Advertisement

ಸಾಗರ ಆರ್ಥಿಕತೆ, ಮೂಲಸೌಕರ್ಯಕ್ಕೆ ವಿಶೇಷ ಒತ್ತು: ಸಚಿವ ಸರ್ಬಾನಂದ ಸೋನೋವಾಲ್‌

12:46 AM Jun 27, 2022 | Team Udayavani |

ಮಂಗಳೂರು: ಸಾಗರತೀರ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಸಾಗರ ಅರ್ಥಿಕತೆಯ ಸಂರಕ್ಷಣೆ ಮತ್ತು ಉತ್ತೇಜನ ಪ್ರಧಾನಿ ನರೇಂದ್ರ ಮೋದಿ ಯವರ ಗುರಿಯಾಗಿದ್ದು ಈ ನಿಟ್ಟಿನಲ್ಲಿ ಆವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಬಂದರು, ನೌಕಾಯಾನ ಹಾಗೂ ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್‌ ಹೇಳಿದ್ದಾರೆ.

Advertisement

ಭಾರತ ನೀಲಿ ಅರ್ಥಿಕತೆಯನ್ನು ಉತ್ತೇಜಿಸಿ ಸಾಗರ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಮಡಿಕೇರಿಯಲ್ಲಿ ಬಂದರು, ನೌಕಾಯಾನ ಹಾಗೂ ಜಲಸಾರಿಗೆ ಸಚಿವಾಲಯ ಹಮ್ಮಿ ಕೊಂಡಿರುವ ಮೂರು ದಿನಗಳ ಚಿಂತನ ಸಭೆಯನ್ನು (ಚಿಂತನ ಬೈಠಕ್‌) ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಾಗರ ಆರ್ಥಿಕತೆ ಸಮರ್ಥ ಬಳಕೆ
ಸಾಗರದಲ್ಲಿ ಆರ್ಥಿಕತೆಗೆ ಇರುವ ವಿಪುಲ ಅವಕಾಶಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕರಾವಳಿ ಪ್ರದೇಶಗಳ ಅಭಿವೃದ್ಧಿ, ಕರಾವಳಿಯ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಸಾಗರ ಆರ್ಥಿಕತೆಯನ್ನು ಸಂರಕ್ಷಿಸಿ ಉತ್ತೇಜಿಸುವ ಗುರಿಯನ್ನು ಸಚಿವಾಲಯ ಹೊಂದಿದೆ.

ಆತ್ಮನಿರ್ಭರ ಭಾರತ ಸಾಕಾರದ ನಿಟ್ಟಿನಲ್ಲಿ ಸಾಗರ ಅರ್ಥಿಕತೆಯ ಸಮರ್ಥ ಬಳಕೆಗಾಗಿ ಸರ್ವ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಸ್ತುತ ಆಯೋಜಿಸಿರುವ ಚಿಂತನ ಬೈಠಕ್‌ನಲ್ಲಿ ಸಾಗರ ಆರ್ಥಿಕತೆಯಲ್ಲಿ ಅವಕಾಶಗಳು, ಸವಾಲುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ.

Advertisement

ಇದರ ಆಧಾರದಲ್ಲಿ ಮುಂದಿನ ಯೋಜನೆಗಳ ನೀಲ ನಕಾಶೆಯನ್ನು ಸಿದ್ಧಪಡಿಸಲಾಗುವುದು ಮತ್ತು ಬಂದರುಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ಹೊಸ ತಂತ್ರಜ್ಞಾನ ಅಳವಡಿಕೆ ಅಗತ್ಯ
ಕೇಂದ್ರ ಬಂದರು, ನೌಕಾಯಾನ ಹಾಗೂ ಜಲಸಾರಿಗೆ ಖಾತೆಯ ಸಹಾಯಕ ಸಚಿವ ಶ್ರೀಪಾದ ನಾಯಕ್‌ ಮಾತನಾಡಿ, ಬಂದರುಗಳಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆಗೆ ವಿಶೇಷ ಆದ್ಯತೆ ನೀಡುವುದು ಇಂದಿನ ಆವಶ್ಯಕತೆ ಎಂದರು. ಇನ್ನೋರ್ವ ಸಹಾಯಕ ಸಚಿವ ಶಂತನು ಠಾಕೂರ್‌ ದೇಶದ ನೌಕಾ ಯಾನ ಕ್ಷೇತ್ರದ ಸಾಮರ್ಥ್ಯ, ಜಲಸಾರಿಗೆ ಅವಕಾಶಗಳ ಬಗ್ಗೆ ವಿವರಿಸಿದರು.

ನವಮಂಗಳೂರು ಬಂದರು ಪ್ರಾಧಿ ಕಾರದ ಅಧ್ಯಕ್ಷ ಎ.ವಿ. ರಮಣ, ದೇಶದ ಎಲ್ಲ ಬೃಹತ್‌ ಬಂದರು ಪ್ರಾಧಿಕಾರಗಳ ಅಧ್ಯಕ್ಷರು, ಸಚಿವಾಲಯದ ಉನ್ನತ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.

157 ರಸ್ತೆ, 137 ರೈಲು ಮಾರ್ಗ ಅಭಿವೃದ್ಧಿ
ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಬಹುಮಾದರಿ ಸಂಪರ್ಕ ಯೋಜನೆಯ ಪರಿ ಣಾಮಕಾರಿ ಅನುಷ್ಠಾನಕ್ಕಾಗಿ ಬಂದರುಗಳಿಗೆ ಬಹುಸಂಪರ್ಕ ಮಾದರಿಗಳನ್ನು ಉತ್ತೇಜಿ ಸುವ ನಿಟ್ಟಿನಲ್ಲಿ 157 ರಸ್ತೆ ಸಂಪರ್ಕ ಹಾಗೂ 137 ರೈಲು ಸಂಪರ್ಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದದಲ್ಲದೆ ಬಂದರುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ಸೋನೋವಾಲ್‌ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next