Advertisement

ಕೋವಿಡ್‌ ಸೆಂಟರ್‌ಗೆ ಸಚಿವರ ಭೇಟಿ

03:09 PM Apr 25, 2021 | Team Udayavani |

ಕೆ.ಆರ್‌.ಪೇಟೆ: ಪಟ್ಟಣದ ಹೊರ ವಲಯದ ಹೊಸಹೊಳಲು ಗ್ರಾಮದ ಚಿಕ್ಕಕೆರೆ ಕೋಡಿಯ ಬಳಿ ಬಿಸಿಎಂ ವಸತಿ ನಿಲಯದಲ್ಲಿ ಸ್ಥಾಪಿಸಿರುವ ಕೋವಿಡ್‌ ಕೇರ್‌ ಸೆಂಟರ್‌ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರು ಭೇಟಿ ನೀಡಿ ಪರಿಶೀಲಿಸಿ  ಕೋವಿಡ್ ಸೋಂಕಿತರ ಆರೋಗ್ಯ ವಿಚಾರಿಸಿದರು.

Advertisement

ನಿಮಗೆ ಒಳ್ಳೆಯ ಊಟ ಸಿಗ್ತಾ ಇದೆಯಾ, ಕುಡಿಯಲು ಬಿಸಿ ನೀರು ನೀಡ್ತಾರ, ವಸತಿ ವ್ಯವಸ್ಥೆ ಚೆನ್ನಾಗಿದೆಯಾ,ಮೊಟ್ಟೆ, ಚಿಕನ್‌, ಮಟನ್‌ ನೀಡ್ತಿದ್ದಾರ ಎಂದು ಪ್ರಶ್ನಿಸಿದ ಸಚಿವರು, ರೋಗಿಗಳಿಂದ ದೊರೆತ ಉತ್ತಮ ಪ್ರತಿಕ್ರಿಯೆಗಳನ್ನು ಆಲಿಸಿದರು. ಆದಷ್ಟು ಬೇಗಗುಣಮುಖರಾಗಿ ಮನೆಗೆ ಹೋಗ್ತಿàರಿ, ಯೋಚನೆಮಾಡಬೇಡಿ, ವೈಯಕ್ತಿಕ ಸ್ವಚ್ಛತೆಗೆ ಒತ್ತು ನೀಡಿ, ಬೆಳಗಿನ ಸಮಯದಲ್ಲಿ ಯೋಗಾಭ್ಯಾಸ ಹಾಗೂ ಧ್ಯಾನ ಮಾಡಿ, ಕೋವಿಡ್ ಎರಡನೇ ಅಲೆಯ ಭೀಕರತೆ ಅಪಾಯಕಾರಿಯಾಗಿದೆ ಎಂದರು.

ಮಾಂಸಹಾರ ಊಟ: ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಆರೋಗ್ಯ ಸಮಸ್ಯೆ ಬಗ್ಗೆ ಕರ್ತವ್ಯ ನಿರತ ವೈದ್ಯರು ಮತ್ತು ದಾದಿಯರಗಮನಕ್ಕೆ ತನ್ನಿ, ಭಾನುವಾರ ಆದ್ದರಿಂದ ಮಟನ್‌, ಚಿಕನ್‌ಊಟ ಹಾಕಿಸಿ ಎಂದು ತಹಶೀಲ್ದಾರ್‌ ಎಂ.ಶಿವಮೂರ್ತಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ನಿರ್ದೇಶನ ನೀಡಿದರು.

ಕೋವಿಡ್ ಹೆಲ್ತ್‌ ಕೇರ್‌ ಸೆಂಟರ್‌ನಲ್ಲಿ ದೊರೆಯುತ್ತಿರುವ ಉತ್ತಮ ಚಿಕಿತ್ಸೆ, ಊಟ ಮತ್ತು ವಸತಿಯ ಬಗ್ಗೆ ಕೋವಿಡ್‌ಸೋಂಕಿತರಿಂದ ಪ್ರತಿಕ್ರಿಯೆ ಸ್ವೀಕರಿಸಿದ ಸಚಿವರು, ಹೆಲ್ತ್‌ಕೇರ್‌ ಸೆಂಟರ್‌ಅನ್ನು ಉತ್ತಮವಾಗಿ ನಿರ್ವಹಣೆಮಾಡುತ್ತಿರುವ ತಹಶೀಲ್ದಾರ್‌ ಶಿವಮೂರ್ತಿ, ತಾಲೂಕುಆರೋಗ್ಯಾಧಿಕಾರಿ ಡಾ. ಮಧುಸೂದನ್‌, ಪುರಸಭೆ ಮುಖ್ಯಾಧಿಕಾರಿ ಸತೀಶ್‌ ಕುಮಾರ್‌ ಮತ್ತು ಬಿಸಿಎಂಅಧಿಕಾರಿ ವೆಂಕಟೇಶ್‌ ಅವರಿಗೆ ಇದೇ ರೀತಿ ಉತ್ತಮ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next