ಸಿಕಾರ್ : ತನ್ನ ಮುದ್ದಿನ ನಾಯಿ ಕೊಳಕ್ಕೆ ಜಾರಿ ಬಿದ್ದಾಗ ಅದನ್ನು ಪಾರುಗೊಳಿಸಲೆಂದು ಕೊಳಕ್ಕೆ ಜಿಗಿದ ಏಳು ವರ್ಷದ ಬಾಲಕ ಮತ್ತು, ಆ ಬಾಲಕನನ್ನು ರಕ್ಷಿಸಲು ಮುಂದಾದ ಆತನ ತಾಯಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.
ನೀಮ್ ಕಾ ಠಾಣಾ ಪೊಲೀಸ್ ಸ್ಟೇಶನ್ ವ್ಯಾಪ್ತಿಯ ಜಿಂಥಿಲಾ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.
ನೀರಲ್ಲಿ ಮುಳುಗಿ ಮೃತಪಟ್ಟ ಬಾಲಕನನ್ನು ರವೀಂದ್ರ ಎಂದೂ ಆತನ ತಾಯಿಯನ್ನು 35ರ ಹರೆಯದ ಗೀತಾ ದೇವಿ ಎಂದೂ ಗುರುತಿಸಲಾಗಿದೆ.
ಬಹಳ ಹೊತ್ತಾದರೂ ತಾಯಿ, ಮಗ ಮನೆಗೆ ಮರಳಿ ಬಾರದಿದ್ದಾಗ ಅವರನ್ನು ಹುಡುಕಿಕೊಂಡ ಹೋದ ಪತಿ ರಾಮ್‌ಶರಣ್ ಮತ್ತು ಇತರ ಸಂಬಂಧಿಕರಿಗೆ ಕೊಳದಲ್ಲಿ ತಾಯಿ-ಮಗನ ಶವ ತೇಲುತ್ತಿದ್ದುದು ಕಂಡು ಬಂತು.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ.