Advertisement

ಹಮೀದ್‌ ಅನ್ಸಾರಿ ವಿರುದ್ಧ ಬಿಜೆಪಿ ನಾಯಕರು ಗರಂ

08:35 PM Jan 27, 2022 | Team Udayavani |

ನವದೆಹಲಿ: ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರು ಜಾಗತಿಕ ವೇದಿಕೆಯೊಂದರಲ್ಲಿ ಭಾರತದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಭಾರತ ಹಿಂದೂ ರಾಷ್ಟ್ರವಾಗುತ್ತಿದೆ, ಜನರಿಗೆ ಅಭದ್ರತೆ ಕಾಡಲಾರಂಭಿಸಿದೆ ಎಂದು ಅವರು ಹೇಳಿದ್ದು, ಈ ವಿಚಾರವಾಗಿ ಅನೇಕರು ಆಕ್ರೋಶ ಹೊರಹಾಕಲಾರಂಭಿಸಿದ್ದಾರೆ.

Advertisement

ಭಾರತ-ಅಮೆರಿಕ ಮುಸ್ಲಿಂ ಕೌನ್ಸಿಲ್‌ನ ವರ್ಚುವಲ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಮೀದ್‌ ಅನ್ಸಾರಿ ಮತ್ತು ಅಮೆರಿಕದ ಸಂಸತ್ತಿನ ಮೂವರು ಸದಸ್ಯರು, ಭಾರತದಲ್ಲಿನ ಮಾನವ ಹಕ್ಕು ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದರು. “ದೇಶದಲ್ಲಿ ನಾಗರಿಕ ರಾಷ್ಟ್ರವಾದಕ್ಕೆ ವ್ಯತಿರಿಕ್ತವಾದ ತೋರಿಕೆಯ ಸಾಂಸ್ಕೃತಿಕ ರಾಷ್ಟ್ರವಾದದ ಅನುಕರಣೆ ಹೆಚ್ಚಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ’ ಎಂದು ಅನ್ಸಾರಿ ದೂರಿದ್ದರು.

ಬಿಜೆಪಿ ಆಕ್ರೋಶ:

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಟಾಸ್‌  ನಖ್ವಿ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು, “ಅನ್ಸಾರಿ ಅವರು ಭಾಗವಹಿಸಿದ ಕಾರ್ಯಕ್ರಮವನ್ನು ನಡೆಸಿದ್ದು, ಪಾಕ್‌ನ ಐಎಸ್‌ಐ ಮತ್ತು ಸ್ಟೂಡೆಂಟ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್ ಇಂಡಿಯಾ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ತಂಡ. ಆದರೆ ಭಾರತದ ಸಾಂವಿಧಾನಿಕ ಹುದ್ದೆಯಲ್ಲಿದ್ದವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ವಿಚಿತ್ರ’ ಎಂದಿದ್ದಾರೆ. ಬಿಜೆಪಿ ನಾಯಕ ಶಹನವಾಜ್‌ ಹುಸೇನ್‌, “ಅನ್ಸಾರಿ ಅವರು ಉಪ ರಾಷ್ಟ್ರಪತಿಯಾಗಿದ್ದಾಗಲೇ ಅನೇಕ ವಿವಾದಗಳನ್ನು ಮಾಡಿಕೊಂಡಿದ್ದರು’ ಎಂದು ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next