Advertisement
ಈ ಕುರಿತು ಆದೇಶಿಸಿರುವ ಅವರು, ಪ್ರತಿ ತಿಂಗಳ 3ನೇ ಶನಿವಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸೇರಿದಂತೆ ಎಲ್ಲ ಅಧಿಕಾರಿಗಳು ತಾಲೂಕಿನ ಕೊನೇ ಹಳ್ಳಿವರೆಗೆ ಭೇಟಿ ನೀಡಬೇಕು. ವಿದ್ಯುತ್ ಅದಾಲತ್ ಮಾಡಿ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
Related Articles
Advertisement
ಸಹಾಯಕ ಕಾರ್ಯಪಾಲಕ ಇಂಜಿನಿಯರ್ರಿಂದ ವ್ಯವಸ್ಥಾಪಕ ನಿರ್ದೇಶಕರ ಮಟ್ಟದ ಅಧಿಕಾರಿಗಳೂ ಅಭಿಯಾನದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಆದ್ಯತೆ ಮೇರೆಗೆ ತಾಲೂಕಿನ ಗಡಿ ಭಾಗದ ಹಳ್ಳಿಗಳಿಂದ ಆರಂಭಿಸಿ, ಪ್ರತಿ ಹಳ್ಳಿಗೆ ಪ್ರತಿ ಹಳ್ಳಿಗೆ ಅಭಿಯಾನ ವಿಸ್ತರಿಸಬೇಕು ಎಂದು ವಿವರಿಸಿದ್ದಾರೆ.
ವಿವಿಧ ಹಂತದ ಅಧಿಕಾರಿಗಳು ಒಂದೇ ಹಳ್ಳಿಗೆ ಭೇಟಿ ನೀಡದೆ, ಬೇರೆ ಹಳ್ಳಿಗಳಿಗೆ ಭೇಟಿ ನೀಡಿ, ಅಭಿಯಾನವನ್ನು ಕಾಲಮಿತಿಯಲ್ಲಿ ಮುಕ್ತಾಯಗೊಳಿಸಬೇಕು. ಅಭಿಯಾನದ ವಿವರಗಳನ್ನು ಪ್ರತಿ ತಿಂಗಳು ನಿಗದಿತ ನಮೂನೆಯಲ್ಲಿ ನಮೂದಿಸಿ, ಮಾಹಿತಿಯನ್ನು ಸಂಬಂಧಪಟ್ಟ ವ್ಯವಸ್ಥಾಪಕ ನಿರ್ದೇಶಕರಿಗೆ ಕಳುಹಿಸಬೇಕು. ವ್ಯವಸ್ಥಾಪಕ ನಿರ್ದೇಶಕರು ಪ್ರತಿ 3ನೇ ಸೋಮವಾರ ತಪ್ಪದೇ emg 1 energy@gpail.com ಇ-ಮೇಲ್ ಮೂಲಕ ಸರ್ಕಾರಕ್ಕೆ ಕಳುಹಿಸಬೇಕೆಂದು ಆದೇಶಿಸಿದ್ದಾರೆ.