ನೆಲಮಂಗಲ: ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಅವರು ಮತ್ತು ಹೈಕಮಾಂಡ್ ಏನು ಹೇಳುತ್ತಾರೋ ಅದೇ ಅಂತಿಮ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ವಿಜಯೇಂದ್ರ ಸಚಿವ ಸಂಪುಟಕ್ಕೆ ಬರುವ ಕುರಿತು ಪ್ರತಿಕ್ರಿಯಿಸಿ ಅವರು ಸಂಪುಟಕ್ಕೆ ಸೇರಿದರೆ ಸೇರಲಿ ಬಿಡಿ. ಯಾರು ಬೇಡ ಅಂತಾರೆ ನನ್ನ ಆಸೆ ಏನಿಲ್ಲ ಅರ್ಹತೆ ಇರುವವರಿಗೆ ಕೊಡುತ್ತಾರೆ ಅಷ್ಟೇ ಎಂದರು.
ಅವರು ಸಂಪುಟಕ್ಕೆ ಸೇರೋದನ್ನು ಬೇಡ ಹೇಳುವುದಕ್ಕೆ ನಾವು ಮತ್ತು ನಾವು ಯಾಕೆ ಬೇಡ ಅನ್ನಬೇಕು. ಮುಂದಿನ ಚುನಾವಣೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯುತ್ತದೆ ಎಂದರು.
ಇದನ್ನೂ ಓದಿ: ಸ್ವಂತ ಹಿತವನ್ನು ರಾಜ್ಯದ ಹಿತ ಎಂದು ಬಯಸಿದರೆ.. ಸಿಟಿ ರವಿ ಟಾಂಗ್ ಕೊಟ್ಟದ್ದು ಯಾರಿಗೆ ?
Related Articles
ಇನ್ನೊಂದೆಡೆ ನಗರದಲ್ಲಿ ಮಾತಾನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಳೆ ಮೈಸೂರು ಭಾಗದ ಮತ್ತಷ್ಟು ನಾಯಕರು ಬಿಜೆಪಿ ಪಕ್ಷ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದರಲ್ಲಿ ರಾಜಕೀಯ ಬೇಡ. ವಿಜಯೇಂದ್ರ ಸಚಿವ ಸಂಪುಟ ಸೇರ್ತಾರ ಎಂಬ ಮಾತಿಗೆ ಉತ್ತರಿಸಿದ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.