ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋವಿಡ್ 19 ಸೋಂಕು ದೃಢವಾದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ವಯಂ ಐಸೋಲೇಶನ್ ಗೆ ಒಳಗಾಗಿದ್ದಾರೆ.
ಈ ಬಗ್ಗೆ ಸಚಿವ ಸುಧಾಕರ್ ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಪ್ರಾಥಮಿಕ ಸಂಪರ್ಕಿತನಾದ್ದರಿಂದ ನಾನು ಎರಡು ದಿನಗಳ ಕಾಲ ಸ್ವಯಂ ಪ್ರೇರಿತನಾಗಿ ಐಸೋಲೇಶನ್ ಗೆ ಒಳಪಡುತ್ತಿದ್ದೇನೆ. ಇಂದು ಸಂಜೆ ಮಾಡಿಸಿದ ಅಬೋಟ್ ಐಡಿ ಬೌ ಪರೀಕ್ಷೆಯಲ್ಲಿ ನೆಗಟಿವ್ ಬಂದಿದ್ದು, 2 ದಿನಗಳ ನಂತರ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಡಲಿದ್ದೇನೆ ಎಂದಿದ್ದಾರೆ.
ನನಗೆ ಯಾವುದೇ ರೀತಿಯ ರೋಗ ಲಕ್ಷಣಗಳಿಲ್ಲದಿದ್ದರೂ, ಇತರರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ನೈತಿಕ ಜವಾಬ್ದಾರಿ ಹೊತ್ತು ಮುಂದಿನ ಎರಡು ದಿನಗಳ ಕಾಲ ನಾನು ಪ್ರತ್ಯೇಕವಾಗಿರಲಿದ್ದೇನೆ. ನನ್ನ ಎಲ್ಲ ಅಧಿಕೃತ ಕಾರ್ಯಕ್ರಮಗಳು ರದ್ದಾಗಿದ್ದು, ಸಭೆ, ಕಡತ ವಿಲೇವಾರಿ ಕಾರ್ಯಗಳನ್ನು ವರ್ಚ್ಯುಯಲ್ ಮಾಧ್ಯಮಗಳ ಮೂಲಕ ಮುಂದುವರಿಸಲಿದ್ದೇನೆ. ಆದ್ದರಿಂದ ಮುಂದಿನ ಎರಡು ದಿನಗಳ ಕಾಲ ನನ್ನನ್ನು ಭೌತಿಕವಾಗಿ ಭೇಟಿ ಮಾಡಲು ಯಾರೂ ಬರಬಾರದೆಂದು ಮನವಿ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ಎಲ್ಲ ಜಿಲ್ಲೆಗಳಲ್ಲೂ “ಅಂತ್ಯೋದಯ’ ಜಾರಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಎರಡು ದಿನಗಳ ನಂತರ ಆರ್ ಟಿ-ಪಿಸಿಆರ್ ಪರೀಕ್ಷೆ ಮಾಡಿಸಿ ವರದಿ ನೆಗಟಿವ್ ಬಂದಲ್ಲಿ ಬುಧವಾರದಿಂದ ಎಂದಿನಂತೆ ನನ್ನ ಕಾರ್ಯ-ಕಲಾಪಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.