Advertisement

ಕಾಶಿ ದರ್ಶನ ವಿಶೇಷ ರೈಲು ಯಾತ್ರಿಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಸ್ವಾಗತ

07:35 PM Nov 13, 2022 | Team Udayavani |

ವಾರಾಣಸಿ: ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ವಿಶೇಷ ರೈಲಿನ ಮೊದಲ ಟ್ರಿಪ್ ನ ಯಾತ್ರಾರ್ಥಿಗಳನ್ನು ಹೊತ್ತಂತಹ ರೈಲು ಭಾನುವಾರ ವಾರಾಣಸಿಗೆ ಬಂದು ತಲುಪಿತು. ಬನಾರಸ್ ರೈಲು ನಿಲ್ದಾಣದಲ್ಲಿ ಯಾತ್ರಾರ್ಥಿಗಳಿಗೆ ಆತ್ಮೀಯ ಸ್ವಾಗತವನ್ನು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ನೀಡಿದರು.

Advertisement

ಪ್ರಥಮ ಟ್ರಿಪ್ ನ ಯಾತ್ರಾರ್ಥಿಗಳು ತಮ್ಮನ್ನು ಸ್ವಾಗತಿಸಲು ಆಗಮಿಸಿದ್ದ ಸಚಿವರನ್ನು ಕಂಡು ಸಂತಸಗೊಂಡರು. ರೈಲು ಪ್ರಯಾಣ ದಲ್ಲಿ ಅವರಿಗೆ ಸಿಕ್ಕಂತಹ ಅತಿಥ್ಯದ ಬಗ್ಗೆ ಸಚಿವ ರಿಗೆ ಮಾಹಿತಿ ನೀಡಿದರು.

ಎರಡು ದಿನಗಳ ಕಾಲ ವಾರಾಣಸಿಯಲ್ಲಿ ವಾಸ್ತವ್ಯ ಹೂಡಲಿರುವ ಯಾತ್ರಾರ್ಥಿಗಳು ನಂತರ ಪ್ರಯಾಗರಾಜ್ ಮತ್ತು ಅಯೋಧ್ಯೆ ಗೆ ಭೇಟಿ ನೀಡಿ ನಂತರ ಬೆಂಗಳೂರಿಗೆ ವಾಪಸ್ ಮರಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next