Advertisement

ಮಿರಾಜ್‌ 2000 vs ಎಫ್-16 

12:30 AM Feb 28, 2019 | |

ಭಾರತ ತನ್ನ ಶತ್ರು ದೇಶದ ಕುರಿತು ಸದಾ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿತ್ತು. ಪಾಕಿಸ್ಥಾನ ಒಂದು ಯುದ್ಧ ವಿಮಾನ ಖರೀದಿಸಿದ್ದರೆ, ಭಾರತ ಅದಕ್ಕೆ ಸಮಾನಾದ ಇನ್ನೊಂದು ಯುದ್ಧ ವಿಮಾನವನ್ನು ಖರೀಧಿಮಾಡುತ್ತಿತ್ತು. ಭಾರತ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ತನ್ನ ಸೇನಾ ಶಸ್ತ್ರಾಗಾರ ಸೇರಿಸಿಕೊಂಡರೆ, ಪಾಕಿಸ್ಥಾನ ಅಷ್ಟೇ ಸಾಮರ್ಥ್ಯದ ಯುದ್ಧ ವಿಮಾನವನನು ಕೊಂಡುಕೊಳ್ಳುತ್ತಿತ್ತು. ಇದೇ ಘಟನೆಗಳಿಗೆ ಭಾರತದ ಮಿರಾಜ್‌ 2000 ಹಾಗೂ ಪಾಕ್‌ನ ಎಫ್-16 ಯುದ್ಧ ವಿಮಾನಗಳು ಉಭಯ  ದೇಶಗಳ ಬತ್ತಲಿಕೆಯನ್ನು ಸೇರಿದೆ. 

Advertisement

ಪಾಕಿಸ್ಥಾನ ತನಗೆ ಶಸ್ತ್ರಾಸ್ತ ಪೂರೈಕೆ ಮಾಡುತ್ತಿದ್ದ ಅಮೆರಿಕಾದಿಂದ ಎಫ್ 16 ಫೈಟರ್‌ ಜೆಟ್‌ ಅನ್ನು ಖರೀದಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ 1982ರಲ್ಲಿ 36 ಸಿಂಗಲ್‌ ಸೀಟರ್‌ ಮಿರಾಜ್‌ 2000 ಹಾಗೂ ಎರಡು ಸೀಟುಗಳಿದ್ದ 4 ಮಿರಾಜ್‌ ಅನ್ನು ಫ್ರಾನ್ಸ್‌ನ ಡಸ್ಟಾಲ್‌ ಏವಿಯೇಶನ್‌ ಕಂಪೆನಿಯಿಂದ ಖರೀದಿಸಿತ್ತು. ಬಳಿಕ ಅದರ ಅನುಮತಿ ಪಡೆದು ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಅದನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗಿದೆ. ಭಾರತ ಮಿರಾಜ್‌ 2000 ಯುದ್ಧ ವಿಮಾನವನ್ನು ಜೈಶ್‌ ಉಗ್ರರ ವಿರುದ್ಧ ಬಳಸಿದ ಕಾರಣಕ್ಕೆ ಪಾಕಿಸ್ಥಾನ ಮಿರಾಜ್‌ಗೆ ಸಮಾನದ ಎಫ್ 16 ಅನ್ನು ಬುಧವಾರ ಭಾರತದ ಗಡಿಯತ್ತ ಕಳುಹಿಸಿದೆ.

1 ಎಫ್ 16 ಅಮೆರಿಕಾ ತಯಾರಿಸಿದ ಅತ್ಯುನ್ನತ ಯುದ್ಧ ವಿಮಾನವಾಗಿದೆ. ಸಿಂಗಲ್‌ ಎಂಜಿನ್‌ ಹೊಂದಿದ್ದು, ಮಲ್ಟಿ ಟಾಸ್ಕಿಂಗ್‌ ಮಾಡುವ ಸಾಮರ್ಥ್ಯ ಹೊಂದಿದೆ. ಎರಡು ಸೀಟುಗಳ ಹಾಗೂ ಒಂದು ಸೀಟುಗಳ ವಿಮಾನಗಳಿವೆ.

2 ಇದನ್ನು ಯಾವುದೇ ಸಂದರ್ಭ ತನ್ನಿಚ್ಚೆಗೆ ಬಂದ ಕಡೆ ತಿರುಗಿಸಬಹುದಾಗಿದೆ. ಬಂದ ದಾರಿಯಲ್ಲೇ ಯೂಟರ್ನ್ ಹೊಡೆಯುವ ಸಾಮರ್ಥ್ಯ ಇದೆ. ಮಾತ್ರವಲ್ಲದೇ 360 ಡಿಗ್ರಿ ವೀಕ್ಷಣೆ ಪಡೆಯಬಹುದಾಗಿದೆ.

3 ಎಡಭಾಗದ ವಿಂಗ್‌ ಅಥವ ರೆಕ್ಕೆಯಲ್ಲಿ 
ಫಿರಂಗಿ ಹೊಂದಿದೆ. ಕ್ಷಿಪಣಿಗಳು, ಬಾಂಬು ಗಳು, ಮತ್ತು ಸ್ಫೋಟಗಳನ್ನು ಸುಲಭವಾಗಿ ಶೇಖರಿಸಿಡಬಹುದಾದ ಶಸ್ತ್ರಾಗಾರ ಇದೆ.

Advertisement

4 ಆಂತರಿಕ ವಲ್ಕನ್‌ ಕ್ಯಾನನ್‌ ಅತ್ಯಂತ ಹೆಚ್ಚಿನ ಪ್ರಮಾಣದ ಫೈರಿಂಗ್‌ ಸಾಮರ್ಥ್ಯ ಹೊಂದಿದೆ. ನಿಮಿಷಕ್ಕೆ 6,000 ಸುತ್ತುಗಳ ವೇಗದಲ್ಲಿ ಫೈರಿಂಗ್‌ ಮಾಡಬಹುದಾಗಿದೆ.

5 450 ಕೆ.ಜಿ. ಬಾಂಬುಗಳೊಂದಿಗೆ 550 ಕಿ.ಮೀ. ಸತತ ಕಾದಾಡುವ ಸಾಮರ್ಥ್ಯ ಹೊಂದಿದೆ. ಸಣ್ಣ ಪ್ರದೇಶದಲ್ಲೂ ಹಾರಾಡಿ ಬೆಂಕಿಯನ್ನೂ ಇದು ಎದುರಿಸಬಹುದಾಗಿದೆ.

1 1 ಹಾಗೂ 2 ಸಿಟುಗಳ ಮಲ್ಟಿ ರೋಲ್‌ ಫೈಟರ್‌ ಇದಾಗಿದ್ದು, 48 ಫೀಟ್‌ ಉದ್ದ, 17 ಫೀಟ್‌ ಎತ್ತರ ಇದೆ. 29 ಫೀಟ್‌ ಉದ್ದದ ರೆಕ್ಕೆಗಳಿವೆ.

2 7,500 ಕೆ.ಜಿ. ಭಾರವಿದ್ದು, 13,800 ಕೆ.ಜಿ. ಭಾರ ಹೊರುವ ಸಾಮರ್ಥ್ಯ ಹೊಂದಿದೆ. 2,336 ಕಿ.ಮೀ. ವೇಗದಲ್ಲಿ ಸಂಚರಿಸಲಿದ್ದು, 1,110 ಕನಿಷ್ಠ ವೇಗ ಮಿತಿ ಹೊಂದಿದೆ.

3 1,550 ಕಿ.ಮೀ. ಒಂದು ಡ್ರಾಪ್‌ ಟ್ಯಾಂಕ್‌ ಅಥವಾ ಬಾಹ್ಯ ಇಂಧನ ತೊಟ್ಟಿಯನ್ನು ಹೊಂದಿದೆ. ಇಂಧನ ಖಾಲಿ ಯಾದಾಗ ಕಳಚಿಕೊಳ್ಳಬಹು ದಾಗಿದೆ. 3,335 ಕೀ.ಮೀ. ಚಲಿಸುವ ಸಾಮರ್ಥ್ಯವನ್ನು ಅಂತರ್‌ ನಿರ್ಮಿತ ಟ್ಯಾಂಕ್‌ ಹೊಂದಿದೆ.

4 2000 ಎರಡು 30 ಎಂಎಂ ಈಉಊಅ554 ರಿವಾಲ್ವರ್‌ ಕ್ಯಾನನ್‌ ಹೊಂದಿದೆ. ಪ್ರತಿ ಗನ್‌ ಸುಮಾರು 125 ಸುತ್ತುಗಳನ್ನು ಹೊಂದಿದೆ. ಬಾಹ್ಯ ಆಯುಧಗಳನ್ನು ಅಥವಾ ಇಂಧನವನ್ನು ಸಾಗಿಸಲು ವಿನ್ಯಾಸಗೊಳಿಸಿದ ಒಟ್ಟಾರೆ ಒಂಬತ್ತು ಹಾರ್ಡ್‌ ಪಾಯಿಂಟ್‌ ಅಥವಾ ಶಸ್ತ್ರಾಸ್ತ್ರ ಕೇಂದ್ರಗಳಿವೆ.

5 ವಿಮಾನವು ಕನಿಷ್ಟ 2 ಲೇಸರ್‌-ನಿರ್ದೇಶಿತ ಬಾಂಬುಗಳನ್ನು ಹಿಡಿದಿಟ್ಟುಕೊಳ್ಳಬಹುದಾಗಿದೆ. ಲೇಸರ್‌ ಗುರಿ ಮಾಡಿದ ಪ್ರದೇಶದಲ್ಲಿ ನೇರವಾಗಿ ಯುದ್ಧ ಮಾಡಬಹುದಾಗಿದೆ.

ಮಿರಾಜ್‌ ಮೆಚ್ಚಿಕೊಂಡಿದ್ದೇ ಅದಕ್ಕೆ
ಗಾಳಿ ಮತ್ತು ವಾಯು ನೆಲದ ಯುದ್ಧದಲ್ಲಿ ವೇಗವಾಗಿ ಮಿರಾಜ್‌ 2000 ಅನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಇದು ಮಲ್ಟಿ ರೇಡಾರ್‌ ವ್ಯವಸ್ಥೆಯನ್ನು ಹೊಂದಿದೆ. ಒಂದೇ-ಎಂಜಿನ್‌ ಹೊಂದಿದ್ದರೂ ಮಲ್ಟಿರೋಲ್‌ ಫೈಟರ್‌ ಇದಾಗಿದೆ.

ಕಳೆದ ಮೂರು ದಶಕಗಳಿಂದ ಭಯೋತ್ಪಾದನೆಗೆ ತುತ್ತಾಗಿರುವ  ಶ್ರೀಲಂಕಾ ಕೂಡ ಪುಲ್ವಾಮಾ ದಾಳಿಯನ್ನು  ಖಂಡಿಸಿದ್ದು,  ಜಾಗತಿಕ ಭಯೋತ್ಪಾದನೆ  ಸಂಪೂರ್ಣ ನಿರ್ಮೂಲನೆಗೆ  ಬದ್ಧವಾಗಿದೆ. ಶ್ರೀಲಂಕಾವೂ ಜಾಗತಿಕ ಶಾಂತಿ ಹಾಗೂ ದಕ್ಷಿಣ ಏಷ್ಯಾ ದೇಶಗಳ ಸ್ಥಿರತೆ ಬೆಂಬಲಿಸಲಿದೆ.  ಈಗ ಉಂಟಾಗಿರುವ  ಎಲ್ಲ ಸಮಸ್ಯೆಗಳನ್ನು ದ್ವಿಪಕ್ಷೀಯ  ಮಾತುಕತೆ ಹಾಗೂ ವಿಶ್ವಾಸದಿಂದ ಬಗೆಹರಿಸಿಕೊಳ್ಳಬೇಕು. 
– ಶ್ರೀಲಂಕಾ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next