೋಸ್ತಾಮಿಯಾ ಬೆಳ್ಳಿ ಜಯಿಸಿದರು.