Advertisement

6 ಸಾವಿರ ವೇತನಕ್ಕೆ ಒತ್ತಾಯಿಸಿ ಸಚಿವ ತಿಮ್ಮಾಪುರಗೆ ಮನವಿ

04:40 PM Dec 18, 2017 | Team Udayavani |

ಬಾಗಲಕೋಟೆ: ಆಶಾ ಕಾರ್ಯಕರ್ತೆಯರ ನ್ಯಾಯಬದ್ಧ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪ್ರಾಮಾಣಿಕವಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುವುದಾಗಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.

Advertisement

ನವನಗರದಲ್ಲಿರುವ ಡಾ| ಜಗಜೀವನರಾಂ ಭವನದಲ್ಲಿ ಹಮ್ಮಿಕೊಂಡ ಆಶಾ ಕಾರ್ಯಕರ್ತೆಯರ ಸಮಾವೇಶವನ್ನು ಉದ್ಘಾಟಿಸಿ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಮುಂದೆ ಬರುವ ಬಜಟ್‌ನಲ್ಲಿ ಕನಿಷ್ಠ 6 ಸಾವಿರ ವೇತನ ನಿಗದಿಪಡಿಸಬೇಕು ಎಂದು ನೀವು ನೀಡಿದ ಮನವಿ ಮೇರೆಗೆ ಆರೋಗ್ಯ ಸಚಿವರ ಭರವಸೆಯಂತೆ ನಾನು ಸಹ ಮುಖ್ಯಮಂತ್ರಿಗಳಲ್ಲಿ ನಿಮ್ಮ ಪರವಾಗಿ ಮಾತನಾಡಿ
ನಿಮ್ಮ ಬೇಡಿಕೆಗಳನ್ನು ಸ್ಪಂದಿಸುವುದಾಗಿ ತಿಳಿಸಿದರು. ಹಿಂದಿನ ಸರ್ಕಾರದ ಪ್ರಧಾನ ಮಂತ್ರಿಗಳಾದ ಮನಮೋಹನಸಿಂಗ್‌ ಅವರ
ಆಶಯದಂತೆ ಒಂದು ಸಾವಿರಕ್ಕೆ ಒಬ್ಬರು ಆಶಾ ಕಾರ್ಯಕರ್ತರು ಇರಬೇಕು ಎಂದು ನೇಮಕ ಮಾಡಿ ಜಾರಿಗೆ ತಂದಿದ್ದರಿಂದ ಇಂದು
ದೇಶದಲ್ಲಿ ಶಿಶು ಮರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ವರದಿಯಿಂದ ಕಂಡುಬರುತ್ತದೆ ಎಂದರು.

ಹಳ್ಳಿಗಳ ಪ್ರದೇಶದಲ್ಲಿ ಗರ್ಭಿಣಿಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಆಶಾ ಕಾರ್ಯಕರ್ತೆಯರ ಕಾರ್ಯವೈಖರಿಯಿಂದ ಇಂದು ಗರ್ಭಿಣಿಯರ ಸಮಸ್ಯೆಗಳು ಕಡಿಮೆಯಾಗಿವೆ ಎಂದರು. ಈಗಾಗಲೇ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ 3500
ರೂ. ವೇತನ ನೀಡುತ್ತಿದ್ದು, ನಿಮ್ಮ ಕುಟುಂಬ ನಿರ್ವಹಣೆಗೆ 3500 ರೂ. ಸಾಲುವುದಿಲ್ಲ. ಅದಕ್ಕಾಗಿ ನಿಮ್ಮ ಬೇಡಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು. ಇನ್ನೂ ಎರಡು, ಮೂರು ತಿಂಗಳಲ್ಲಿ ಚುನಾವಣೆ ಬರುತ್ತವೆ.
ರಾಜಕೀಯ ಪಕ್ಷಗಳು ಬಂದು ನಮ್ಮ ಸರ್ಕಾರ ಬಂದರೆ ನಿಮಗೆ 20 ಸಾವಿರಕ್ಕಿಂತ ಹೆಚ್ಚಿನ ವೇತನ ನೀಡುತ್ತೇವೆ ಎಂದರೆ ಅಂತಹ
ಆಶ್ವಾಸನೆ ನಂಬಬೇಡಿರಿ ಎಂದು ಆಶಾ ಕಾರ್ಯಕರ್ತರಿಗೆ ಹೇಳಿದರು.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಮಾತನಾಡಿ, ಆಶಾ ಕಾರ್ಯಕರ್ತರು
ನೇಮಕವಾಗುವ ಮುಂಚೆ ದೇಶದಲ್ಲಿ ಶಿಶು ಮರಣಗಳ ಸಂಖ್ಯೆ ಹೆಚ್ಚಾಗಿತ್ತು. ಇಂದು ಶಿಶು ಮರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದರು. ಗರ್ಭಿಣಿಯರು ಆರಂಭದಲ್ಲೇ ಆಶಾ ಕಾರ್ಯಕರ್ತರು ಗರ್ಭಿಣಿಯರನ್ನು ಭೇಟಿ ಮಾಡಿ ಅವರಿಗೆ ಹೆರಿಗೆಯಾಗುವರಿಗೂ ಅವರಿಗೆ ಉತ್ತಮ ಚಿಕಿತ್ಸೆ ಸಿಗುವ ವ್ಯವಸ್ಥೆಯನ್ನು ಮಾಡುತ್ತಾರೆ. ಅದಕ್ಕಾಗಿ ರಾಜ್ಯ ಸರ್ಕಾರ ತಕ್ಷಣ
ಕನಿಷ್ಠ 6000 ಸಾವಿರ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ಡಿ.ಎಚ್‌.ಓ.ಎ.ಎನ್‌ .ದೇಸಾಯಿ, ಎಐಯುಟಿಯುಸಿ
ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ, ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ, ಜಿಲ್ಲಾಧ್ಯಕ್ಷೆ ಅಂಜನಾ ಕುಂಬಾರ ಸೇರಿದಂತೆ
ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next