Advertisement

ಗೋವಾ ರಾಜ್ಯದ ರಾಜಕಾರಣ ವಿರುದ್ಧ ಸಚಿವ ಸತ್ಯೇಂದ್ರ ಜೈನ್ ವಾಗ್ದಾಳಿ

06:53 PM Jul 27, 2021 | Team Udayavani |

ಪಣಜಿ: ರಾಜ್ಯದಲ್ಲಿನ ಮಂತ್ರಿಗಳಿಗೆ 5000 ಯೂನಿಟ್ ಅಥವಾ ದಕ್ಕಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವ ಸವಲತ್ತಿದೆ. ಆದರೆ ಗೋವಾದ ಜನಸಾಮಾನ್ಯರಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡಲು ಏಕೆ ಸಾಧ್ಯವಾಗುವುದಿಲ್ಲ..? ಎಂದು ದೆಹಲಿಯ ಇಂಧನ ಸಚಿವ ಸತ್ಯೇಂದ್ರ ಜೈನ್ ಗೋವಾ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

Advertisement

ಪಣಜಿಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾಡನಾಡಿದ ಅವರು- ಗೋವಾದಲ್ಲಿ ಶೇ 87 ರಷ್ಟು ಗ್ರಾಹಕರು ಗೃಹಬಳಕೆಯ ವಿದ್ಯುತ್ ಬಳಸುತ್ತಿದ್ದು, ಇವರ ಗೃಹ ಬಳಕೆಯ ವಿದ್ಯುತ್ ಸುಮಾರು 300 ಯೂನಿಟ್ ಆಸುಪಾಸಿನಲ್ಲಿದೆ. ಸರ್ಕಾರಿ ನಿವಾಸಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ, ಆದರೆ ರಾಜ್ಯದ ಜನರಿಗೆ ಏಕೆ ಉಚಿತ ವಿದ್ಯುತ್ ಇಲ್ಲ…? ಗೋವಾ ರಾಜ್ಯದ ರಾಜಕಾರಣ “ಥರ್ಡ್ ಕ್ಲಾಸ್” ರಾಜಕಾರಣವಾಗಿದೆ ಎಂದು ಸತ್ಯೇಂದ್ರ ಜೈನ್ ಠೀಕಾ ಪ್ರಹಾರ ನಡೆಸಿದರು.

ಗೋವಾಕ್ಕೆ ಅಪಮಾನ ಮಾಡಿದಂತೆ…

ಗೋವಾದ ರಾಜಕಾರಣವನ್ನು ಆಮ್ ಆದ್ಮಿ ಪಕ್ಷವು ಥರ್ಡ್ ಕ್ಲಾಸ್ ಎಂದು ಹೇಳಿರುವುದು ಗೋವಾದ ಮಾಜಿ ಮುಖ್ಯಮಂತ್ರಿಗಳಾದ ಬಾವುಸಾಹೇಬ್ ಬಾಂದೋಡಕರ್, ಮನೋಹರ್ ಪರೀಕರ್, ರಾಜೇಂದ್ರ ಅರ್ಲೇಕರ್, ಶ್ರೀಪಾದ ನಾಯ್ಕ ರವರಂತಹ ಭೂಮಿಪುತ್ರರಿಗೆ ಅಪಮಾನ ಮಾಡಿದಂತೆ ಇಂತಹ ಅಪಮಾನವನ್ನು ನಾವು ಸಹಿಸುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಪ್ರತಿಕ್ರಯಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next