Advertisement

ಅಲ್ಪಸಂಖ್ಯಾತರ ಹಾಸ್ಟೆಲ್‌ಗ‌ಳಿಗೆ ಬೇಕಿದೆ ಕಾಯಕಲ್ಪ

10:49 AM Jul 08, 2018 | |

ಆಳಂದ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಇಲಾಖೆ ಅಡಿ ನಡೆಯುವ ವಸತಿ ನಿಲಯಗಳು ಅವ್ಯವಸ್ಥೆ ಆಗರವಾಗಿವೆ. ಪ್ರತಿವರ್ಷ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿದರೂ ಕೆಲವೊಂದು ವಸತಿ ನಿಲಯಗಳು ಇನ್ನು ಬಾಡಿಗೆ ಕಟ್ಟಡಗಳಲ್ಲೇ ನಡೆಯುತ್ತಿವೆ. ಇನ್ನು ಕೆಲವು ಸರ್ಕಾರಿ ಕಟ್ಟಗಳಲ್ಲಿ ನಡೆಯುತ್ತಿವೆ.

Advertisement

ಕೆಲವು ಬಾಲಕಿಯರ ಹಾಗೂ ಬಾಲಕರ ವಸತಿ ನಿಲಯಗಳಲ್ಲಿ ವಾರ್ಡ್‌ನಗಳ ದರ್ಪ ಹೆಚ್ಚಿದೆ. ವಿದ್ಯಾರ್ಥಿಗಳಿಗೆ ಇವೆಲ್ಲವನ್ನು ಸಹಿಸಿಕೊಳ್ಳುವ ನರಕಯಾತನೆ ಒಂದೆಡೆಯಾದರೆ, ನಿಲಯಗಳಲ್ಲಿ ಮೂಲಸೌಕರ್ಯಗಳ ಕೊರತೆ ಮಧ್ಯೆ ಅಭ್ಯಸಿಸುವಂತೆ ಆಗಿದೆ. ಈ ಕುರಿತು ಧ್ವನಿ ಎತ್ತಿದರೂ ಪ್ರಯೋಜನವಿಲ್ಲದಂತೆ ಆಗಿದೆ. ಕೋರಳ್ಳಿ ಗ್ರಾಪಂ ವ್ಯಾಪ್ತಿಗೊಳಪಡುವ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಎದುರುಗಡೆ ಇರುವ ನೂತನ ಸರ್ಕಾರಿ ಕಟ್ಟಡವೊಂದು ಉದ್ಘಾಟನೆ ಮುನ್ನವೇ ಅವಸಾನದ ಅಂಚಿಗೆ ತಲುಪಿದೆ.

ಈ ಕುರಿತು ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರ ತಾಲೂಕು ಅಧಿಕಾರಿಗಳಿಗೆ ಮಾಹಿತಿ ಕೇಳಿದಾಗ ಈ ಕಟ್ಟಡ ಯಾವ ಯೋಜನೆಯಡಿ, ಏಕೆ ಕಟ್ಟಿದ್ದಾರೆಂದು ಮಾಹಿತಿ ಲಭ್ಯವಿಲ್ಲ ಎಂದು ತಿಳಿಸುತ್ತಿದ್ದಾರೆ. ಆದರೆ ಈ ಕಟ್ಟಡ ಬಹುತೇಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದ್ದಾಗಿದ್ದು, ಸ್ವಾಧಿಧೀನ ಪಡಿಸಿಕೊಳ್ಳದೇ ಇರುವುದರಿಂದ ಶಿಥಿಲಾವಸ್ಥೆಗೆ ತಲುಪಿದೆ.

ತಾಲೂಕಿನಲ್ಲಿ ಅಲ್ಪ ಸಂಖ್ಯಾತರ ಇಲಾಖೆ ಅಡಿ ನಡೆಯುವ ವಸತಿ ನಿಲಯಗಳ ಪೈಕಿ ಪಟ್ಟಣದಲ್ಲಿಎರಡು ಹಾಗೂ ಹಡಲಗಿಯಲ್ಲಿ ಒಂದು, ಕೋರಳ್ಳಿಯ ಮೊರಾರ್ಜಿ ವಸತಿ ಶಾಲೆಗಳು ಸೇರಿ ಒಟ್ಟು 225 ವಿದ್ಯಾರ್ಥಿಗಳು ಇರಬೇಕು. ಆದರೆ ಇಲ್ಲಿ ವಿದ್ಯಾರ್ಥಿಗಳು ಕಾಣುವುದೇ ಅಪರೂಪ ಎನ್ನಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ 12 ವಸತಿ ನಿಲಯಗಳಲ್ಲಿ 9 ಮ್ಯಾಟ್ರಿಕ್‌ ಪೂರ್ವ, ಎರಡು ಮ್ಯಾಟ್ರಿಕ್‌ ನಂತರದ ಒಂದು ವಸತಿ ಶಾಲೆಯನ್ನು ಒಳಗೊಂಡು ಒಟ್ಟು 625 ಮಕ್ಕಳ ಸೇರ್ಪಡೆ ಗುರಿ ಹೊಂದಲಾಗಿದೆ. ಕಟ್ಟಡಕ್ಕೆ ನೀವೇಶನ ಇದ್ದರು ಸಹ 12ರಲ್ಲಿ ಎರಡು ಬಾಡಿಗೆ ಕಟ್ಟಡಗಳಲ್ಲೇ ಕಾರ್ಯ ನಿರ್ವಹಿಸುತ್ತಿವೆ. ಕಡಗಂಚಿ, ಬೆಳಮಗಿಯಲ್ಲಿ ಟ್ಯಾಂಕ ರ್‌ಮೂಲಕ ನೀರು ಪೂರೈಯಿಸಲಾಗುತ್ತಿದೆ.  ಹಿಂದುಳಿದ ವರ್ಗಗಳ ಇಲಾಖೆ ವಸತಿ ನಿಲಯದಲ್ಲಿ 850 ಮಕ್ಕಳ ಸೇರ್ಪಡೆ ಗುರಿ ಇದ್ದು, 11 ಸ್ವಂತ ಕಟ್ಟಡವಿದ್ದರೆ ನಾಲ್ಕು ಬಾಡಗಿ ಕಟ್ಟಡದಲ್ಲಿ ನಡೆಯುತ್ತಿವೆ.

 ಈ ವಸತಿ ನಿಲಯ ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ ಅವರ ಸ್ವಕ್ಷೇತ್ರವಾದ ತಡಕಲ್‌ ಗ್ರಾಮದಲ್ಲಿದೆ. 
ಮಾದನಹಿಪ್ಪರಗಾ, ಬೆಳಮಗಿ, ಕಮಲಾನಗರ, ಚಿಂಚನಸೂರ, ಕಡಗಂಚಿ, ಮುದ್ದಡಗಾ, ವಸತಿ ನೀಲಯಗಳ ದುರಸ್ತಿ ಮತ್ತು ಉನ್ನತಿಕರಣ ಪ್ರಗತಿಯಲ್ಲಿದೆ. ಒಟ್ಟು 12 ಹುದ್ದೆಗಳಲ್ಲಿ 5 ವಾರ್ಡ್‌ನ್‌ಗಳ ಹುದ್ದೆ ಖಾಲಿ ಇವೆ. 2017-18ರಲ್ಲಿ 13 ಹೊಸ ಸಿಬ್ಬಂದಿ ನೇರ ನೇಮಕಾತಿಯಿಂದ ಬಂದಿದ್ದಾರೆ. 28 ಸಿಬ್ಬಂದಿ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದಾರೆ. ಬರುವ ದಿನಗಳಲ್ಲಿ ಎಲ್ಲ
ವಸತಿ ನಿಲಯಗಳನ್ನು ಕಾಪಾಡಲಾಗುವುದು.
 ಸದಾನಂದ ಜಿ. ಹಾಗರಗಿ, ಸಮಾಜ ಕಲ್ಯಾಣಾಧಿಕಾರಿ

Advertisement

ತಡಕಲ್‌ ವಸತಿ ನಿಲಯದ ಸ್ವಚ್ಚತೆಗೆ ಆದ್ಯತೆ ನೀಡಿ, ಕಾಂಪೌಂಡ್‌ ವಾಲ್‌ ನಿರ್ಮಿಸಲು ಗ್ರಾಪಂ ಸಹಾಯ ಪಡೆಯಲಾಗುವುದು. ಇಲಾಖೆಯಲ್ಲಿ 52 ಮಂಜೂರಾದ ಹುದ್ದೆಗಳ ಪೈಕಿ 39 ಹುದ್ದೆ ಭರ್ತಿ ಮಾಡಲಾಗಿದೆ. 15 ಜನ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ. ಅವ್ಯವಸ್ಥೆ ಕಂಡು ಬಂದಲ್ಲಿ ಸರಿಪಡಿಸಲಾಗುವುದು.
 ಅಂಬವ್ವಾ , ವಿಸ್ತರಣಾಧಿಕಾರಿಗಳು, ಹಿಂದುಳಿದ ವರ್ಗದ ಇಲಾಖೆ

ಅಲ್ಪ ಸಂಖ್ಯಾಂತರ ಇಲಾಖೆಗೆ ಸಂಬಂಧಿ ಸಿದ ಕೆಲವೊಂದು ವಸತಿ ನಿಲಯಗಳನ್ನು ಜಿಲ್ಲೆಯ ಹಿರಿಯ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಈ ಕುರಿತು ಮಾಹಿತಿ ನೋಡಿ ಹೇಳಬೇಕಾಗುತ್ತದೆ.
 ಚಿದಂಬರ. ತಾಲೂಕು, ಅಲ್ಪ ಸಂಖ್ಯಾತರ ಅಧಿಕಾರಿ

ಮಹಾದೇವ ವಡಗಾಂವ್‌

Advertisement

Udayavani is now on Telegram. Click here to join our channel and stay updated with the latest news.

Next