ಬೆಂಗಳೂರು: ನಿನ್ನೆ ರಾಜಸ್ಥಾನದ ಉದಯಪುರದಲ್ಲಿ ನಡೆದ ಘಟನೆ ಅತ್ಯಂತ ಹೇಯ ಕೃತ್ಯ. ಅವರ ಸಾವಿಗೆ ಸಂತಾಪ ಸೂಚಿಸ್ತೇನೆ. ಒಂದು ಪೋಸ್ಟರ್ ಹೇಳಿಕೆ ಬೀಬತ್ಸ ಘಟನೆಗೆ ಕಾರಣವಾಗಿದೆ. ಇಸ್ಲಾಮಿನ ಭಯೋತ್ಪಾದನೆ ಮುಂದುವರೆದ ಭಾಗ ಇದಾಗಿದೆ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ನಗರದಲ್ಲಿ ಮಾತಾನಾಡಿದ ಅವರು, ಕಾಶ್ಮೀರದಲ್ಲಿ ಬೆಲೆ ತೆರಬೇಕಾಯ್ತು. ಕೇರಳದಲ್ಲಿ, ಕರ್ನಾಟಕದಲ್ಲಿ ಆಗಿತ್ತು, ಇಂದು ರಾಜಸ್ಥಾನದಲ್ಲಿ ಆಗಿದೆ. ಇಸ್ಲಾಂ ಬಗ್ಗೆಯ ಹೇಳಿಕೆ ಕುತ್ತಿಗೆ ಕಡಿಯೋ ಮಟ್ಟಿಗೆ ಆಗಿದೆ. ಇದರ ಹಿಂದೆ ಒಬ್ಬರಲ್ಲ, ಅನೇಕರು ಇದ್ದಾರೆ. ಕಾನೂನಿನ ಪ್ರಕಾರ ಶಿಕ್ಷೆ ಆಗಲಿದೆ ಎಂದರು.
ಇಡೀ ಸಮುದಾಯ ಎದ್ದುನಿಂತು ಇಸ್ಲಾಂ ಭಯೋತ್ಪಾದನೆ ವಿರುದ್ಧ ನಿಂತು ಹೋರಾಡಬೇಕಿದೆ. ಇದೇ ರೀತಿ ಮುಂದುವರೆದರೆ ಬದುಕೋದು ಬಹಳಷ್ಟು ಕಷ್ಟಕರವಾಗಲಿದೆ. ನಮ್ಮ ಮನೆಯ ಶಾಸಕನ ಮನೆಗೆ ಬೆಂಕಿ ಹಾಕುವ ಕೆಲಸ ಮಾಡಿದರು. ಎಲ್ಲರೂ ಒಂದಾಗಿ ದೇಶದ ಘಟನೆಯಾಗಿ ಖಂಡಿಸಿ ಹತ್ತಿಕ್ಕೋ ಕೆಲಸ ಮಾಡಬೇಕೆಂದರು.
ಲಘುವಾಗಿ ಖಂಡಿಸೋ ಕೆಲಸ ಕಾಂಗ್ರೆಸ್ ಮತ್ತು ಇತರೆ ಪಕ್ಷ ಮಾಡಿದೆ. ಸಿದ್ದರಾಮಯ್ಯ ಟ್ವೀಟ್ ಮಾಡಿ ಎದೆ ನಡುಗಿತು ಎಂದಿದ್ದಾರೆ. ಇದು ಕೇವಲ ಟ್ವೀಟ್ ನಲ್ಲಿ ಮಾತ್ರವಾ ಅಂತ ಗೊತ್ತಿಲ್ಲ.? ಹಿಂದೆ ಇಲ್ಲಿ ಅನೇಕ ಹಿಂದೂ ಯುವಕರ ಹತ್ಯೆ ಆದಾಗ ಎಂದೂ ಇವರಿಗೆ ಎದೆ ನಡುಗಲಿಲ್ಲ. ನಾನು ರಾಜಕಾರಣ ಮಾಡೋದಿಲ್ಲ. ತಲೆ ಕಡಿಯುವ ಕೆಲಸ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇರಬೇಕಾ ಎಂದು ಪ್ರಶ್ನಿಸಿದರು.
Related Articles
ಇದನ್ನೂ ಓದಿ: ಉದಯಪುರ ವ್ಯಕ್ತಿ ಶಿರಚ್ಛೇಧ; ದೇಶ ತಲೆ ತಗ್ಗಿಸೋ ವಿಚಾರ- ಆಂದೋಲಾ ಸ್ವಾಮಿ
ಈ ಘಟನೆ ಧಿಡೀರ್ ಅಂತ ಆಗಿಲ್ಲ. ಅಲ್ಲಿನ ಸರ್ಕಾರ ಯಾಕೆ ಬಿಗಿಯಾಗಿ ತೆಗೆದುಕೊಳ್ಳಲಿಲ್ಲ. ಇದರಲ್ಲೂ ತುಷ್ಟೀಕರಣ ರಾಜಕಾರಣ ಇರಬಹುದು.ಇದರ ಹಿಂದೆ ಸಾವಿರಾರು ಜನರ ಕೈವಾಡ ಇದೆ. ಪ್ರಧಾನಿಗೆ ಹೆದರಿಸೋ ಕೆಲಸ ಮಾಡ್ತಿದ್ದಾರೆ ಎಂದರು.
ಬಿ.ಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರಿಗೆ ಕಲ್ಲಂಗಡಿ ಘಟನೆ ಆದಾಗ ಮನ ಕರಗುತ್ತದೆ. ಈಗ ರಕ್ತದೋಕುಳಿ ಆದಾಗ ಅವರಿಗೆ ಉಸಿರು ಎತ್ತೋದಿಲ್ಲ. ಹರ್ಷ ಕಗ್ಗೊಲೆ ಆದಾಗ ಅವರಿಗೆ ಏನೂ ಅನಿಸಲಿಲ್ಲ. ಕಾಂಗ್ರೆಸ್ ನಾಯಕನ ಮನೆಗೆ ಬೆಂಕಿ ಬಿದ್ದಿದೆ. ಈ ಕತ್ತಿ ಎಲ್ಲರ ಕುತ್ತಿಗೆಗೂ ಬರಲಿದೆ ಅನ್ನೋದು ಅವರಿಗೂ ಗೊತ್ತಾಗಿದೆ. ಇಂತವರಿಗೆ ಇಲ್ಲಿ ಇರಲು ಅವಕಾಶ ನೀಡಬೇಕಾ ಎಂದರು.