Advertisement

ಗೋಪೂಜೆ ಮಾಡಿ ನೇಗಿಲು ಹಿಡಿದ ಸಚಿವೆ ಶಶಿಕಲಾ ಜೊಲ್ಲೆ

04:36 PM Apr 04, 2022 | Team Udayavani |

ಚಿಕ್ಕೋಡಿ: ಯುಗಾದಿ ಹಬ್ಬವನ್ನು ಧಾರ್ಮಿಕ ದಿನವನ್ನಾಗಿ ಸರಕಾರ ಘೋಷಿಸಿದ್ದು, ಪ್ರಥಮ ಧಾರ್ಮಿಕ ದಿನದ ರಾಜ್ಯಮಟ್ಟದ ಕಾರ್ಯಕ್ರಮ ನಿಪ್ಪಾಣಿಯ ಶ್ರೀ ವಿರೂಪಾಕ್ಷ ಲಿಂಗ ಸಮಾಧಿ ಮಠದಲ್ಲಿ ಶನಿವಾರ ಅದ್ದೂರಿಯಾಗಿ ನಡೆಯಿತು.

Advertisement

ಮುಜರಾಯಿ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಅವರು, ಸಾಂಪ್ರದಾಯಿಕ ಪೂಜೆ-ಪುನಸ್ಕಾರ ಮೂಲಕ ಯುಗಾದಿಯಂದು ಧಾರ್ಮಿಕ ದಿನವನ್ನು ಆಚರಿಸಿದರು. ಗೋ ಪೂಜೆ, ಲಕ್ಷ್ಮೀ ಪೂಜೆ ಮಾಡಿದ ಜೊಲ್ಲೆ ದಂಪತಿಗಳು ನಂತರ ನೇಗಿಲು ಹಿಡಿದು ಬಿತ್ತನೆ ಮಾಡುವ ಮೂಲಕ ಹಬ್ಬವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ ಅವರು, ಯುಗಾದಿ ಹಬ್ಬವನ್ನು ಇನ್ನು ಮುಂದೆ ಪ್ರತಿವರ್ಷ ಸರಕಾರದ ವತಿಯಿಂದ ಧಾರ್ಮಿಕ ದಿನವಾಗಿ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯ ನಿಪ್ಪಾಣಿಯ ಸಮಾಧಿ ಮಠದಲ್ಲಿ ಸರ್ಕಾರದಿಂದಲೇ ಕಾರ್ಯಕ್ರಮ ಆಯೋಜನೆ ಮಾಡಿ ಪ್ರಥಮಬಾರಿಗೆ ಧಾರ್ಮಿಕ ದಿನ ಆಚರಣೆ ಆರಂಭಿಸಲಾಗಿದೆ ಎಂದು ಹೇಳಿದರು.

Advertisement

ಸಚಿವೆ ಶಶಿಕಲಾ ಜೊಲ್ಲೆ ಅವರಿಂದ ವಚನಗಾಯನ: ಇದೇ ವೇಳೆ ಸಚಿವೆ ಶಶಿಕಲಾ ಜೊಲ್ಲೆ ಅವರು ಹುಕ್ಕೇರಿಶನ ವಚನ ಗಾಯನ ಹಾಗೂ ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಹಾಡು ಹಾಡುವ ಮೂಲಕ ಹಿಂದೂ ಸಂಪ್ರದಾಯದ ಹೊಸ ವರ್ಷಾಚರಣೆಯ ಮಹತ್ವ ತಿಳಿಸಿದರು.

ವಿಜಯಪೂರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಹಂಚನಾಳ ಭಕ್ತಿ ಯೋಗಾಶ್ರಮದ ಶ್ರೀಮಹೇಶನಾನಂದ ಸ್ವಾಮೀಜಿ, ನಿಪ್ಪಾಣಿ ಸಮಾ ಧಿಮಠದ ಪ್ರಾಣಲಿಂಗ ಸ್ವಾಮೀಜಿ, ಬಾಗಲಕೋಟ ಸಂಸದ ಪಿ.ಸಿ.ಗದ್ದಿಗೌಡರ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next