Advertisement
ಇಂದು (ಫೆ.22) ಬೆಂಗಳೂರಿನ ಆದಿಚುಂಚನಗಿರಿ ಮಠದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಪಟ್ಟ ನಾಯಕನ ಹಳ್ಳಿ ಸ್ಫಟಿಕ ಪುರಿ ಮಠಾಧೀಶ ಶ್ರೀ ನಂಜಾವಧೂತ ಸ್ವಾಮೀಜಿ ಮತ್ತು ಇತರ ಮುಖಂಡರಿಂದ ಮನವಿ ಸ್ವೀಕರಿಸಿದ ನಂತರ ಸಚಿವರು ಮಾತನಾಡಿದರು.
Related Articles
Advertisement
ಒಕ್ಕಲಿಗ ಸಮುದಾಯಕ್ಕೇ 3 ಎ ಅಡಿಯಲ್ಲಿ ಶೇಕಡಾ 7ರಷ್ಟು ಮೀಸಲಾತಿ ಸಿಗುತ್ತಿದೆ. ಈ ಪ್ರವರ್ಗಕ್ಕೆ ಒಕ್ಕಲಿಗ ರೈತರ ಜಾತಿಗಳನ್ನು ಸೇರ್ಪಡೆ ಮಾಡಲಾಗಿದೆ. ಅಲ್ಲದೆ ಒಕ್ಕಲಿಗ ಜನ ಸಂಖ್ಯೆ ಶೇಕಡಾ 17 ರಷ್ಠಿದ್ದು ಮೀಸಲಾತಿಯನ್ನು ಶೇಕಡಾ ಹತ್ತರಷ್ಟು ಹೆಚ್ಚಳ ಮಾಡಲು ಬೇಡಿಕೆ ಸಲ್ಲಿಸಲಾಗಿದೆ. ಹಿಂದಿನ ಸರಕಾರ ನಡೆಸಿದ್ದ ಜಾತಿ ಸಮೀಕ್ಷೆಯನ್ನು ಒಪ್ಪಿಕೊಳ್ಳಬಾರದು ಎಂದೂ ಮನವಿ ಮಾಡಲಾಗಿದೆ. ಈ ಎಲ್ಲ ಮನವಿ ಕುರಿತು ಮುಖ್ಯಮಂತ್ರಿ ಮತ್ತು ಸರಕಾರದ ಜತೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಶೋಕ್ ಭರವಸೆ ನೀಡಿದರು.
ಮನವಿ ಸಲ್ಲಿಸಿ ಮಾತನಾಡಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಒಕ್ಕಲಿಗ ಸಮುದಾಯಕ್ಕೆ ತ್ವರಿತವಾಗಿ ಪ್ರಾಧಿಕಾರ ರಚನೆ ಮಾಡಲೇಬೇಕು, ಸಮುದಾಯದ ಎಲ್ಲ 115 ಪಂಗಡಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ರಾಜ್ಯ ಸರಕಾರ, ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು. ಸದ್ಯ ಕೆಲವೇ ಪಂಗಡಗಳನ್ನು ಸೇರ್ಪಡೆ ಮಾಡಲಾಗಿದೆ. ಇದರಿಂದ ಎಲ್ಲ 115 ಉಪ ಜಾತಿಗಳಿಗೆ ನ್ಯಾಯ ಸಿಗುತ್ತಿಲ್ಲ ಎಂದರು.
ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಗ್ರಾಮೀಣ ಒಕ್ಕಲಿಗ ಸಮುದಾಯಗಳನ್ನು ಮಾತ್ರ ಸೇರ್ಪಡೆ ಮಾಡಲಾಗಿದೆ. ನಗರ ಪ್ರದೇಶಗಳ ಲ್ಲಿಯೂ ಬಡವರು ಇದ್ದಾರೆ. ಉದಾಹರಣೆಗೆ ಬೆಂಗಳೂರಿನಲ್ಲಿ ಆರ್ಥಿಕ ಚಟುವಟಿಕೆಗಳಿಗಾಗಿ ಭೂಮಿ ಕಳೆದು ಕೊಂಡ ಲಕ್ಷಾಂತರ ಒಕ್ಕಲಿಗರು ಇಂದು ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅವರಿಗೂ ನ್ಯಾಯ ಒದಗಿಸಬೇಕು. ಆದ್ದರಿಂದ ನಗರ ಪ್ರದೇಶದ ಒಕ್ಕಲಿಗರನ್ನು ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು. ಹಿಂದಿನ ಸರಕಾರ ನಡೆಸಿರುವ ಜಾತಿ ಸಮೀಕ್ಷೆ ಯಾವುದೇ ಕಾರಣಕ್ಕೂ ಸರಕಾರ ಒಪ್ಪಿಕೊಳ್ಳಬಾರದು. ಈ ವರದಿ ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದರು.
ಶ್ರೀ ನಂಜಾವಧೂತ ಸ್ವಾಮೀಜಿ ಮಾತನಾಡಿ ಶೀಘ್ರವೇ ಪ್ರಾಧಿಕಾರ ರಚಿಸಿ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು. ಒಕ್ಕಲಿಗರ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಸರಕಾರ ಪೂರಕವಾಗಿ ಸ್ಪಂದಿಸಬೇಕು. ಕೃಷಿಯನ್ನೇ ನಂಬಿಕೊಂಡ ಒಕ್ಕಲಿಗ ಇಂದು ಅತಂತ್ರನಾಗಿದ್ದಾನೆ. ಆದ್ದರಿಂದ ಜನಸಂಖ್ಯೆ ಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕು ಮತ್ತು ನಿಗಮ ರಚನೆ ಆಗಲೇ ಬೇಕು ಎಂದು ಒತ್ತಾಯಿಸಿದರು.
ಸರಕಾರದ ಪರವಾಗಿ ಉಪ ಮುಖ್ಯಮಂತ್ರಿ ಡಾಕ್ಟರ್ ಸಿ.ಎನ್. ಅಶ್ವತ್ಥ ನಾರಾಯಣ, ಸಚಿವರಾದ ಅಶೋಕ್ ಮತ್ತು ನಾರಾಯಣ ಗೌಡ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಎಸ್.ಆರ್. ವಿಶ್ವನಾಥ್, ಸತೀಶ್ ರೆಡ್ಡಿ, ಅ.ದೇವೇಗೌಡ, ಪುಟ್ಟಣ್ಣ ಮಸಾಲೆ ಜಯರಾಂ, ರಾಜೇಶ್ ಗೌಡ, ಚಿದಾನಂದ, ವೈ. ಎ. ನಾರಾಯಣ ಸ್ವಾಮಿ ವೈಕೆ ಪುಟ್ಟಸ್ವಾಮಿಗೌಡ ನ್ಯಾಯಮೂರ್ತಿಗಳಾದ ಜೆವೈಕೆ ಪುಟ್ಟಸ್ವಾಮಿಗೌಡ ನ್ಯಾಯಮೂರ್ತಿಗಳಾದ ಎ ಜೆ ಸದಾಶಿವ ಚಂದ್ರಶೇಖರಯ್ಯ ,ಟಿ ವೆಂಕಟೇಶ್, ಶಂಕರಲಿಂಗೇಗೌಡ, ಅಮರನಾರಾಯಣ್, ತಿಮ್ಮೇಗೌಡ, ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀಗಳು ಸಮಾಜ ಹಿರಿಯ ಮುಖಂಡರು ಮತ್ತು ನಿವೃತ್ತ ಅಧಿಕಾರಿ ಗಳೊಂದಿಗೆ ಸಮಾಜದ ಬೇಡಿಕೆಗಳನ್ನು ಕುರಿತು ಸಮಾಲೋಚನೆ ನಡೆಸಿದರು.