Advertisement

ಸಚಿವರಿಂದ ಟಾಂಗಾದಲ್ಲಿ ನಗರ ಪ್ರದಕ್ಷಿಣೆ

10:35 AM Oct 14, 2021 | Team Udayavani |

ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಬುಧವಾರ ಸಂಜೆ ಟಾಂಗಾದಲ್ಲಿ ನಗರ ಪ್ರದಕ್ಷಿಣೆ ಹಾಕುವ ಮೂಲಕ ಪ್ರವಾಸಿಗರಿಗೆ ಟಾಂಗಾ ಸವಾರಿ ಮಾಡಲು ಪ್ರೇರೇಪಿಸಿದರು. ಒಂದು ಕಾಲದಲ್ಲಿ ಸಾರಿಗೆ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದ ಟಾಂಗಾ ಸವಾರಿ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ.

Advertisement

ಅದರಲ್ಲೂ ದಸರಾ ಸಂದರ್ಭದಲ್ಲಿ ಟಾಂಗಾದಲ್ಲಿ ಮೈಸೂರು ಸುತ್ತುವ ಪ್ರವೃತ್ತಿ ಕಡಿಮೆಯಾಗುತ್ತಿರುವ ದಿನಗಳಲ್ಲಿ ಸಚಿವರ ಟಾಂಗಾ ಸವಾರಿ ಮೈಸೂರಿನ ಜನತೆಯನ್ನು ಆಕರ್ಷಿಸಿತು. ನಗರದ ಸರ್ಕಾರಿ ಅತಿಥಿಗೃಹದಿಂದ ಅರಮನೆ ವೇದಿಕೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಟಾಂಗಾದಲ್ಲಿ ಆಗಮಿಸಿದ ಸಚಿವರು ನಗರದ ದೀಪಾಲಂಕಾರ, ದಸರಾ ನೋಡಲು ಆಗಮಿಸಿದ ಪ್ರವಾಸಿಗರನ್ನು ಕಂಡು ಸಂತಸಪಟ್ಟರು.

ಇದನ್ನೂ ಓದಿ;- ಪ್ರಭಾರ ಯುವಸಬಲೀಕರಣ,ಕ್ರೀಡಾಧಿಕಾರಿ ಹುದ್ದೆಯಿಂದ ದೈಹಿಕ ಶಿಕ್ಷಣ ಶಿಕ್ಷಕರ ನಿಯೋಜನೆ ರದ್ದು

ಸಚಿವರ ಟಾಂಗಾ ಸವಾರಿಗೆ ಮುಡಾ ಅಧ್ಯಕ್ಷ ಎಚ್‌.ವಿ. ರಾಜೀವ್‌, ಅರಣ್ಯ ವಸತಿ ಮತ್ತು ಮತ್ತು ವಿಹಾರಧಾಮಗಳ ಸಂಸ್ಥೆಗಳ ಅಧ್ಯಕ್ಷ ಅಪ್ಪಣ್ಣ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್‌ ಗೂಳಿಗೌಡ ಸೇರಿದಂತೆ ಹಲವರು ಜೊತೆಯಾದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next