Advertisement

ಮಿಸ್‌ ಕಮ್ಯುನಿಕೇಷನ್‌ 

12:30 AM Feb 11, 2019 | |

ಒಂದು ಕಾಲದಲ್ಲಿ 500 ರೂ.ಗೆ ಮೊಬೈಲ್‌ ಫೋನ್‌ಗಳನ್ನು ಒದಗಿಸುವ ಮೂಲಕ ದೇಶದಲ್ಲಿ ಮೊಬೈಲ್‌ ಕ್ರಾಂತಿ ಮಾಡಿದ್ದ ಕಂಪನಿ ಈಗ ಇಡೀ ಟೆಲಿಕಾಂ ಕ್ಷೇತ್ರಕ್ಕೆ ಬೆನ್ನು ಹಾಕಿ ನಿಂತಿದೆ. 2002ರಲ್ಲೇ ಅನಿಯಮಿತ ಉಚಿತ ಕರೆಗಳು ಹಾಗೂ ಸಂದೇಶಗಳನ್ನು ಕಳುಹಿಸುವ ಸೌಲಭ್ಯ ಒದಗಿಸಿದ ರಿಲಾಯನ್ಸ್‌ ಕಮ್ಯೂನಿಕೇಶನ್ಸ್‌ ಮೊನ್ನೆ ಮೊನ್ನೆ ಎರಿಕ್ಸನ್‌ಗೆ ಪಾವತಿ ಮಾಡಬೇಕಿದ್ದ 500 ಕೋಟಿ ರೂ. ಪಾವತಿ ಮಾಡಲು ಸಾಧ್ಯವಾಗದೇ ಕಂಪನಿಯನ್ನು ಮುಚ್ಚಲು ಹೊರಟಿದೆ.

Advertisement

ಇತ್ತೀಚೆಗಷ್ಟೇ ರಿಲಯನ್ಸ್‌ ಕಮ್ಯೂನಿಕೇಷನ್‌ ದಿವಾಳಿ ಕಾಯ್ದೆ ಅಡಿಯಲ್ಲಿ ದಿವಾಳಿ ಎಂದು ಘೋಷಿಸಲು ನಿರ್ಧರಿಸಿದೆ. ಒಂದೇ ದಶಕದ ಹಿಂದೆ ಮೊಬೈಲ್‌ ಅಂದರೆ ರಿಲಯನ್ಸ್‌ ಎಂಬಷ್ಟರ ಮಟ್ಟಿಗೆ ಟೆಲಿಕಾಂ ವಲಯದಲ್ಲಿ ಛಾಪು ಮೂಡಿಸಿದ್ದ ಧೀರೂಬಾಯಿ ಅಂಬಾನಿ ಕಂಪನಿಗೆ ಇಷ್ಟು ಬೇಗ ಏನಾಗಿ ಹೋಯ್ತು ಎಂದು ಯೋಚಿಸಿದರೆ ಉದ್ಯಮ ವಲಯಕ್ಕೊಂದು ಉತ್ತಮ ಸಂದೇಶ ಸಿಕ್ಕೀತು!

ರಿಲಯನ್ಸ್‌  ಹಾಗೂ ಅಂಬಾನಿ ಎಂಬ ಹೆಸರು ಮನೆ ಮನೆಯಲ್ಲೂ ಕೇಳಿ ಬರೋದಕ್ಕೆ ಶುರುವಾಗಿದ್ದೇ ಈ ರಿಲಾಯನ್ಸ್‌ ಕಮ್ಯೂನಿಕೇಶನ್ನಿಂದ. ಇಡೀ ದೇಶದಲ್ಲಿ ಈಕ್ವಿಟಿ ಸಂಸ್ಕೃತಿಯನ್ನು ಆರಂಭಿಸಿದ್ದೇ ಧೀರೂಬಾಯಿ ಅಂಬಾನಿ ಸ್ಥಾಪಿಸಿದ ರಿಲಾಯನ್ಸ್‌ ಇಂಡಸ್ಟ್ರೀಸ್‌. ಧೀರೂಬಾಯಿ 2002 ರಲ್ಲಿ ನಿಧನರಾದಾಗ ರಿಲಾಯನ್ಸ್‌ ಒಟ್ಟು 2 ಮಿಲಿಯನ್‌ ಷೇರುದಾರರನ್ನು ಹೊಂದಿತ್ತು. ಇದು ಇಡೀ ದೇಶದ ಯಾವುದೇ ಕಂಪನಿಗಳಿಗೆ ಹೋಲಿಸಿದರೂ ಭಾರಿ ದೊಡ್ಡ ಸಂಖ್ಯೆ. 1977 ರಲ್ಲಿ ರಿಲಾಯನ್ಸ್‌ ಇಂಡಸ್ಟ್ರೀಸ್‌ ಲಿಸ್ಟ್‌ ಆದಾಗ, ಸಾವಿರಾರು ಸಣ್ಣ ಸಣ್ಣ ಹೂಡಿಕೆದಾರರು ಹೂಡಿಕೆ ಮಾಡಿದ್ದರು. ಆಗಲೇ ಷೇರುದಾರರ ಸಭೆಯನ್ನು ಎಷ್ಟು ದೊಡ್ಡ ಮಟ್ಟದಲ್ಲಿ ಮಾಡಲಾಗುತ್ತಿತ್ತೆಂದರೆ, ಎಲ್ಲ ಷೇರುದಾರರೂ ಸೇರುವುದಕ್ಕಾಗಿ ದೊಡ್ಡ ದೊಡ್ಡ ಸ್ಟೇಡಿಯಂನಲ್ಲೇ ಸಭೆ ನಡೆಸಲಾಗುತ್ತಿತ್ತು.

ಧೀರೂಬಾಯಿ ಅಂಬಾನಿ ನಿಧನವಾದ ನಂತರ 2006 ರಲ್ಲಿ ಅನಿಲ್‌ ಮತ್ತು ಮುಖೇಶ್‌ ಎಲ್ಲ ಕಂಪನಿಗಳನ್ನೂ ವಿಭಜನೆ ಮಾಡಿಕೊಂಡಾಗ ರಿಲಾಯನ್ಸ್‌ ಕಮ್ಯೂನಿಕೇಶನ್ಸ್‌ ಹೊಣೆಯನ್ನು ಅನಿಲ್‌ ಅಂಬಾನಿ ವಹಿಸಿಕೊಂಡರು.

ಒಂದು ಕಾಲದಲ್ಲಿ 500 ರೂ.ಗೆ ಮೊಬೈಲ್‌ ಫೋನ್‌ಗಳನ್ನು ಒದಗಿಸುವ ಮೂಲಕ ದೇಶದಲ್ಲಿ ಮೊಬೈಲ್‌ ಕ್ರಾಂತಿ ಮಾಡಿದ್ದ ಕಂಪನಿ ಈಗ ಇಡೀ ಟೆಲಿಕಾಂ ಕ್ಷೇತ್ರಕ್ಕೆ ಬೆನ್ನು ಹಾಕಿ ನಿಂತಿದೆ. 2002ರಲ್ಲೇ ಅನಿಯಮಿತ ಉಚಿತ ಕರೆಗಳು ಹಾಗೂ ಸಂದೇಶಗಳನ್ನು ಕಳುಹಿಸುವ ಸೌಲಭ್ಯ ಒದಗಿಸಿದ ರಿಲಾಯನ್ಸ್‌ ಕಮ್ಯೂನಿಕೇಶನ್ಸ್‌ ಮೊನ್ನೆ ಮೊನ್ನೆ ಎರಿಕ್ಸನ್‌ಗೆ ಪಾವತಿ ಮಾಡಬೇಕಿದ್ದ 500 ಕೋಟಿ ರೂ. ಪಾವತಿ ಮಾಡಲು ಸಾಧ್ಯವಾಗದೇ ಕಂಪನಿಯನ್ನು ಮುಚ್ಚಲು ಹೊರಟಿದೆ.

Advertisement

ಸಿಡಿಎಂಎ ಸೇವೆಯನ್ನು ಆರಂಭಿಸಿದ್ದ ರಿಲಯನ್ಸ್‌,  ಮಾರುಕಟ್ಟೆಯಲ್ಲಿ ಜಿಎಸ್‌ಎಂ ಅಲೆ ಆರಂಭವಾದಾಗಲೇ ತನ್ನ ದಾರಿ ಬದಲಿಸಲಿಲ್ಲ. ತೀರಾ ಕೆಲವು ವರ್ಷಗಳಿಗೂ ಮೊದಲಿನವರೆಗೂ ರಿಲಾಯನ್ಸ್‌ ಕಮ್ಯೂನಿಕೇಶನ್ಸ್‌ ಸಿಡಿಎಂಎ ಸೇವೆಯನ್ನು ಮಾತ್ರ ಒದಗಿಸುತ್ತಿತ್ತು. ಜಿಎಸ್‌ಎಂ ಸೇವೆಯನ್ನು ಆರಂಭಿಸುವ ಹೊತ್ತಿಗೆ ರಿಲಾಯನ್ಸ್‌ ತನ್ನ ಹಿಂದಿನ ಆಕರ್ಷಣೆಯನ್ನು ಕಳೆದುಕೊಂಡಿತ್ತು. ಅದಾಗಲೇ ಜಿಎಸ್‌ಎಂ ನೆಟ್‌ವರ್ಕ್‌ನಲ್ಲಿ ಇರುವ ಅನುಕೂಲಗಳಿಂದಾಗಿ ಏರ್‌ಟೆಲ್‌, ವೋಡಾಫೋನ್‌ಗಳು ಗಟ್ಟಿಯಾಗಿ ಬೇರೂರಿದ್ದವು.

ಸುಮಾರು ಇದೇ ಹೊತ್ತಿನಲ್ಲಿ ರಿಲಾಯನ್ಸ್‌ ಕಮ್ಯೂನಿಕೇಶನ್ಸ್‌ ಅನಿಲ್‌ ಅಂಬಾನಿ ಕೈಗೆ ಬಂದಿತ್ತು. ಸ್ಪರ್ಧೆಗೆ ಸೂಕ್ತವಾಗಿ ಕಂಪನಿಯನ್ನು ಸಜ್ಜು ಮಾಡುವುದರ ಬದಲಿಗೆ ಈ ಬಿಳಿಯಾನೆಯನ್ನು ನಡೆದ ದಿಕ್ಕಿಗೇ ಹೋಗಲು ಬಿಟ್ಟಿದ್ದರಿಂದಾಗಿಯೇ ಈಗ ಈ ಆನೆ ಇಲ್ಲಿಗೆ ಬಂದು ತಲುಪಿದೆ.

2007 ರಲ್ಲಿ ಧೀರೂಬಾಯಿ ಅಂಬಾನಿಯವರ ಸ್ವತ್ತನ್ನು ಇಬ್ಬರು ಮಕ್ಕಳು ಹಂಚಿಕೊಂಡಂದಿನಿಂದಲೇ ಅನಿಲ್‌ ಅಂಬಾನಿಯ ಒಟ್ಟು ಮೌಲ್ಯ ಕುಸಿಯುತ್ತಲೇ ಸಾಗಿತು. ಅನಿಲ್‌ ಅಂಬಾನಿಯ ಬಹುತೇಕ ಅಂದರೆ ಶೇ. 66 ರಷ್ಟು ಸ್ವತ್ತು ರಿಲಾಯನ್ಸ್‌ ಕಮ್ಯೂನಿಕೇಶನ್ಸ್‌ನಲ್ಲಿ ಇತ್ತು. 2007 ರಲ್ಲಿ ಅನಿಲ್‌ ಬಳಿ ಇದ್ದ ಒಟ್ಟು ಸ್ವತ್ತಿನ ಮೌಲ್ಯ 45 ಬಿಲಿಯನ್‌ ಡಾಲರ್‌. ಇನ್ನೊಂದೆಡೆ ಅಣ್ಣ ಮುಖೇಶ್‌ ಬಳಿ ಇದ್ದ ಆಸ್ತಿ 49 ಬಿಲಿಯನ್‌ ಡಾಲರ್‌. ಆದರೆ 2018ರ ಹೊತ್ತಿಗೆ ಮುಖೇಶ್‌ ಸ್ವತ್ತು 47 ಬಿಲಿಯನ್‌ ಡಾಲರ್‌ ಆಗಿದ್ದರೆ, ಅನಿಲ್‌ ಕೈಯಲ್ಲಿ ಇದ್ದದ್ದು ಬರಿ 2.44 ಬಿಲಿಯನ್‌ ಡಾಲರ್‌.

2010ರ ವೇಳೆಗೆ ಆರ್ಕಾಮ್‌ ಟೆಲಿಕಾಂ ಮಾರುಕಟ್ಟೆಯಲ್ಲಿ ದೈತ್ಯ ಸಂಸ್ಥೆಯಾಗಿತ್ತು. ಆಗ ಇಡೀ ಮಾರುಕಟ್ಟೆಯಲ್ಲಿ ಶೇ. 17ರಷ್ಟು ಪಾಲನ್ನು ಆರ್ಕಾಮ್‌ ಹೊಂದಿತ್ತು. ಅಷ್ಟೇ ಅಲ್ಲ, ಷೇರು ಮಾರುಕಟ್ಟೆಯಲ್ಲಿ ಟೆಲಿಕಾಂ ಷೇರುಗಳ ಪೈಕಿ ಎರಡನೇ ಸ್ಥಾನದಲ್ಲಿ ಆರ್ಕಾಮ್‌ ಇತ್ತು. 2016 ರ ಹೊತ್ತಿಗೆ ಆರ್ಕಾಮ್‌ನ ಷೇರು ಮೌಲ್ಯ ಶೇ. 10ಕ್ಕಿಂತ ಕಡಿಮೆ ಇಳಿದಿತ್ತು. ಜೊತೆಗೆ, ಪ್ರಮುಖ ಟೆಲಿಕಾಂ ಸಂಸ್ಥೆಗಳ ಪಟ್ಟಿಯಲ್ಲೇ ನಾಪತ್ತೆಯಾಗಿತ್ತು. ವಹಿವಾಟು ಕುಸಿದ ಅನುಪಾತಕ್ಕೆ ಸಮಾನವಾಗಿ ಸಾಲದ ಪ್ರಮಾಣ ಹೆಚ್ಚಳವಾಯಿತು. 2009-10 ರಲ್ಲಿ25 ಸಾವಿರ ಕೋಟಿ ರೂ. ಸಾಲ ಇತ್ತು. ಈಗ ಆರ್ಕಾಂ ಸಾಲ 45 ಸಾವಿರ ಕೋಟಿ ರೂ!.

ಸೋದರನ ನೆರವೂ ಉಪಯೋಗಕ್ಕೆ ಬರಲಿಲ್ಲ!
ಸೋದರ ಅನಿಲ್‌ ಅಂಬಾನಿಯ ಆರ್ಕಾಂ ಅನ್ನು ಉಳಿಸುವ ಪ್ರಯತ್ನಕ್ಕೆ ಮುಖೇಶ್‌ ಪ್ರಯತ್ನಿಸಿದರಾದರೂ, ಇದು ಉಪಯೋಗಕ್ಕೆ ಬರಲಿಲ್ಲ. ಬೆಲೆ ನಿಗದಿಯ ವಿಷಯವಾಗಿ ಕಂಪನಿಗಳ ಮಧ್ಯೆ ನಡೆಯುತ್ತಿದ್ದ ಯುದ್ಧಗಳು, ವಿಪರೀತ ಸಾಲ ಮತ್ತು ಲಾಭಾಂಶ ಇಳಿಕೆಯಾಗಿರುವುದು ಸೇರಿದಂತೆ ಹಲವು ಅಂಶಗಳು ಸೇರಿ ಕಂಪನಿ ಮುಳುಗುವ ಸ್ಥಿತಿಗೆ ಬರುತ್ತಿದ್ದಂತೆ, ರಿಲಯನ್ಸ್‌ ಜಿಯೋಗೆ ಎಲ್ಲ ಸ್ವತ್ತನ್ನೂ ಮಾರಾಟ ಮಾಡಲು ನಿರ್ಧರಿಸಲಾಯಿತು. ಆದರೆ ಸಾಲದ ಹೊರೆ ಹೊರಲು ಮುಖೇಶ್‌ ತಯಾರಿರಲಿಲ್ಲ. ತಂದೆ ಸ್ಥಾಪಿಸಿದ ಕಂಪನಿಯನ್ನು ಉಳಿಸಿಕೊಳ್ಳಲು ಮುಖೇಶ್‌ ಪ್ರಯತ್ನಿಸಿದ್ದರು. ಇದು ಮುಖೇಶ್‌ ಅಂಬಾನಿ ಸ್ಥಾಪಿಸಿದ ರಿಲಾಯನ್ಸ್‌ ಜಿಯೋಗೆ ತರಂಗಾಂತರಗಳನ್ನು ಪಡೆಯಲೂ ನೆರವಾಗುತ್ತಿತ್ತು. ಆದರೆ ಸುಮಾರು 45 ಸಾವಿರ ಕೋಟಿ ರೂ. ಸಾಲವನ್ನು ಹೊರುವುದು ಸಾಧುವೂ ಆಗಿರಲಿಲ್ಲ. ಯಾಕೆಂದರೆ, ಅಷ್ಟು ಸ್ವತ್ತು ಆರ್ಕಾಂ ಬಳಿ ಇರಲೂ ಇಲ್ಲ.

ಈ ಮಧ್ಯೆ ಆರ್ಕಾಂ ಪಾವತಿ ಮಾಡಬೇಕಿದ್ದ 500 ಕೋಟಿ ರೂ. ಅನ್ನು ಪಾವತಿ ಮಾಡಿಲ್ಲ ಎಂದು ಎರಿಕ್ಸನ್‌ ಕಂಪನಿ ಕೋರ್ಟ್‌ ಮೊರೆ ಹೋಗಿತ್ತು. ಈಗಾಗಲೇ ನಾವು ಜಿಯೋ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಹೀಗಾಗಿ ಹಣವನ್ನು ಪಾವತಿ ಮಾಡುತ್ತೇವೆ ಎಂದು ಆರ್ಕಾಂ ಸಮಯ ತೆಗೆದುಕೊಂಡಿತು. ಹಾಗಂತ ಆರ್ಕಾಂ ಮಾತಿಗೆ ಬದ್ಧವಾಗಲಿಲ್ಲ.500 ಕೋಟಿ ರೂ. ಪಾವತಿ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಅನಿಲ್‌ ಅಂಬಾನಿ ವಿರುದ್ಧ ಸುಪ್ರೀಂಕೋರ್ಟ್‌ ಮಾತಿಗೆ ತಪ್ಪಿದ ನ್ಯಾಯಾಂಗ ನಿಂದನೆ ಆರೋಪವೂ ಬಂತು! ಈಗ ಉಳಿದಿರುವುದು ಒಂದೇ ದಾರಿ. ಕಂಪನಿಯನ್ನು ದಿವಾಳಿ ಎಂದು ಘೋಷಿಸಿ, ಸಂಪೂರ್ಣವಾಗಿ ಮುಚ್ಚುವುದು.

ಸೋದರನ ಎದುರು ಸೋತ ಅನಿಲ್‌!
ಜಿಎಸ್‌ಎಂ ನೆಟ್‌ವರ್ಕ್‌ ವ್ಯವಸ್ಥೆ ಆರಂಭವಾದಾಗ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲಾಗದ ಸಿಡಿಎಂಎ ವ್ಯವಸ್ಥೆಯಲ್ಲೇ ಮುಂದುವರಿದಿದ್ದ ಅನಿಲರ ಆರ್ಕಾಂ, ಸೋದರನ ರಿಲಾಯನ್ಸ್‌ ಜಿಯೋ ಆರಂಭವಾದಾಗಲೂ ಅಸಹಾಯಕವಾಗಿ ನಿಂತಿತ್ತು. ಅಷ್ಟು ಹೊತ್ತಿಗಾಗಲೇ ಟೆಲಿಕಾಂ ವಲಯದಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಆರ್ಕಾಂ ಹೊಸ ದರ ಸಮರಕ್ಕೆ ತನ್ನನ್ನು ಒಡ್ಡಿಕೊಳ್ಳುವ ಧೈರ್ಯದಲ್ಲಿ ಇರಲೇ ಇಲ್ಲ. ಹಾಗಂತ ಈಗಾಗಲೇ ಮಾಡಿಕೊಂಡ ಸಾಲವನ್ನು ತೀರಿಸಿ, ಕಂಪನಿಯನ್ನು ಮಾರುವುದೂ ಅಷ್ಟು ಸುಲಭವಾಗಿರಲಿಲ್ಲ. ಕಂಪನಿಯ ಗ್ರಾಫ್ ಒಮ್ಮೆ ಇಳಿಮುಖವಾದ ನಂತರ ಅದನ್ನು ಮತ್ತೆ ಮುಮ್ಮುಖವಾಗಿಸುವುದು ಸುಲಭವಾಗಿರಲಿಲ್ಲ. ಜಿಯೋ ದಿನದಿಂದ ದಿನಕ್ಕೆ ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸುತ್ತಲೇ ಸಾಗಿತು. ಈ ವೇಳೆ ಸೋದರ ಮುಖೇಶ್‌ ಎದುರು ಅನಿಲ್‌ ಸೋತಂತೆ ಕಂಡುಬಂದಿದ್ದಂತೂ ಸುಳ್ಳಲ್ಲ.

ಇಡೀ ಅನಿಲ್‌ ಅಂಬಾನಿ ಕೈಯಲ್ಲಿರುವ ಎಲ್ಲ ಸಂಸ್ಥೆಗಳೂ ನಷ್ಟದಲ್ಲಿವೆಯೇ? ಅನಿಲ್‌ ಅಂಬಾನಿ ಸಂಪೂರ್ಣ ನಷ್ಟ ಹೊಂದಿದರೇ ಎಂದು ಕೇಳಿದರೆ ಉತ್ತರ “ಇಲ್ಲ’ ಎಂಬುದೇ ಆದೀತು. ಯಾಕೆಂದರೆ, ಅನಿಲ್‌ ಬಳಿ ರಿಲಾಯನ್ಸ್‌ ಪವರ್‌, ರಿಲಾಯನ್ಸ್‌ ನೇವಲ್‌ ಮತ್ತು ಇಂಜಿನೀಯರಿಂಗ್‌, ರಿಲಾಯನ್ಸ್‌ ಇನಾ#ಸ್ಟ್ರಕ್ಚರ್‌, ರಿಲಾಯನ್ಸ್‌ ಕ್ಯಾಪಿಟಲ್‌ ಕೂಡ ಇವೆ. ಈ ಪೈಕಿ ಆರ್ಕಾಂ ಹೊರತುಪಡಿಸಿದರೆ, ರಿಲಾಯನ್ಸ್‌ ಪವರ್‌ ಕೂಡ ದೊಡ್ಡ ಕಂಪನಿ. ಇದರ ಮಾರುಕಟ್ಟೆ ಬಂಡವಾಳವು ಒಂದು ಕಾಲದಲ್ಲಿ 1.35 ಲಕ್ಷ ಕೋಟಿ ರೂ. ಇತ್ತು. ಈಗ ಇದು 12 ಸಾವಿರ ಕೋಟಿ ರೂ. ಆಗಿದೆ. ಇನ್ನೊಂದೆಡೆ ಅನಿಲ್‌ ಅಂಬಾನಿ ಒಡೆತನದಲ್ಲಿರುವ ರಿಲಾಯನ್ಸ್‌ ಡಿಫೆನ್ಸ್‌ ಮಹತ್ವದ ಪ್ರಗತಿ ಸಾಧಿಸುತ್ತಿದೆ. ಹಲವು ವಿದೇಶಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಿಲಾಯನ್ಸ್‌ ಪವರ್‌ ಕೂಡ ಉತ್ತಮ ಸ್ಥಿತಿಯಲ್ಲಿದೆ. ಡಿಫೆನ್ಸ್‌ ಕಂಪನಿ ಅಡಿಯಲ್ಲಿ ಭಾರತೀಯ ಸೇನೆಗೆ ವಿಚಕ್ಷಣಾ ಬೋಟ್‌ಗಳನ್ನು 2,500 ಕೋಟಿ ರೂ. ವೆಚ್ಚದಲ್ಲಿ ತಯಾರಿಸುತ್ತಿದೆ. ಕರಾವಳಿ ರಕ್ಷಣಾ ಪಡೆಗೆ ಹಡಗುಗಳನ್ನೂ ಇದು ತಯಾರಿಸುತ್ತಿದೆ. ಇನ್ನೊಂದೆಡೆ ಅಮೆರಿಕದ ನೌಕಾಪಡೆಯ ಹಡಗುಗಳ ರಿಪೇರಿಗೆ ಒಪ್ಪಂದವನ್ನೂ ಮಾಡಿಕೊಂಡಿದೆ. ಸಿಂಗಾಪುರ ಹಾಗೂ ಜಪಾನಿಗೂ ಹಡಗುಗಳನ್ನು ನಿರ್ಮಿಸಿಕೊಡುತ್ತಿದೆ. ನಾಗ್ಪುರದಲ್ಲಿ ಕಂಪನಿಯ ಘಟಕವಿದ್ದು, ಇದರಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಎಲ್ಲ ಕಂಪನಿಗಳಿಂದಲೂ ರಿಲಾಯನ್ಸ್‌ ಗ್ರೂಪ್‌ 45 ಸಾವಿರ ಕೋಟಿ ಸಾಲ ಹೊಂದಿದೆ.

ಡಿಟಿಎಚ್‌ ಮಾರಾಟ
ಆರ್ಕಾಂನ ಈ ಎಲ್ಲ ಅಪಸವ್ಯಗಳ ಮಧ್ಯೆಯೂ ಬಿಗ್‌ ಟಿವಿ ಎಂಬ ಹೆಸರಿನಲ್ಲಿದ್ದ ಡಿಟಿಎಚ್‌ ಸೇವೆಯನ್ನು ಸ್ಥಗಿತಗೊಳಿಸಿದ್ದ ಅನಿಲ್‌, ಅದನ್ನು ಪ್ಯಾಂಟೆಲ್‌ ಟೆಕ್ನಾಲಜಿಸ್‌ ಮತ್ತು ವೀಕಾನ್‌ ಮೀಡಿಯಾ ಸಂಸ್ಥೆಗೆ ಮಾರಿದ್ದಾರೆ. ಬಿಗ್‌ ಟಿವಿ ಡಿಟಿಎಚ್‌ ಖರೀದಿ ಮಾಡಿದ ಈ ಸಂಸ್ಥೆಗಳು ಇಂಡಿಪೆಂಡೆಂಟ್‌ ಟಿವಿ ಹೆಸರಿನಲ್ಲಿ ಡಿಟಿಎಚ್‌ ಸೇವೆಯನ್ನು ಆರಂಭಿಸಲು ನಿರ್ಧರಿಸಿವೆ.

– ಕೃಷ್ಣ ಭಟ್‌
 

Advertisement

Udayavani is now on Telegram. Click here to join our channel and stay updated with the latest news.

Next