Advertisement

ಪ್ರಾಥಮಿಕ ಆರೋಗ್ಯ ಕೇಂದ್ರ, ಕೋವಿಡ್‌ ಸೆಂಟರ್‌ಗಳಿಗೆ ಸಚಿವ ಭೇಟಿ

04:07 PM May 07, 2021 | Team Udayavani |

ಚಾಮರಾಜನಗರ: ಜಿಲ್ಲಾ ಉಸ್ತುವಾರಿಸಚಿವ ಎಸ್‌. ಸುರೇಶ್‌ ಕುಮಾರ್‌ ಅವರುಶಾಸಕ ನಿರಂಜನಕುಮಾರ್‌ ಅವರೊಂದಿಗೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವಿವಿಧ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ,ಕೋವಿಡ್‌ ಸೆಂಟರ್‌ ಗಳಿಗೆ ಭೇಟಿ ನೀಡಿಪರಿಶೀಲನೆ ನಡೆಸಿದರು.

Advertisement

ಮೊದಲಿಗೆ ಚಾಮರಾಜನಗರ ತಾಲೂಕಿನಮಲ್ಲಯ್ಯನಪುರದ ಮೊರಾರ್ಜಿ ದೇಸಾಯಿವಸತಿ ಶಾಲೆಯಲ್ಲಿ ತೆರೆಯಲಾಗುತ್ತಿರುವ ಕೋವಿಡ್‌ ಕೇರ್‌ ಕೇಂದ್ರಕ್ಕೆ ಭೇಟಿ ನೀಡಿಬಳಿಕ ತೆರಕಣಾಂಬಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಪರಿಶೀಲಿಸಿದರು.ಆರೋಗ್ಯ ಕೇಂದ್ರಕ್ಕೆ ಪ್ರತಿನಿತ್ಯ ಎಷ್ಟುಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ.

ಯಾವಬಗೆಯ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿಯೊಬ್ಬರ ದಾಖಲಾತಿಯನ್ನುಸರಿಯಾಗಿ ನಿರ್ವಹಿಸಲಾಗುತ್ತಿದ್ದೆಯೇಎಂಬ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.ಇದೇ ವೇಳೆ ಆರೋಗ್ಯ ಕೇಂದ್ರಕ್ಕೆ ಬಂದಿದ್ದಜನರೊಂದಿಗೂ ಮಾತನಾಡಿ ಆರೋಗ್ಯ ವಿಚಾರಿಸಿದರು.

ಬಳಿಕ ಗುಂಡ್ಲುಪೇಟೆ ಪಟ್ಟಣದಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನವ್ಯವಸ್ಥೆಗಳನ್ನು ಪರಿಶೀಲಿಸಿದರು. ಕಬ್ಬಳ್ಳಿ,ಬೇಗೂರು ಆಸ್ಪತ್ರೆಗೂ ತೆರಳಿ ಆರೋಗ್ಯಸಂಬಂಧಿ ಒದಗಿಸಿರುವ ಸೇವೆಗಳನ್ನು ಸಚಿವರು ವೀಕ್ಷಿಸಿದರು.

ಇದೇ ವೇಳೆಆಸ್ಪತ್ರೆಯಲ್ಲಿ ಲಭ್ಯವಿರುವ ಆಮ್ಲಜನಕಪೂರೈಕೆ, ಹಾಸಿಗೆಗಳ ಅನುಕೂಲತೆ ಇತರೆವೈದ್ಯಕೀಯ ಸೌಲಭ್ಯಗಳನ್ನು ಯಾವಪ್ರಮಾಣದಲ್ಲಿ ಇವೆ ಎಂಬ ಬಗ್ಗೆ ಪರಿಶೀಲಿಸಿದರು.

Advertisement

ವೈದ್ಯರು ಅಧಿಕಾರಿಗಳಿಂದವಿವರವಾಗಿ ಮಾಹಿತಿ ಪಡೆದರು.ಕೋವಿಡ್‌ ಸೋಂಕಿತರಿಗೆ ಯಾವುದೇತೊಂದರೆಯಾಗದಂತೆ ತ್ವರಿತವಾಗಿ ಸ್ಪಂದಿಸಬೇಕು. ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಕೋವಿಡ್‌ ಸೋಂಕಿತರೊಂದಿಗೆಹೆಚ್ಚು ಜನರು ಬರದಂತೆ ಸಾಮಾಜಿಕಅಂತರ ಕಾಪಾಡಿಕೊಳ್ಳಲು ತಿಳಿವಳಿಕೆನೀಡಬೇಕು.

ಚಿಕಿತ್ಸೆಯಲ್ಲಿ ಯಾವುದೇನ್ಯೂನತೆಗಳು ಬಾರದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿಸಚಿವರು ಸೂಚಿಸಿದರು.ವೀರನಪುರದ ಮೊರಾರ್ಜಿ ದೇಸಾಯಿವಸತಿ ಶಾಲೆಯಲ್ಲಿ ತೆರೆಯಲಾಗಿರುವಕೋವಿಡ್‌ ಕೇಂದ್ರ ಹಾಗೂ ಬೇಗೂರಿನಕಿತ್ತೂರು ರಾಣಿ ಚೆನ್ನಮ್ಮ ಶಾಲೆಯಲ್ಲಿಸಜ್ಜುಗೊಳಿಸಲಾಗುತ್ತಿರುವ ಕೋವಿಡ್‌ಕೇಂದ್ರಕ್ಕೆ ಭೇಟಿ ನೀಡಿ ಸಚಿವರುಪರಿಶೀಲಿಸಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್‌ ರವಿಶಂಕರ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ್‌ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next