Advertisement
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಆತ್ಮನಿರ್ಭರ ಭಾರತ ಹಾಗೂ ಪ್ರಸಕ್ತ ವರ್ತಮಾನ ಕೇಂದ್ರ ಬಜೆಟ್ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
Related Articles
Advertisement
ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇದ್ದರೆ ಎಷ್ಟೂ ಕಾಮಗಾರಿ ತರಬಹುದು. ಕುಮಟಾ, ಗೋಕರ್ಣ, ಪಾಳಾ, ದಾಸನಕೊಪ್ಪ, ಬನವಾಸಿ, ಕುಮಟಾ ಅಳವೆಕೋಡಿ, ಶಿರಾಲಿ, ಮಂಕಿ ಸೇರಿದಂತೆ ಹಲವೆಡೆ ಅನೇಕ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಸರಕಾರದ ಮುಂದೆ ಪ್ರಸ್ತಾವನೆ ಇದೆ. ಜಿಲ್ಲೆಯ ಪ್ರವಾಸಿ ತಾಣಗಳ ಆಕರ್ಷಣೆಗೆ ನೇವಿ ವಿಮಾನ ನಿಲ್ದಾಣ ನಾಗರಿಕ ವಿಮಾನ ನಿಲ್ದಾಣವಾಗುತ್ತದೆ. ಅಲ್ಲಿ ಜಾಗ ಬಿಟ್ಟುಕೊಟ್ಟ ರೈತರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಅವರಿಗೆ ಪರಿಹಾರ ಕೂಡ ಕೇಂದ್ರ ಸರಕಾರದ ನೂತನ ಮಾನದಂಡದಂತೆ ಒದಗಿಸಲಾಗುತ್ತದೆ ಎಂದರು.
ಉತ್ತರ ಕನ್ನಡ ಜಿಲ್ಲೆ ಇಬ್ಭಾಗ ಕುರಿತು ಎಲ್ಲ ಶಾಸಕರ, ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಮುಂದುವರಿಯುತ್ತೇವೆ. ಈಗಲೇ ಏನೂ ಹೇಳುವುದಿಲ್ಲ. ಮೊನ್ನೆ ಕಂದಾಯ ಸಚಿವರು 18 ಶಾಸಕರು ಇರುವ ಬೆಳಗಾವಿಯನ್ನೇ ವಿಭಾಗಿಸಲು ಆಗಿಲ್ಲ ಎಂದೂ ಹೇಳಿದ್ದಾರೆ. ನಾನೂ ಚರ್ಚೆ ಮಾಡಿ ತಿಳಿಸುವೆ. ಅದು ಪûಾತೀತವಾಗಿ ಚರ್ಚೆ ಆಗಬೇಕಾದ್ದು ಎಂದ ಹೆಬ್ಟಾರ್, ಕೇಂದ್ರ ಸರಕಾರದ ಬಜೆಟ್ ಶ್ಲಾಘಿಸಿ, ರಾಜ್ಯದಲ್ಲೂ ರೈತ ಪರ ಬಜೆಟ್ ಬರಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ ಅವರು ವಿಶ್ವದ ಮಾರುಕಟ್ಟೆಗೆ ಭಾರತ ಒಯ್ಯಬೇಕಾದ ಸಿದ್ಧತೆ ಮಾಡಿದ್ದಾರೆ. ರೈತರ ಆರ್ಥಿಕತೆ ಎತ್ತರಿಸುವ ಬಜೆಟ್ ಕೂಡ ಇದಾಗಿದೆ. ಆರೋಗ್ಯ, ವಿದ್ಯುತ್, ರಾಷ್ಟ್ರಯ ಹೆದ್ದಾರಿ, ರೈಲ್ವೆಗೂ ಆದ್ಯತೆ ಇದೆ. ಕೇಂದ್ರ ರಾಜ್ಯ ಸರಕಾರಗಳು ರೈತ ವಿರೋಧಿಯಲ್ಲ. ಅವರಿಗೆ ಅನುಕೂಲ ಆಗುವ ಕೆಲಸವನ್ನೇ ಸರಕಾರ ಮಾಡುತ್ತಿವೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಬಜೆಟ್ ಕೂಡ ಅನ್ನದಾತನನ್ನ ಎತ್ತಿ ಹಿಡಿಯುವ ಹಾಗೂ ಸ್ವಾಭಿಮಾನಿ ರಾಜ್ಯ, ದೇಶ, ಸ್ವಾಭಿಮಾನಿ ರೈತ ಕುರಿತಾದ ಬಜೆಟ್ ಆಗಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ, ನಿಕಟಪೂರ್ವ ಅಧ್ಯಕ್ಷ ಕೆ.ಜಿ. ನಾಯ್ಕ, ಮಾಜಿ ಶಾಸಕ ಸುನೀಲ ಹೆಗಡೆ, ಮಾಧ್ಯಮ ವಕ್ತಾರ ನಾಗರಾಜ್ ನಾಯ್ಕ, ಸಹ ವಕ್ತಾರ ಸದಾನಂದ ಭಟ್ಟ, ಡಾನಿ ಡಿಸೋಜಾ, ಆರ್.ಡಿ. ಹೆಗಡೆ, ಚಂದ್ರು ಎಸಳೆ ಇತರರು ಇದ್ದರು.