Advertisement

ಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಚುನಾವಣೆ: ಶಂಕರ್‌

12:33 PM Mar 26, 2017 | Team Udayavani |

ನಂಜನಗೂಡು: ರಾಜಕಾರಣದಲ್ಲಿ ಗೆಲುವು ಸೋಲು ಹಾಗೂ ಶಾಸಕ, ಮಂತ್ರಿ ಸ್ಥಾನ ಸಹಜ. ಅವಕಾಶ ಸಿಕ್ಕಾಗ ಜನ ಮೆಚ್ಚುವ ಕೆಲಸ ಮಾಡಿದಾಗ ಜನತೆ ಅವರನ್ನು ಕೈ ಬಿಡುವುದಿಲ್ಲ. ಕೇವಲ ಮಂತ್ರಿ ಪದವಿ ಕೈ ಬಿಟ್ಟಿದ್ದಕ್ಕೆ ಇಲ್ಲಿನ ಮಾಜಿ ಸಚಿವರು ಅನಗತ್ಯವಾಗಿ ಚುನಾವಣೆಯನ್ನು ತಂದಿರುವುದು ವಿಷಾದನೀಯ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌. ಶಂಕರ್‌ ಕಿಡಿಕಾರಿದರು.

Advertisement

ನಗರದಲ್ಲಿ ಶನಿವಾರ ನಡೆದ ಬೃಹತ್‌ ಮಹಿಳಾ ಬೃಹತ್‌ ಸಮಾವೇಶದಲ್ಲಿ ಅವರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್‌ಪ್ರಸಾದ್‌ ವಿರುದ್ಧ ಕಿಡಿಕಾರಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಮಾತನಾಡಿ, ಕಾಂಗ್ರೆಸ್‌ ಪಕ್ಷವು ಸ್ತ್ರೀ ಶಕ್ತಿ ಸಂಘಗಳನ್ನು ಹುಟ್ಟು ಹಾಕಿ ಅವುಗಳ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮ ರೂಪಿಸಿದೆ. 3 ಲಕ್ಷದ ವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ ಎಂದರು.

ನಂಜನಗೂಡು ನಗರದ ಅಭಿವೃದ್ಧಿಗಾಗಿ 130 ಕೋಟಿ ರೂ. ತಂದಿದ್ದು, ಇದರಿಂದ ನಗರ ಸರ್ವಾಂಗೀಣ ಅಭಿವೃದ್ಧಿಯಾಗುತ್ತಿದೆ. ಮೈಸೂರಿನ ಉಪನಗರವಾಗಿ ನಂಜನಗೂಡನ್ನು ಮಾಡಲು ಮುಖ್ಯಮಂತ್ರಿಗಳು ತಮಗೆ ಸೂಚಿಸಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಂತ್ರವೇ ಈ ಚುನಾವಣೆಯ ಮುಖ್ಯ ಸಂದೇಶವಾಗಿದ್ದು, ಕಳಲೆ ಕೇಶವಮೂರ್ತಿ ಅವರನ್ನು ಗೆಲ್ಲಿಸುವುದರ ಮೂಲಕ ಕ್ಷೇತ್ರದ ಪ್ರಗತಿಗಾಗಿ ತಮಗೆ ಶಕ್ತಿ ನೀಡಿ ಎಂದು ಕೋರಿದರು.

ವೇದಿಕೆಯಲ್ಲಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌, ಹಿಂದುಳಿದ ವರ್ಗಗಳ ಮುಖಂಡ ಎಂ.ಡಿ ಲಕ್ಷ್ಮೀನಾರಾಯಣ್‌, ರಾಜ್ಯ ಮಹಿಳಾ ಉಪಾಧ್ಯಕ್ಷೆ ಡಾ. ನಾಗಲಕ್ಷ್ಮೀ, ಜಿಲ್ಲಾ ಮಹಿಳಾಧ್ಯಕ್ಷೆ ನಂದಿನಿ,, ರಾಧಾಮಣಿ, ಬ್ರಿಜೇಶ್‌ ಕಾಳಪ್ಪ, ಚಂದ್ರಶೇಖರ್‌, ಮೈಸೂರು ಜಿಲ್ಲಾಧ್ಯಕ್ಷ ಡಾ.ವಿಜಯಕುಮಾರ್‌, ಉಪಾಧ್ಯಕ್ಷ ಗುರುಪಾದಸ್ವಾಮಿ, ಇಂಧನ್‌ ಬಾಬು, ತಾಪಂ ಸದಸ್ಯ ಪದ್ಮನಾಭ, ಕೆ.ಬಿ.ಸ್ವಾಮಿ, ಮಹಿಳಾ ಅಧ್ಯಕ್ಷೆ ಸೌಭಾಗ್ಯ, ಕಾರ್ಯದರ್ಶಿ ನಿರ್ಮಲಾ,, ರಾಚನಾಯಕ, ಪಿ.ಶ್ರೀನಿವಾಸ್‌, ಎನ್‌.ಇಂದ್ರ, ಹಳ್ಳದ ಮಹೇಶ್‌, ಧರ್ಮೇಂದ್ರ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next