Advertisement

ಚುನಾವಣೆಗೂ ಮುನ್ನ ಕಾಂಗ್ರೆಸ್ ಒಡೆದು ಚೂರು ಚೂರಾಗಲಿದೆ: ಸಚಿವ ಉಮೇಶ್ ಕತ್ತಿ

02:16 PM Jul 26, 2022 | Team Udayavani |

ಆಲಮಟ್ಟಿ: ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿಗೆ ಹಿನ್ನಡೆಯಾದಾಗಲೊಮ್ಮೆ ಪ್ರತ್ಯೇಕ ಉತ್ತರ ಕರ್ನಾಟಕ ಧ್ವನಿ ಎತ್ತುವುದು ನನ್ನ ನಿಲುವಾಗಿದೆ ಎಂದು ಅರಣ್ಯ ಮತ್ತು ಆಹಾರ ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಹೇಳಿದರು.

Advertisement

ಮಂಗಳವಾರ ಆಲಮಟ್ಟಿ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಿರ್ಲಕ್ಷ್ಯ ವಹಿಸಿದಾಗ ಧ್ವನಿ ಎತ್ತುವುದು ನನ್ನ ಸ್ವಭಾವ. ಈ ಭಾಗದ ಶಾಸಕರು, ಸಚಿವರುಗಳು ನನ್ನ ಧ್ವನಿಗೆ ಬೆಂಬಲಿಸುತ್ತಾರೆ ಇದರಲ್ಲಿ ಸಂಶಯವಿಲ್ಲ. ಸ್ಪಂಧಿಸದೇ ಇದ್ದರೂ ನಾನು ಮಾತ್ರ ಉ.ಕ.ಅಭಿವೃದ್ಧಿಗೆ ಹಿನ್ನಡೆಯಾದರೆ ನಾನು ಸಹಿಸುವುದಿಲ್ಲ ಎಂದರು.

ಸಿ.ಎಂ.ಆಸೆ: ನಾನು ಈಗಾಗಲೇ 9 ಬಾರಿ ಶಾಸಕನಾಗಿದ್ದೇನೆ. ನನಗೀಗ 60ವರ್ಷ ವಯಸ್ಸಾಗಿದೆ. ಪಕ್ಷದ ನಿಯಮದಂತೆ ಇನ್ನೂ 15 ವರ್ಷ ಶಾಸಕನಾಗುತ್ತೇನೆ. ಅವಕಾಶ ಸಿಕ್ಕರೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಆಶಾವಾದ ವ್ಯಕ್ತಪಡಿಸಿದರು.

ಇದನ್ನೂ ಓದಿ: “ಕೆಜಿಎಫ್ ಚಾಪ್ಟರ್‌ 2” ಬಗ್ಗೆ ಕುತೂಹಲಕಾರಿ ವಿಚಾರ ಬಿಚ್ಚಿಟ್ಟ ಅಮೀರ್ ಖಾನ್

ಕಾಂಗ್ರೆಸ್ ಹುಚ್ಚರು: ಇನ್ನೂ ಚುನಾವಣೆ ಆಗಿಲ್ಲ, ಜನಾಶೀರ್ವಾದವನ್ನೂ ಮಾಡಿಲ್ಲ, ಆದರೂ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಹೊರಟಿದ್ದಾರೆ. ಅವರಿಗೆ ತಲೆ ಕೆಟ್ಟಿದೆ. ಚುನಾವಣೆಗೂ ಮುಂಚಿತವಾಗಿ ಕಾಂಗ್ರೆಸ್ ಒಡೆದು ಚೂರು ಚೂರಾಗಲಿದೆ. ಬಿಜೆಪಿಯು ಸದೃಢವಾಗಿದೆ. ಮುಂದೆಯೂ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಲಿದೆ ಎಂದು ಹೇಳಿದರು.

Advertisement

ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಲೊಮ್ಮೆ ಧ್ವನಿ ಎತ್ತುತ್ತೇನೆ. ಇದರಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next