Advertisement

Miss World 2024 ಪ್ರಶಸ್ತಿ ಗೆದ್ದ ಶಿರಸಿ ಮೂಲದ ಡಾ.ಶೃತಿ ಹೆಗಡೆ

06:18 PM Jul 01, 2024 | Team Udayavani |

ಶಿರಸಿ: ತಾಲೂಕಿನ ಮುಂಡಿಗೆಸರ ಮೂಲದ ಹುಬ್ಬಳ್ಳಿಯ ಯುವತಿಯೊಬ್ಬಳು ಅಮೇರಿಕಾದಲ್ಲಿ ಜರುಗಿದ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

Advertisement

ಮುಂಡಿಗೆಸರ ಅಜ್ಜೊರಮನೆ ಕುಟುಂಬದವರಾದ ಹುಬ್ಬಳ್ಳಿಯಲ್ಲಿ ನೆಲೆಸಿದ ಕೃಷ್ಣ ಹೆಗಡೆ, ಕಮಲಾ ದಂಪತಿಯ ಪುತ್ರಿ ಶೃತಿ ಹೆಗಡೆ ಅಮೇರಿಕಾದಲ್ಲಿ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾಳೆ.

ಈಕೆ ಈ ಮೊದಲು 2018 ರಲ್ಲಿ ಮಿಸ್ ಕರ್ನಾಟಕ ರನ್ನರ್ ಅಪ್, ಮಿಸ್ ಸೌತ್ ಇಂಡಿಯಾ ವಿಜೇತೆಯಾಗಿದ್ದಳು.

2023ರಲ್ಲಿ ಮಿಸ್ ಏಷ್ಯಾ ಇಂಟರ್ ನ್ಯಾಷನಲ್ ಇಂಡಿಯಾ ಪ್ರಶಸ್ತಿ ಗೆದ್ದಿದ್ದ ಈಕೆ ಅಮೇರಿಕಾದಲ್ಲಿ ನಡೆದ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ.

ಅಮೇರಿಕಾದ ಪ್ಲೋರಿಡಾದಲ್ಲಿ ಕಳೆದ ಜೂ.6 ರಿಂದ 10 ವರೆಗೆ ಆಯೋಜಿತವಾಗಿದ್ದ ಸ್ಪರ್ಧೆಯಲ್ಲಿ ಭಾರತ ಸೇರಿದಂತೆ ಒಟ್ಟು 10 ದೇಶಗಳ ಸುಂದರಿಯವರು ಪೈಪೋಟಿಯಲ್ಲಿದ್ದರು.

Advertisement

ರಾಷ್ಟ್ರೀಯ ಉಡುಗೆ, ಈಜು ಉಡುಗೆ, ಪ್ರಶ್ನೋತ್ತರ, ವೈಯಕ್ತಿಕ ಸಂದರ್ಶನ ಮುಂತಾದ ವಿವಿಧ ಸುತ್ತುಗಳಲ್ಲಿ ಸ್ಪರ್ಧೆ ಸಾಗಿತ್ತು. ಎಲ್ಲದರಲ್ಲೂ ಉತ್ತಮ ಪ್ರದರ್ಶನ ನೀಡಿ, ಶೃತಿ ಹೆಗಡೆ ಗೆಲುವು ಸಾಧಿಸಿದ್ದಾರೆ.‌

ಹುಬ್ಬಳ್ಳಿಯಲ್ಲಿಯೇ ಎಮ್.ಬಿ.ಬಿ.ಎಸ್. ಪೂರೈಸಿರುವ ಡಾ.ಶೃತಿ ಹೆಗಡೆ, ಚರ್ಮ ರೋಗ ತಜ್ಞೆಯಾಗುವ ಹಂಬಲದಿಂದ ತುಮಕೂರಿನಲ್ಲಿ ಎಮ್.ಡಿ. ಅಧ್ಯಯನ ನಡೆಸುತ್ತಿದ್ದಾರೆ. ಈಕೆ ಭರತನಾಟ್ಯ ಕಲಾವಿದೆಯೂ ಆಗಿದ್ದು, ದುಬೈ, ಮಾಲ್ಡೀವ್ಸ್, ಭೂತಾನ್ ಮುಂತಾದ ದೇಶಗಳಲ್ಲಿ ಪ್ರದರ್ಶನ ನೀಡಿದ್ದಾಳೆ.

ಕೆಲವು ಧಾರವಾಹಿ, ಕನ್ನಡ ಚಲನಚಿತ್ರ, ವೆಬ್ ಸಿರೀಸ್ ನಲ್ಲಿ ನಟಿಸಿದ್ದಾಳೆ ಎಂಬುದು ಉಲ್ಲೇಖನೀಯ.

Advertisement

Udayavani is now on Telegram. Click here to join our channel and stay updated with the latest news.

Next