Advertisement

ಕುಣಿಗಲ್: ಅಪ್ರಾಪ್ತ ಬಾಲಕಿ ಅಪಹರಣ; ಪ್ರಕರಣ ದಾಖಲು

07:11 PM Sep 18, 2022 | Team Udayavani |

ಕುಣಿಗಲ್: ಅಪ್ರಾಪ್ತ ಬಾಲಕಿಯನ್ನು ವ್ಯಕ್ತಿಯೋರ್ವ ಅಪರಿಸಿಕೊಂಡು ಹೋಗಿರುವ ಘಟನೆ ತಾಲೂಕಿನ ಹುತ್ರಿದುರ್ಗ ಹೋಬಳಿಯಲ್ಲಿ ನಡೆದಿದ್ದು, ಈ ಸಂಬಂಧ  ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಶನಿವಾರ ತನ್ನ ಗ್ರಾಮದಿಂದ ಬಾಲಕಿ ಪಟ್ಟಣದ ಕಾಲೇಜಿಗೆ ಬಂದ ವೇಳೆ ತಾಲೂಕಿನ ಹುತ್ರಿದುರ್ಗ ಹೋಬಳಿ ಹುಣಸೇಕುಪ್ಪೆ ಗ್ರಾಮದ ಯೊಗೀಶ್ ಎಂಬ ವ್ಯಕ್ತಿಯು ಬಾಲಕಿಯನ್ನು ಅಪಹರಿಸಿದ್ದಾನೆ ಎನ್ನಲಾಗಿದ್ದು ಪೋಷಕರು ಆರೋಪಿ ವಿರುದ್ದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿಯ ಸಂಬಂಧಿಕರ ಅಂಗಡಿಗೆ ಹಲವು ದಿನಗಳಿಂದ ಬಾಲಕಿ ಹೋಗುತ್ತಿದ್ದಳು ಎನ್ನಲಾಗಿದ್ದು, ಆಕೆಯನ್ನು ಯೋಗಿಶನೊಂದಿಗೆ ಪ್ರೀತಿಸುವಂತೆ ಆರೋಪಿ ಸಂಬಂಧಿಗಳು ಒತ್ತಾಯ ಮಾಡಿದ್ದರು ಎಂದು ಬಾಲಕಿ ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ.

ಆರೋಪಿಯು ಹಲವು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಿನ್ನೆ ಬಾಲಕಿ ಕುಣಿಗಲ್ ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಬೆಳಗ್ಗೆ ಹೋದವಳು ಸಂಜೆ ಎಷ್ಟು ಹೊತ್ತಾದರೂ ಮನೆಗೆ ಬಾರದ ಕಾರಣ ಪೊಷಕರು ಹಲವು ಕಡೆ ಹುಡುಕಾಡಿದ್ದಾರೆ. ಬಾಲಕಿ ಸಿಗದ ಕಾರಣ ಭಾನುವಾರ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next