ಕಾಗವಾಡ: ಬಡ ಕುಟುಂಬದ ಮಕ್ಕಳ ವೈದ್ಯಕೀಯ ವೆಚ್ಚಕ್ಕೆ ಚೆಕ್ ಮೂಲಕ ಹಣ ವಿತರಿಸಿ ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲರ ಜನ್ಮದಿನವನ್ನು ಸಚಿವರ ಆಪ್ತ ಸಹಾಯಕ ಪ್ರಶಾಂತ್ ಅಪರಾಜ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಉಗಾರ ಖುರ್ದ ಪಟ್ಟಣದ ಬಡ ಚಾಲಕ ಸಲೀಮ್ ಮುಲ್ಲಾ ಇವರ ಇಬ್ಬರು ಮಕ್ಕಳಾದ ಆಸ್ಮಾ ಹಾಗೂ ಶಾದಾಬ ಹುಟ್ಟಿನಿಂದ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು,ರಕ್ತಹೀನತೆಯಿಂದಾಗಿ ಪ್ರತಿ ತಿಂಗಳು ರಕ್ತ ನೀಡಬೇಕು. ಆದರೆ ಸಲೀಮ್
ಮುಲ್ಲಾಗೆ ವೆಚ್ಚ ಭರಿಸುವುದು ಕಠಿಣವಾಗಿತ್ತು. ಈ ವಿಷಯವನ್ನು ಸಚಿವರ ಆಪ್ತ ಸಹಾಯಕ ಪ್ರಶಾಂತ ಅಪರಾಜ ಅವರ ಗಮನಕ್ಕೆ ತಂದಾಗ ಅವರು ಸಚಿವರೊಂದಿಗೆ ಚರ್ಚಿಸಿದರು. ವಿಷಯದ ಗಂಭೀರತೆ ಅರಿತ ಸಚಿವರು ಹಾಗೂ ಯುವ ಮುಖಂಡ ಶ್ರೀನಿವಾಸ ಪಾಟೀಲರ ಸೂಚನೆಯ ಮೇರೆಗೆ ಚಾಲಕ ಸಲಿಂ ಮುಲ್ಲಾ ಅವರ ಮನೆ ಬಾಗಿಲಿಗೆ ಹೋಗಿ ಚೆಕ್ ವಿತರಿಸಲಾಯಿತು.
ಇದನ್ನೂ ಓದಿ :ರಾಜ್ಯ ಸರ್ಕಾರದ ವಿರುದ್ಧ ಒನಕೆ ಪ್ರದರ್ಶನ
ಶ್ರೀಮಂತ ತಾತ್ಯಾ ಪಾಟೀಲ ಫೌಂಡೇಶನ್ ಹಾಗೂ ಯುವ ಬ್ರಿಗೇಡ್ ಮುಖಾಂತರ ಆ ಇಬ್ಬರು ಚಿಕ್ಕ ಮಕ್ಕಳ ಒಂದು ವರ್ಷಕ್ಕೆ ತಗಲುವ ಸಂಪೂರ್ಣ ವೈದ್ಯಕೀಯ ವೆಚ್ಚದ ಚೆಕ್‌ನ್ನು ಮಕ್ಕಳಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದರು. ಈ ವೇಳೆ ಸಚಿವರ ಆಪ್ತ ಸಹಾಯಕ ಪ್ರಶಾಂತ ಅಪರಾಜ, ಯುವ ಬ್ರಿಗೇಡ್ ಮುಖಂಡರಾದ ರಾಜು ಮುಜಾವರ,ಮಹಾಂತೇಶ ಮದನೆ, ಪ್ರವೀಣಅಪರಾಜ, ಕೃಷ್ಣಾ-ಕಿತ್ತೂರ ಪಿಕೆಪಿಎಸ್‌ಅಧ್ಯಕ್ಷ ವಿಶ್ವನಾಥ ಪಾಟೀಲ, ಬಿಜೆಪಿಮುಖಂಡರಾದ ಗುರುಪಾದಮಗದುಮ್, ವಿಶ್ವನಾಥ ಗಿರಮಲ್ಲ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.