Advertisement

12 ವಾಹನಗಳ ಬ್ಯಾಟರಿಗಳನ್ನು ಕದ್ದ ದುಷ್ಕರ್ಮಿಗಳು: ಪ್ರಕರಣ ದಾಖಲು

07:20 PM Sep 15, 2022 | Team Udayavani |

ದೇವನಹಳ್ಳಿ: ಪಟ್ಟಣದ ಪ್ರಶಾಂತ್ ನಗರದಲ್ಲಿರುವ ಎಸ್ ಎಲ್ ಎನ್ ಎಸ್ ಭಾರತ್ ಗ್ಯಾಸ್ ಗೋಡೌನ್ ಬಳಿ ನಿಲ್ಲಿಸಲಾಗಿದ್ದ 12 ವಾಹನಗಳ ಬ್ಯಾಟರಿಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ.

Advertisement

ಇದನ್ನೂ ಓದಿ:ನಟಿ ನೋರಾ ಫತೇಹಿಯನ್ನು 6 ಗಂಟೆಗಳ ಕಾಲ ಪ್ರಶ್ನಿಸಿದ ದೆಹಲಿ ಪೊಲೀಸರು

7 ಆಟೋ, 2 ಟಿಪ್ಪರ್, ಒಂದು 407, ಟಾಟಾ ವಾಹನಗಳ ಬ್ಯಾಟರಿಗಳನ್ನು ಕದ್ದು ಪರಾರಿಯಾಗಿದ್ದು, ಬೆಳಿಗ್ಗೆ ಕೆಲಸಕ್ಕೆ ಬಂದ ಚಾಲಕರು ವಾಹನಗಳನ್ನು ಸ್ಟಾರ್ಟ್ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆ ನಡೆದ ಸಂದರ್ಭ ವಾಹನಗಳ‌ ಕಾವಲಿಗಿದ್ದ ಸೆಕ್ಯುರಿಟಿ ಸ್ಥಳದಲ್ಲಿಲ್ಲದೇ‌ ಇದ್ದದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಕಳ್ಳತನವಾಗಿರುವ ವಾಹನಗಳ ಬ್ಯಾಟರಿಗಳ ಮೌಲ್ಯ 61,000 ಎಂದು ಅಂದಾಜಿಸಲಾಗಿದೆ.

ದೇವನಹಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next