Advertisement

ಅಗ್ನಿಪಥ್‌: ಯುವಕರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್‌

05:41 PM Jun 26, 2022 | Team Udayavani |

ಚಾಮರಾಜನಗರ: ದೇಶ ಏಕತೆ ಮತ್ತು ಭದ್ರತೆ ಹಾಗೂ ಯುವ ಜನಾಂಗದಲ್ಲಿ ರಾಷ್ಟ್ರೀಯತೆಯನ್ನು ಹೆಚ್ಚಿಸುವ ಅಗ್ನಿಪಥ್‌ ಯೋಜನೆ ಇವತ್ತಿನದಲ್ಲ. ಆದರೆ ಕಾಂಗ್ರೆಸ್‌ ಪಕ್ಷ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಟೀಕಿಸಿದರು.

Advertisement

ಚಾಮರಾಜನಗರ ಜಿಲ್ಲಾ ಪ್ರವಾಸ ಹಾಗು ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯವನ್ನು ಉದ್ಘಾಟಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಗ್ನಿಪಥ್‌ ಯೋಜನೆಯಲ್ಲಿ ಸಣ್ಣಪುಟ್ಟ ಲೋಪದೋಷಗಳಿರಬಹುದು, ಅದನ್ನು ಸರ್ಕಾರ ಸರಿಪಡಿಸುತ್ತದೆ. ಯುವಕರನ್ನು 18 ವರ್ಷಕ್ಕೆ ರಾಷ್ಟ್ರದ ಮುಖ್ಯವಾಹಿನಿಗೆ ತರುವ ಮಹತ್ತರ ಯೋಜನೆ ಇದಾಗಿದೆ ಎಂದರು.

ಕಾಂಗ್ರೆಸ್‌ನವರ ಕೈಯಲ್ಲಿ ಈ ಯೋಜನೆ ಜಾರಿಗೆ ತರಲಾಗಲಿಲ್ಲ. ಯೋಜನೆಯೆ ಸಾಧಕ-ಬಾಧಕಗಳನ್ನು ಕುಳಿತು ಚರ್ಚಿಸಲಿ. ನಮಗೆ ದೇಶದ ಒಳಿತು ಮುಖ್ಯ ಅಷ್ಟೇ. ನಾನು ಸಹಾ ಅಗ್ನಿಪಥ್‌ ಮುಂದುವರೆಸಿ ಎಂದು ಸಂಬಂಧಪಟ್ಟ ಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದರು. ಬಾಳಾ ಠಾಕ್ರೆಗೆ ಬಹಳ ಖುಷಿಯಾಗಿದೆ: ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಕಾಂಗ್ರೆಸ್‌ ಮೈತ್ರಿಕೂಟದ ಸರ್ಕಾರ ಪತನಗೊಳ್ಳುವುದರಿಂದ ಯಾರಿಗೆ ಖುಷಿಯಾಗಿದಿಯೋ ಗೊತ್ತಿಲ್ಲ. ಇದರಿಂದ ಬಾಳಾಠಾಕ್ರೆಗೆ ಖುಷಿಯಾಗಿದೆ ಎಂದು ಸೋಮಣ್ಣ ತಿಳಿಸಿದರು.

ಶಿವಸೇನೆಗೂ ಕಾಂಗ್ರೆಸ್‌ಗೂ ಏನು ಸಂಬಂಧ? ಅವರಿಬ್ಬರು ಎಣ್ಣೆ ಸೀಗೆಕಾಯಿಯಂತೆ ಇದ್ದವರು. ಅವರಿಬ್ಬರೂ ಹೇಗೆ ಒಂದಾದರು? ಎಂದು ಪ್ರಶ್ನೆ ಮಾಡಿದ ಸೋಮಣ್ಣ ಈ ಸರ್ಕಾರ ಪತನಕ್ಕೆ ಶಿವಸೇನೆ ಶಾಸಕರೇ ಕಾರಣ ಹೊರತು ಬಿಜೆಪಿ ಅಲ್ಲ. ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿರುವ ಬಿಜೆಪಿ ನಾಯಕರು ಈ ಎಲ್ಲಾ ಬೆಳವಣಿಗೆಯನ್ನು ವಿಶ್ಲೇಷಣೆ ಮಾಡಿ, ಮುಂದೆ ಯಾವ ಹೆಜ್ಜೆ ಇಡಬೇಕೆಂಬುದನ್ನು ನಮ್ಮ ನಾಯಕರು ನಿರ್ಧರಿಸಲಿದ್ದಾರೆ. ಮಹಾರಾಷ್ಟ್ರದ ಜನರ ನಿರೀಕ್ಷೆಯಂತೆ ನಡೆದುಕೊಳ್ಳುತ್ತದೆ ಎಂದರು.

ಕಾಂಗ್ರೆಸ್‌ ನವರು 75 ವರ್ಷ ದೇಶವನು ಆಳಿದ್ದಾರೆ. ಪೀಳಿಗೆ ಬದಲಾವಣೆಯಾದಂತೆ ಸರ್ಕಾರಗಳು ಬದಲಾಗುತ್ತವೆ. ಇದರ ಬಗ್ಗೆ ಕಾಂಗ್ರೆಸ್‌ ಪಕ್ಷದಲ್ಲಿರುವ ಕಾದು ನೀಡಬೇಕಾಗಿದೆ. 25 ವರ್ಷದ ಇತರೇ ಪಕ್ಷಗಳು ಆಡಳಿತ ನಡೆಸಲು ಅವಕಾಶ ನೀಡಬೇಕು. ಅತುರ ಮಾಡಬಾರದು. ಹತಾಶೆ ಯಿಂದ ಇಂಥ ಹೇಳಿಕೆಯನ್ನು ಕಾಂಗ್ರೆಸ್‌ನವರು ನೀಡುತ್ತಿದ್ದಾರೆ ಎಂದರು.

Advertisement

ಪ್ರಧಾನಿ ಬೆಂಗಳೂರಿಗೆ ಬಂದ ವೇಳೆ ಕಳಪೆ ಕಾಮಗಾರಿ ವಿಚಾರದ ಈಗಾಗಲೇ ಪ್ರಧಾನ ಮಂತ್ರಿಗಳೇ ವರದಿ ಕೇಳಿದ್ದಾರೆ. ಕಳಪೆ ಕಾಮಗಾರಿ ಆಗಿರುವುದನ್ನು ನಾನು ನೋಡಿಲ್ಲ. ಮಾಧ್ಯಮಗಳಲ್ಲಷ್ಟೇ ನೋಡಿದ್ದೇನೆ.ಎಲ್ಲರ ಮೇಲೂ ಆರೋಪ ಮಾಡುತ್ತಾರೆ. ಆದರೆ ಆರೋಪ ಸಾಬೀತಾಗೋದು ಕಷ್ಟ. ನನ್ನ ಕ್ಷೇತ್ರದಲ್ಲಿ ಕಾಮಗಾರಿ ನಡೆದಿಲ್ಲ. ಪಕ್ಕದ ಕ್ಷೇತ್ರದಲ್ಲಿ ನಡೆದಿದೆ, ನನ್ನ ಕ್ಷೇತ್ರದಲ್ಲಿ ಮೊದಲೆ ಕಾಮಗಾರಿ ಮಾಡಿಕೊಂಡಿದ್ದೇನೆ. ಪ್ರಧಾನ ಮಂತ್ರಿಗಳೇ ವರದಿ ಕೇಳಿರುವುದು ಹಾಗೂ ಸ್ವತಃ ಮುಖ್ಯಮಂತ್ರಿಗಳು ತನಿಖೆ ನಡೆಸಿ ಸೂಕ್ತ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದರಿಂದ ಯಾವುದನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಶಾಸಕ ಸಿ.ಎಸ್‌.ನಿರಂಜನಕುಮಾರ್‌, ಮುಖಂಡರಾದ ಅಮ್ಮನಪುರ ಮಲ್ಲೇಶ್‌, ಕೆ. ವೀರಭದ್ರಸ್ವಾಮಿ, ಕೊತ್ತಲವಾಡಿ ಕುಮಾರ್‌ ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next