Advertisement

ಬಿಎಸ್ ವೈ ಆಪ್ತನ ನಿವಾಸದ ಮೇಲಿನ ಐಟಿ ದಾಳಿ ಬಗ್ಗೆ ರಾಜಕೀಯ ಬಣ್ಣ ಸರಿಯಲ್ಲ: ಸಚಿವ ಸೋಮಣ್ಣ

02:10 PM Oct 07, 2021 | Team Udayavani |

ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಪ್ತನ ನಿವಾಸದ ಮೇಲಿನ ಆದಾಯ ತೆರಿಗೆ (ಐಟಿ) ದಾಳಿ ಬಗ್ಗೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

Advertisement

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಐಟಿ ದಾಳಿ ಸಹಜವಾದ ಪ್ರಕ್ರಿಯೆಯಾಗಿದೆ‌. ಇದು ಸ್ವಾಭಾವಿಕ ವಿಷಯ. ಈ ದಾಳಿ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಐಟಿ ದಾಳಿಗೂ ಮತ್ತು ಬಿಎಸ್ ವೈ ಆಪ್ತ ಎಂಬುವುದಕ್ಕೂ ಸಂಬಂಧ ಕಲ್ಪಿಸುವುದು ಸಲ್ಲದು ಎಂದು ಹೇಳಿದರು.

ಆರ್ ಎಸ್ಎಸ್ ಬಗ್ಗೆ ಜಗತ್ತಿನಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಭಾರತದಲ್ಲಿ ಸ್ವಾರ್ಥವಿಲ್ಲದೇ ಸೇವೆ ಸಲ್ಲಿಸುವ ಏಕೈಕ ಸಂಘಟನೆ ಎಂದರೆ ಅದು ಆರ್ ಎಸ್ಎಸ್ ಮಾತ್ರ. ಇಂತಹ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಎಂದು ಗೊತ್ತಿಲ್ಲ ಎಂದರು.

ಇದನ್ನೂ ಓದಿ:ಬಿಎಸ್ ವೈ ಆಪ್ತನ ನಿವಾಸದ ಮೇಲೆ ಐಟಿ ದಾಳಿ, ಬಿಜೆಪಿ ‘ಆಂತರಿಕ ವಿಷಯ’ ಇರಬಹುದು: ಎಚ್ಡಿಕೆ

ಸಿಂದಗಿ ಮತ್ತು ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಸಿಂದಗಿ ಅಭ್ಯರ್ಥಿಗೆ ನಾನು ತೆಗೆದುಕೊಂಡು ಹೋಗಿ ಬಿ-ಫಾರಂ ವಿತರಣೆ ಮಾಡುತ್ತಿದ್ದೇನೆ. ನಾಳೆ ನಮ್ಮ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸೋಮಣ್ಣ ಮಾಹಿತಿ ನೀಡಿದರು.

Advertisement

ಆಕ್ಸಿಜನ್ ಘಟಕಗಳ ಉದ್ಘಾಟನೆ: ನಂತರ ಜಿಮ್ಸ್ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಲಾದ ಎರಡು ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸಚಿವರಾದ ಸೋಮಣ್ಣ ಮತ್ತು ಸಿ.ಸಿ.ಪಾಟೀಲ ಉದ್ಘಾಟಿಸಿದರು.

ಪಿಎಂ ಕೇರ್ಸ್ ಅನುದಾನದಲ್ಲಿ ಸ್ಥಾಪಿಸಲಾದ 1 ಸಾವಿರ ಎಲ್ ಪಿಎಂ ಮತ್ತು ಎಲ್ ಆ್ಯಂಡ್ ಟಿ ಕಂಪನಿಯ ಸಿ ಎಸ್ಆರ್ ನಿಧಿಯಲ್ಲಿ ಸ್ಥಾಪಿಸಲಾದ 500 ಎಲ್ ಪಿಎಂ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ್, ಶಾಸಕ ಬಸವರಾಜ ಮತ್ತಿಮಡು, ಎಂಎಲ್ ಸಿ ಬಿ.ಜಿ.ಪಾಟೀಲ, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ.ಶಫಿಯೋದ್ಧಿನ್, ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next