Advertisement

Ramayana: ರಾಮಾಯಣ ಮಹಾಕಾವ್ಯ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ :ಸಿದ್ದು ಸವದಿ

12:43 PM Oct 28, 2023 | Team Udayavani |

ರಬಕವಿ-ಬನಹಟ್ಟಿ : ರಾಮಾಯಣ ಮಹಾಕಾವ್ಯ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

Advertisement

ಅವರು ಶನಿವಾರ ನಗರದ ರಬಕವಿ-ಬನಹಟ್ಟಿ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತವಾಗಿ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಮಾರಂಭದಲ್ಲಿ ಮಾತನಾಡಿದರು.

ರಾಮಾಯಣದಲ್ಲಿ ಬರುವ ಆದರ್ಶಗಳನ್ನು ಕುಟುಂಬದವರು ಜೀವನದಲ್ಲಿ ಅಳವಡಿಸಿಕೊಂಡರೆ ಮಾದರಿ ಹಾಗೂ ಆದರ್ಶ ಜೀವನ ನಡೆಸಬಹುದಾಗಿದೆ. ವಾಲ್ಮೀಕಿಯ ತತ್ವ ಆದರ್ಶ ಮತ್ತು ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ರಾಮಾಯಣದ ಮಹಾಕಾವ್ಯದಲ್ಲಿ ಬರುವಂತಹ ಹಲವಾರು ದೃಷ್ಟಾಂತಗಳನ್ನು ಇಂದಿನ ಮಕ್ಕಳಿಗೆ ಕಥೆಗಳ ರೂಪದಲ್ಲಿ ಹೇಳಿದರೆ ಅವರಿಗೆ ಅನುಕೂಲವಾಗುತ್ತದೆ. ಭಾರತದ ಮಹಾಕಾವ್ಯಗಳು ಮೌಲ್ಯಗಳಿಂದ ತುಂಬುವ ಮಹಾಕಾವ್ಯಗಳಾಗಿದ್ದು ಇದನ್ನು ಜಗತ್ತಿಗೆ ರಾಮಾಯಣದ ಮೂಲಕ ವಾಲ್ಮೀಕಿಯವು ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ ಗಿರೀಶ ಸ್ವಾದಿ, ಉಪತಹಶೀಲ್ದಾರ ಎಸ್. ಎಲ್. ಕಾಗಿಯವರ, ಕಂದಾಯ ನಿರೀಕ್ಷಕರಾದ ಪ್ರಕಾಶ ಮಠಪತಿ, ಸದಾಶಿವ ಕುಂಬಾರ, ನಗರಸಭೆಯ ಅಭಿಯಂತರರಾದ ರಾಘವೇಂದ್ರ ಕುಲಕರ್ಣಿ, ಶಿಕ್ಷಣ ಸಂಯೋಜಕರಾದ ಬಿ. ಎಂ. ಹಳೇಮನಿ, ಸಮಾಜ ಕಲ್ಯಾಣ ಇಲಾಖೆಯ ಮಂಜುನಾಥ ಆಲಗೂರ, ತುಕಾರಾಮ ಉಪ್ಪಾರ, ವಸಂತ ಹಿರೇಮಠ, ಮಂಜುಳಾ ಹಲಗಲಿ, ಸುಬಾಸ ಲಮಾಣಿ, ಜಯಾ ಲಿಂಗದಳ್ಳಿ, ರೇಷ್ಮೇ ಇಲಾಖೆಯ ರವಿ ಹುಕ್ಕೇರಿ, ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ರಮೇಶ ಮೆಳ್ಳಿಗೇರಿ, ಕಾಡಪ್ಪ ಮಂಟೂರ, ಸುರೇಶ ವಾಲಿಕಾರ, ಕಾಶಿರಾಮ ನಾಯಕ, ಪರಸಪ್ಪ ನಾಯಕ, ಶ್ರೀಶೈಲ ಹಲಗಲಿ, ವಿಶ್ವನಾಥ ಬಡಚಿ, ಮಹಾದೇವ ನಾಯಕ, ರಾಮಣ್ಣ ದಳವಾಯಿ ಸೇರಿದಂತೆ ಅನೇಕರು ಇದ್ದರು.

Advertisement

ಇದನ್ನೂ ಓದಿ: Special Drive: ತ್ರಿಬಲ್ ರೈಡ್, ಮಕ್ಕಳಿಂದ ದ್ವಿಚಕ್ರ ವಾಹನ ಚಾಲನೆ ತಡೆಗೆ ಸ್ಪೇಷಲ್ ಡ್ರೈವ್

Advertisement

Udayavani is now on Telegram. Click here to join our channel and stay updated with the latest news.

Next