ಸುರತ್ಕಲ್: ಹೆದ್ದಾರಿ 66ರಲ್ಲಿ ಸಾಗುವಾಗ ಅಂತಾರಾಷ್ಟ್ರೀಯ ಬೀಚ್‌ನಿಂದ ಹಿಡಿದು ಪಾರ್ಕ್‌ವರೆಗೆ ಹಲವಾರು ಪ್ರವಾಸಿ ತಾಣಗಳಿದ್ದು, ವಾಹನಗಳಲ್ಲಿ ಬರುವ ಪ್ರವಾಸಿಗರು ದಾರಿ ತಪ್ಪಿ ಎಲ್ಲೆಲ್ಲೋ ಅಲೆಯುವ ಸ್ಥಿತಿ. ಕಾರಣ ನೆಟ್ ಸರ್ಚ್ ಗೊಂದಲ!
ಹೌದು, ಪಣಂಬೂರು ಬೀಚ್ ಎಂದು ಗೂಗಲ್ ಎಂಜಿನ್ ದೂರದ ಮೀನಕಳಿಯ ತೋರಿಸುವ ಮೂಲಕ ಮತ್ತೆ ತಿರುಗಿ ಬರುವ ಪ್ರಮೇಯ ವಾಹನ ಸವಾರರದ್ದು, ಇನ್ನೊಂದೆಡೆ ದೂರದ ಹೊಸಬೆಟ್ಟು, ಬೈಕಂಪಾಡಿ ಹೀಗೆ ಅಲೆಯುವ ಸ್ಥಿತಿ. ಕೆಲವು ಬಾರಿ ಇಂತಹ ಗೊಂದಲ ಏರ್ಪಡುತ್ತಿದ್ದು, ಪ್ರವಾಸಿಗರು ದುಬಾರಿ ಪೆಟ್ರೋಲ್ – ಡೀಸೆಲ್ ಹಾಕಿ ಅಲೆದಾಡಿ ನಷ್ಟ ಮಾಡಿಕೊಳ್ಳುತ್ತಿದ್ದಾರೆ.
ಕೆಲವರು ಇಂಟರ್‌ನೆಟ್ ತೋರಿಸಿದ ಬೀಚ್‌ನಲ್ಲಿ ಸ್ನಾನ ಮಾಡಿ ಮುಂದೆ ಹೋಗುತ್ತಾರೆ. ಇನ್ನುಳಿದವರು ಗ್ರಾಮಸ್ಥರ ಬಳಿ ಮಾಹಿತಿ ಪಡೆದು ಹಿಂದಿರುಗುತ್ತಾರೆ. ಹಲವಾರು ಪ್ರವಾಸಿಗರು ಸರಿಯಾಗಿ ತಲುಪಿದರೆ, ಇನ್ನು ಕೆಲವರಿಗೆ ಮಾಹಿತಿ ಸಮೀಪದ ಬೀಚ್ ದಾರಿ ಕಂಡು ಬರುತ್ತದೆ. ಕಳೆದ ಹಲವಾರು ವರ್ಷಗಳಿಂದ ಇಂತಹ ಸಮಸ್ಯೆಯಿದ್ದು, ಇದನ್ನು ಸರಿಪಡಿಸುವ ಕಾರ್ಯ ಆಗಬೇಕಿದೆ.
ಇನ್ನೊಂದು ಮೂಲಗಳ ಪ್ರಕಾರ ಪ್ರವಾಸಿ ಆಕರ್ಷಣೆ ಪಡೆಯುವಂತೆ ಮಾಡಲು, ಇಲ್ಲವೇ ಇತರ ಬೀಚ್‌ಗಳಲ್ಲಿ ವ್ಯಾಪಾರ ವಹಿವಾಟು ವೃದ್ಧಿಗೆ ಮ್ಯಾಪ್ ಹ್ಯಾಕ್ ಮೂಲಕ ಪ್ರವಾಸಿಗರು ಬರುವಂತೆ ಮಾಡುವ ಕುತಂತ್ರವೂ ಇದೆ ಎಂಬ ಅಭಿಪ್ರಾಯವೂ ಇದೆ. ಅಭಿವೃದ್ಧಿಯಾಗುತ್ತಿದೆ ಬೀಚ್ ಇಲ್ಲಿನ ಪಣಂಬೂರು ಬೀಚ್ ಖಾಸಗಿ, ಸರಕಾರಿ ಸಹಭಾಗಿತ್ವದಲ್ಲಿ
Related Articles
ಮಾಹಿತಿ ಫಲಕದಲ್ಲಿ ಸೇರಿಸಲು ಕ್ರಮ
ಪ್ರವಾಸಿಗರಿಗೆ ಹೆಚ್ಚಿನ ಮಾಹಿತಿ ನಮ್ಮ ವೈಬ್‌ಸೈಟ್‌ನಲ್ಲಿ ಸಿಗುತ್ತದೆ. ದೇವಸ್ಥಾನ ಸಹಿತ ಕರಾವಳಿಯಲ್ಲಿ ಪ್ರವಾಸಿಗರ ಯಾನದ ಸಂದರ್ಭ ಅನುಕೂಲಕ್ಕಾಗಿ ಮಾಹಿತಿ ಅಳವಡಿ ಸಿದ್ದೇವೆ. ಕೆಲವು ಬಾರಿ ಹ್ಯಾಕರ್ಸ್‌ಗಳ ಕೈವಾಡದಿಂದ ತಾಣಗಳ ರೂಟ್ ಮ್ಯಾಪ್ ಅದಲು ಬದಲಾಗುವ ಸಾಧ್ಯತೆ ಅಲ್ಲಗೆಳೆಯುಂತಿಲ್ಲ. ಹೊಸ ಪ್ರವಾಸಿ ಆಕರ್ಷಣೆಯ ಕೇಂದ್ರಗಳನ್ನು ಮಾಹಿತಿ ಫಲಕದಲ್ಲಿ ಸೇರಿಸಲು ಇಲಾಖೆಯು ಬೇಕಾದ ಕ್ರಮ ತೆಗೆದುಕೊಳ್ಳುತ್ತದೆ.
-ಮಾಣಿಕ್ಯ,
ಡಿ.ಡಿ. ಪ್ರವಾಸೋದ್ಯಮ ಇಲಾಖೆ
-ಲಕ್ಷ್ಮೀ ನಾರಾಯಣ ರಾವ್