Advertisement

ಆಫ್ರಿಕಾ ಚೆಲುವೆ ಝೊಝಿಬಿನಿ ಟುನ್ಝಿಗೆ ‘ಭುವನ ಸುಂದರಿ’ಗರಿ

10:12 AM Dec 11, 2019 | Hari Prasad |

ಅಟ್ಲಾಂಟಾ: ಪ್ರಸಕ್ತ ಸಾಲಿನ ಭುವನ ಸುಂದರಿ ಕಿರೀಟವು ದಕ್ಷಿಣ ಆಫ್ರಿಕಾದ ಚೆಲುವೆಯ ಮುಡಿಗೇರಿದೆ. ಭಾರತದ ಸ್ಪರ್ಧಿ ವರ್ತಿಕಾ ಸಿಂಗ್‌ ಸಹಿತ 90ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಹಿಂದಿಕ್ಕಿದ ಆಫ್ರಿಕಾದ 26 ವರ್ಷದ ಝೊಝಿಬಿನಿ ಟುನ್ಝಿ ಅವರು ಮಿಸ್‌ ಯುನಿವರ್ಸ್‌ 2019 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Advertisement

ಅಟ್ಲಾಂಟಾದ ಟೈಲರ್‌ ಪೆರ್ರಿ ಸ್ಟುಡಿಯೋಸ್‌ನಲ್ಲಿ ನಡೆದ ಸಮಾರಂಭದಲ್ಲಿ 2018ರ ಭುವನ ಸುಂದರಿ, ಫಿಲಿಪ್ಪೀನ್ಸ್‌ನ ಕ್ಯಾಟ್ರಿಯೋನಾ ಗ್ರೇ ಅವರು ಟುನ್ಝಿಗೆ ಕಿರೀಟ ತೊಡಿಸಿದರು. ಮಿಸ್‌ ಪೋರ್ಟೊರಿಕೋ ಮ್ಯಾಡಿಸನ್‌ ಆ್ಯಂಡರ್‌ಸನ್‌ ಅವರು ಮೊದಲ ರನ್ನರ್‌ ಅಪ್‌ ಆಗಿಯೂ, ಮೆಕ್ಸಿಕೋದ ಆ್ಯಶ್ಲೆ ಅಲ್ವಿದ್ರೇಸ್‌ ದ್ವಿತೀಯ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದ್ದಾರೆ.

ಜಗತ್ತಿನ ಅತಿದೊಡ್ಡ ಸೌಂದರ್ಯ ಸ್ಪರ್ಧೆಯ ಟಾಪ್‌ 20ರಲ್ಲಿ ಸ್ಥಾನ ಪಡೆದಿದ್ದ ಭಾರತೀಯ ಸ್ಪರ್ಧಿ, ಮಿಸ್‌ ಇಂಡಿಯಾ ವರ್ತಿಕಾ ಸಿಂಗ್‌ ಅವರು, ಮುಂದಿನ ಸುತ್ತಿಗೆ ಪ್ರವೇಶಿಸುವಲ್ಲಿ ವಿಫ‌ಲರಾದರು.

Advertisement

Udayavani is now on Telegram. Click here to join our channel and stay updated with the latest news.

Next