Advertisement

ಕಂಟೈನ್‌ಮೆಂಟ್‌ ಝೋನ್‌ಗೆ ಸಚಿವ ಭೇಟಿ

07:00 AM May 15, 2020 | Lakshmi GovindaRaj |

ಮುಳಬಾಗಿಲು: ಕೊರೊನಾ ತಡೆಗಾಗಿ ಮುಂಜಾಗ್ರತೆಯಾಗಿ ಕಂಟೆನ್‌ಮೆಂಟ್‌ ಝೋನ್‌ ಗಳಲ್ಲಿನ ಪ್ರತಿ ಮನೆಯಲ್ಲೂ ಆರೋಗ್ಯ ತಪಾಸಣೆ ಮಾಡುವಂತೆ ಅಬಕಾರಿ ಸಚಿವ ಎಚ್‌.ನಾಗೇಶ್‌ ತಿಳಿಸಿದರು.

Advertisement

ನಗರದ ಬುಸಾಲಕುಂಟೆ  ಕೊರೊನಾ ಸೋಂಕಿತ ವೃದ್ದೇ ಕುಟುಂಬ ವಾಸವಾಗಿದ್ದ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಿನಿವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿ, ತಾಲೂಕಿನಲ್ಲಿ ಕಂಡು ಬಂದಿರುವ 5 ಕೊರೊನಾ  ಪ್ರಕರಣಗಳಿಂದ ಜನರಿಗೆ ಸೋಂಕು ಹರಡದಂತೆ ನೋಡಿಕೊಳ್ಳಲು ಮುಂಜಾಗ್ರತೆಯಾಗಿ ಸೀಲ್‌ಡೌನ್‌ ಮಾಡಲಾಗಿದೆ.

ಆದರೂ ಮನೆಗಳಿಂದ ಹೊರ ಬರದಂತೆ ನೋಡಿಕೊಳ್ಳಲು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು. ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿ  ಮನೆಗೂ ಭೇಟಿ ನೀಡಿ ಆರೋಗ್ಯ ತಪಾಸಣೆಗೊಳಿಸಬೇಕು ಮತ್ತು ಜನರಲ್ಲಿ ಶುಚಿತ್ವ ಕಾಯ್ದುಕೊಳ್ಳಲು ಅರಿವು ಮೂಡಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವರ್ಣಶ್ರೀಗೆ ಸೂಚಿಸಿದರು. ಹಳ್ಳಿಗಳಲ್ಲಿ ನೀರಿನ ಅಭಾವ  ಉಂಟಾಗದಂತೆ ನೋಡಿಕೊಳ್ಳಬೇಕು, ಸ್ವತ್ಛತಾ ನೋಡಿಕೊಳ್ಳಲು ಮತ್ತು ಆ ಜೋನ್‌ ವ್ಯಾಪ್ತಿಯಲ್ಲಿನ ಜನರಿಗೆ ಅಗತ್ಯವುಳ್ಳ ವಸ್ತು ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಆರೋಗ್ಯ ಇಲಾಖೆಗೆ ಅಗತ್ಯವುಳ್ಳ 1000 ಪಿಪಿಇ  ಕಿಟ್‌ ನೀಡಲು ತಾಲೂಕು ಆರೋಗ್ಯಾಧಿಕಾರಿ ಡಾ.ವರ್ಣಶ್ರೀ ಸಚಿವರನ್ನು ಕೋರಿದರು. ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್‌ ರೆಡ್ಡಿ, ಎ.ಎಸ್‌ಪಿ.ಜಾಹ್ನವಿ, ಸಹಾಯಕ ಕಮಿಷನರ್‌ ಸೋಮಶೇಖರ್‌, ಡಿವೈಎಸ್‌ಪಿ ನಾರಾಯಣಪ್ಪ, ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್‌, ತಹಶೀಲ್ದಾರ್‌ ರಾಜಶೇಖರ್‌, ಪೌರಾಯುಕ್ತ ಶ್ರೀನಿವಾಸ್‌ಮೂರ್ತಿ, ತಾಪಂ ಇಒ ಎಂ.ಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ.ವರ್ಣಶ್ರೀ, ಎಇಇ ಗೋಪಾಲ್‌ ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next